Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Unsung Hero: ಲಕ್ನೋ ಜಯದಲ್ಲಿ ಮಿಂಚಿದ ದಿಗ್ವೇಶ್ ರಾಠಿ

ಲಕ್ನೋ ಸೂಪರ್‌ ಜೈಂಟ್ಸ್ ತವರಿನಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಟಾಸ್‌ ಸೋತರೂ ಸಂಘಟಿತ ಆಟವನ್ನು ಪ್ರದರ್ಶಿಸಿದ ಎಲ್‌ಎಸ್‌ಜಿ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಎಲ್‌ಎಸ್‌ಜಿ 12 ರನ್‌ಗಳಿಂದ ಮುಂಬೈ ಇಂಡಿಯನ್ಸ್ ಮಣಿಸಿ ಆರ್ಭಟಿಸಿದೆ. ಈ ಮೂಲಕ ಎಲ್‌ಎಸ್‌ಜಿ ಪೂರ್ಣ ಎರಡು ಅಂಕ ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ 6ನೇ ಸ್ಥಾನವನ್ನು ಪಡೆದಿದೆ. ಈ ಗೆಲುವಿನಲ್ಲಿ ಹುಡುಕುತ್ತಾ ಹೋದರೆ ಹಲವು ಹಿರೋಗಳು ಸಿಗುತ್ತಾರೆ. ಆದರೆ ಆ ಭರವಸೆಯ ಸ್ಪಿನ್ ದಿಗ್ವೇಶ್ ರಾಠಿ ಬೌಲರ್‌ ಮೊಡಿ ಸ್ಪೆಲ್ ಮಾಡಿ ಅಬ್ಬರಿಸಿದ್ದಾರೆ.

ಲಕ್ನೋನ ಎಕಾನಾ ಅಂಗಳದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಎಲ್‌ಎಸ್‌ಜಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 203 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 191 ರನ್‌ ಕಲೆ ಹಾಕಿ ಟೂರ್ನಿಯಲ್ಲಿ ಮೂರನೇ ಸೋಲು ಕಂಡಿದೆ. ಈ ಮೂಲಕ ಹಾರ್ದಿಕ್ ಪಡೆ ಆಘಾತ ಅನುಭವಿಸಿದೆ.

LSG Clinch First Home Win with 12-Run Victory Over Mumbai Indians Digvesh Rathi Shines

25 ವರ್ಷದ ದಿಗ್ವೇಶ್ ರಾಠಿ ಮುಂಬೈ ವಿರುದ್ದದ ಪಂದ್ಯದಲ್ಲಿ ಅಮೋಘ ಬೌಲಿಂಗ್ ನಡೆಸಿದರು. ರಿಷಭ್‌ ಪಂತ್‌ ಇವರ ಬೌಲಿಂಗ್ ಮೇಲೆ ಭರವಸೆ ಇಟ್ಟು ಇವರಿಗೆ ಪವರ್‌ ಪ್ಲೇನ ಕೊನೆಯ ಓವರ್‌ನಲ್ಲಿ ಬೌಲ್ ನೀಡಿದರು. ಈ ವೇಳೆ ದಿಗ್ವೇಶ್‌ ಕೇವಲ 5 ರನ್‌ ನೀಡಿ ಮುಂಬೈ ಬ್ಯಾಟರ್‌ಗಳನ್ನು ಕಾಡಿದರು.

ದಿಗ್ವೇಶ್ ಕಮಾಲ್

9ನೇ ಓವರ್ ಬೌಲ್‌ ಮಾಡಲು ಬಂದ ದಿಗ್ವೇಶ್‌ ಮೊದಲ ಎಸೆತದಲ್ಲೇ ಯಶ ಕಂಡರು. ಭರ್ಜರಿ ಬ್ಯಾಟಿಂಗ್ ಮಾಡ್ತಾ ಇದ್ದ ನಮನ್‌ ಧೀರ್‌ಗೆ 96 ಕಿಲೋಮೀಟರ್‌ನಲ್ಲಿ ಲೆಗ್ ಬ್ರೇಕ್ ಹಾಕಿದ ದಿಗ್ವೇಶ್‌ ಅವರ ಎಸೆತವನ್ನು ಅರಿಯುವಲ್ಲಿ ಮುಂಬೈ ಬ್ಯಾಟರ್ ವಿಫಲರಾಗಿ ಬೋಲ್ಡ್ ಆದರು. ತಮ್ಮ ಕೋಟಾದ ಎರಡನೇ ಓವರ್‌ನಲ್ಲೂ ಬಿಗುವಿನ ದಾಳಿ ನಡೆಸಿ ಕೇವಲ 3 ರನ್‌ ನೀಡಿದರು. ಇನ್ನು 12ನೇ ಓವರ್‌ ಬೌಲಿಂಗ್ ನಡೆಸಿಯೂ ಸೂರ್ಯಕುಮಾರ್ ಯಾದವ್, ತಿಲಕ್‌ ವರ್ಮಾ ಅವರನ್ನು ಕಾಡಿದರು. ಅಲ್ಲದೆ ಈ ಓವರ್‌ನಲ್ಲಿ ಕೇವಲ 2 ರನ್‌ ನೀಡಿದರು.

ಇವರ ಇನ್ನೊಂದು ಓವರ್ ಬಾಕಿ ಇತ್ತು ಇದನ್ನು ನಾಯಕ ಡೆತ್‌ ಓವರ್‌ನಲ್ಲಿ ಪ್ರಯೋಗಿಸಲು ಮುಂದಾದರು. ಈ ವೇಳೆ ಮುಂಬೈಗೆ ಮೂರು ಓವರ್‌ಗಳಲ್ಲಿ 40 ರನ್‌ ಬೇಕಿತ್ತು. ಇನಿಂಗ್ಸ್‌ನ 18ನೇ ಓವರ್‌ನಲ್ಲಿ 11 ರನ್‌ ನೀಡಿದ ದಿಗ್ವೇಶ್‌ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಒಟ್ಟಾರೆ ತಮ್ಮ 4 ಓವರ್‌ನಲ್ಲಿ ದಿಗ್ವೇಶ್‌ ಕೇವಲ 21 ರನ್‌ ನೀಡಿ 1 ವಿಕೆಟ್‌ ಪಡೆದು ಮಿಂಚಿದರು.

Story first published: Friday, April 4, 2025, 23:45 [IST]
Other articles published on Apr 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+