IPL 2024: ಮಹಾಕಾಲೇಶ್ವರ ದರ್ಶನ ಪಡೆದ ಕನ್ನಡಿಗ ಕೆ.ಎಲ್ ರಾಹುಲ್: ದೇವರ ದರ್ಶನದಿಂದ ಖುಲಾಯಿಸುತ್ತದೆ ಅದೃಷ್ಟ!
ಐಪಿಎಲ್ 2024 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಶುಕ್ರವಾರ ಚೆನ್ನೈನ ಚೆಪಾಕ್ ಅಂಗಳದಲ್ಲಿ ಐಪಿಎಲ್‌ಗೆ ಚಾಲನೆ ಸಿಗಲಿದೆ. ಈ ಟೂರ್ನಿಗಾಗಿ ಸ್ಟಾರ್ ಆಟಗಾರರು ಈಗಾಗಲೇ ಭರ್ಜರಿ ತಯಾರಿ ನಡೆಸಿದ್ದಾರೆ. ಲಖ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಉಜ್ಜಯಿನಿಯ ಮಹಾಕಾಲೇಶ್ವರ ಆಶಿರ್ವಾದ ಪಡೆದರು.
ಕನ್ನಡಿಗ ಕೆಎಲ್ ರಾಹುಲ್ ಮಹಾಕಾಲೇಶ್ವರ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದರು. ಐಪಿಎಲ್ ಆರಂಭಕ್ಕೂ ಮುನ್ನವೇ ರಾಹುಲ್ ಟೆಂಪಲ್‌ಗೆ ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ. ಸತತ ಎರಡು ಬಾರಿ ಲಖ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿರುವ ರಾಹುಲ್, ತಂಡಕ್ಕೆ ಚೊಚ್ಚಲ ಟ್ರೋಫಿ ತೊಡಿಸುವ ಕನಸು ಕಾಣುತ್ತಿದ್ದಾರೆ.

ಗಾಯದಿಂದ ಅಂಗಳಕ್ಕೆ
ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಗಾಯಕ್ಕೆ ತುತ್ತಾಗಿದ್ದ ರಾಹುಲ್ ಬಹು ದಿನಗಳಿಂದ ಅಂಗಳದಿಂದ ದೂರ ಉಳಿದಿದ್ದರು. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಪರ ಆಡಿದ್ದ ರಾಹುಲ್, ಗಾಯಕ್ಕೆ ತುತ್ತಾದರು. ಅಲ್ಲಿಂದ ಇವರು ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದರು. ಬಳಿಕ ಎನ್‌ಸಿಎ ಇವರನ್ನು ಫಿಟ್ ಎಂದು ಘೋಷಿಸಿದ ಬೆನ್ನಲ್ಲೆ, ಲಖ್ನೋ ತಂಡವನ್ನು ಸೇರಲು ಸನ್ನದ್ಧರಾಗಿದ್ದಾರೆ.
ಫೋಟೋ ವೈರಲ್
ಕೆಎಲ್ ರಾಹುಲ್ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಬಹುದು. ಇದರ ನಂತರ ಅವರು ಇಡೀ ಋತುವಿನಲ್ಲಿ ಲಭ್ಯವಿರುತ್ತಾರೆ. ಆದರೆ, ಅಷ್ಟರಲ್ಲಿ ಕೆಎಲ್ ರಾಹುಲ್ ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನ ತಲುಪಿದರು. ಕೆಎಲ್ ರಾಹುಲ್ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಕ್ರಿಕೆಟ್ ಆಟಗಾರರು ಉಜ್ಜಯಿನಿಯ ಮಹಾಕಾಲೇಶ್ವರ್ ದರ್ಶನಕ್ಕೆ ಹೋಗುತ್ತಲೇ ಇರುತ್ತಾರೆ. ಸ್ಟಾರ್ ಆಟಗಾರರು ದೇವರ ದರ್ಶನಕ್ಕೆ ಹೋದಾಗಲೆಲ್ಲಾ ಒಳ್ಳೆಯ ಸುದ್ದಿ ಸಿಕ್ಕಿದ್ದಂತೂ ಸುಳ್ಳಲ್ಲ. ಇದಕ್ಕೆ ಉದಾಹರಣೆ ವಿರಾಟ್ ಕೊಹ್ಲಿ..
ಬಾಬಾ ದರ್ಶನದ ಬಳಿಕ ಖುಲಾಯಿಸಿದ ಅದೃಷ್ಟ
ಇಂದೋರ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ, ಉಜ್ಜಯಿನಿಯ ಮಹಾಕಾಲೇಶ್ವರ್ ದೇವರ ಸನ್ನಿಧಿಗೆ ತೆರಳಿದರು. ಅಲ್ಲದೆ ವಿರಾಟ್ ಕೊಹ್ಲಿ ಬ್ರಾಹ್ಮಿ ಮೂಹರ್ತದಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು . ಪತ್ನಿ ಅನುಷ್ಕಾ ಜೊ ತೆಗೆ ವಿರಾ ಟ್ ಮಹಾಕಾಲನ ದರ್ಶನ ಪಡೆದ್ರು . ಸಾಂಪ್ರದಾಯಿಕ ಉಡುಗೆಯಲ್ಲಿ ಪತ್ನಿ ಸಮೆತ ವಿರಾಟ್ ದೇವರಲ್ಲಿ ಪೂಜೆ ಸಲ್ಲಿಸಿದರು. ಬ್ರಹ್ಮಿ ಮೂಹರ್ತದಲ್ಲಿ ಜರುಗುವ ಭಸ್ಮಾರತಿಯಲ್ಲೂ ವಿರಾಟ್ ಭಾಗವಹಿಸಿದ್ದರು.
ಉಜ್ಜಯಿನಿಯ ಬಾಬಾ ಮಹಾಕಾಲನ್ನು ಪೂಜಿಸುವವರು ಎಲ್ಲಿಯೂ ಸೋಲು ವುದಿಲ್ಲ ಅಥವಾ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಮಾತಿದೆ. ವಿರಾಟ್ ಕೊಹ್ಲಿ ವಿಷಯದಲ್ಲಿ ಈ ವಿಷಯ ನಿಜವೆಂದು ಸಾಬೀ ತಾಗಿದೆ. ವಿರಾಟ್ ಕೊಹ್ಲಿಗೆ 1205 ದಿನಗಳಿಂದ ಮಾಯಾ ಜಿಂಕೆಯಂತೆ ಕಾ ಡಿದ್ದ ಟೆಸ್ಟ್ ಶತಕ, ಕೊನೆಗೂ ದೇವರ ದರ್ಶನದ ಬಳಿಕ ಕೈ ಗೂಡಿದೆ.
ಐಪಿಎಲ್‌ನಲ್ಲಿ ರಾಹುಲ್ ಸಾಧನೆ
ಕೆಎಲ್ ರಾಹುಲ್ 118 ಐಪಿಎಲ್ ಪಂದ್ಯಗಳನ್ನು ಆಡಿದ್ದು, 134.42 ಸ್ಟ್ರೈಕ್ ರೇಟ್ ಮತ್ತು 46.78 ರ ಸರಾಸರಿಯೊಂದಿಗೆ 4163 ರನ್ ಗಳಿಸಿದ್ದಾರೆ. ಕೆಎಲ್ ರಾಹುಲ್ ಐಪಿಎಲ್ ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದಾರೆ. ಇದಲ್ಲದೇ 33 ಬಾರಿ ಅರ್ಧಶತಕ ಬಾರಿಸಿದ್ದಾರೆ.. ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ಪರ ಕಣಕ್ಕೆ ಇಳಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications