ಐಪಿಎಲ್‌ನಲ್ಲಿ (IPL 2025) ಪ್ಲೇಆಫ್ ಆಸೆಯನ್ನು ಕಾಣುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಮವಾರ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ರಿಷಭ್ ಪಂತ್ ಪಡೆ ಜಯ ಸಾಧಿಸಿದೆ, ಮುಂದಿನ ಹಂತದ ಆಸೆ ಜೀವಂತವಾಗುತ್ತದೆ. ಹೀಗಾಗಿ ಈ ಪಂದ್ಯ ಎಲ್‌ಎಸ್‌ಜಿಗೆ ಮಹತ್ವದಾಗಿದೆ. ಈ ಪಂದ್ಯ ಲಕ್ನೋನಲ್ಲಿ ನಡೆಯಲಿದ್ದು, ಎಲ್‌ಎಸ್‌ಜಿ (LSG) ಪಂದ್ಯ ಗೆಲ್ಲುವ ಕನಸು ಕಾಣುತ್ತಿದೆ.
ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಭರವಸೆ ಮೂಡಿಸಿದ್ದಾರೆ. ಎಸ್‌ಆರ್‌ಎಚ್ (SRH) ತಂಡ ಈಗಾಗಲೇ ಪ್ಲೇ ಆಫ್ ರೇಸ್‌ನಿಂದಲೇ ದೂರ ಉಳಿದಿದೆ. ಸನ್ ಆಡಿದ 11 ಪಂದ್ಯಗಳಲ್ಲಿ 7 ಅಂಕಗಳನ್ನು ಕಲೆ ಹಾಕಿದೆ. ಹೀಗಾಗಿ ಮುಂದಿನ ಹಂತದ ಕನಸಿನಿಂದ ದೂರ ನಿಂತಿದೆ. ಇನ್ನು ಎಲ್‌ಎಸ್‌ಜಿ ಆಡಿದ 11 ಪಂದ್ಯಗಳಲ್ಲಿ 5 ಜಯ ಸಾಧಿಸಿದ್ದು, 10 ಅಂಕಗಳನ್ನು ಕಲೆ ಹಾಕಿದ್ದು 10 ಅಂಕಗಳನ್ನು ಕಲೆ ಹಾಕಿದೆ. ರಿಷಭ್ ಪಂತ್ ಪಡೆ ಮುಂದಿನ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದರೆ, 16 ಅಂಕಗಳನ್ನು ಕಲೆ ಹಾಕಿ ಪ್ಲೇ ಆಫ್ ಪ್ರವೇಶಿಸುವ ಕನಸು ಕಾಣಬಹುದು. ಆಗಲೂ ಎಲ್‌ಎಸ್‌ಜಿ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಿಲ್ಲ. ಆಗಲೂ ರನ್ ರೇಟ್ ಇಂಪಾರ್‌ಟೆಂಟ್ ಆಗುತ್ತದೆ.

ಎಲ್‌ಎಸ್‌ಜಿ ತಂಡಕ್ಕೆ ಗೆಲುವೊಂದು ಟಾರ್ಗೆಟ್ ಆಗಿದೆ. ಆರಂಭಿಕರಾದ ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್ ಉತ್ತಮ ಜೊತೆಯಾಟದ ಕಾಣಿಕೆ ನೀಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪುರನ್ ತಮ್ಮ ಅನುಭವ ಬಳಸಿಕೊಂಡು ಬ್ಯಾಟ್ ಮಾಡಬೇಕಿದೆ. ಅಂದಾಗ ಮಾತ್ರ ಪವರ್ ಪ್ಲೇನಲ್ಲಿ ಪವರ್ ಫುಲ್ ಆರಂಭ ಪಡೆಯಬಹುದು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಆಯುಷ್ ಬಡೋನಿ ಸ್ಥಿರ ಪ್ರದರ್ಶನ ನೀಡುತ್ತಿದ್ದು ಭರವಸೆ ಮೂಡಿಸಿದ್ದಾರೆ. ಆದರೆ ನಾಯಕ ರಿಷಭ್ ಪಂತ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು ತಂಡದ ಚಿಂತೆಯನ್ನು ಹೆಚ್ಚಿಸಿದೆ.
ಎಲ್‌ಎಸ್‌ಜಿ ತಂಡದಲ್ಲಿ ಸ್ಟಾರ್ ಬೌಲರ್‌ಗಳ ದಂಡೇ ಇದೆ. ಆದರೆ ಈ ಬೌಲರ್‌ಗಳು ಬಿಗುವಿನ ದಾಳಿ ನಡೆಸುವ ಅವಶ್ಯಕತೆ ಇದೆ. ವೇಗದ ಬೌಲಿಂಗ್ ವಿಭಾಗವನ್ನು ಶಾರ್ದೂಲ್ ಠಾಕೂರ್, ಪ್ರಿನ್ಸ್ ಯಾದವ್ ಮುನ್ನಡೆಸುವ ಸಾಧ್ಯತೆ ಇದೆ. ಇವರು ಪವರ್ ಪ್ಲೇನಲ್ಲಿ ಬಿಗುವಿನ ದಾಳಿ ನಡೆಸಬೇಕಿದೆ. ಇನ್ನು ಸ್ಪಿನ್ ಬೌಲರ್‌ಗಳಾದ ರವಿ ಬಿಷ್ಣೋಯ್, ದಿಗ್ವೇಶ್ ರಾಠಿ ಸರಿಯಾದ ಸ್ಥಳದಲ್ಲಿ ಬೌಲಿಂಗ್ ನಡೆಸಿ ಎದುರಾಳಿಗಳನ್ನು ಕಾಡಬೇಕಿದೆ. ಅಂದಾಗ ಮಾತ್ರ ಗೆಲುವು ಸಾಧಿಸಬಹುದು.

ಎಸ್‌ಆರ್‌ಎಚ್ ತಂಡದ ಟ್ರಾವಿಸ್ ಹೆಡ್ ಕೋವಿಡ್‌ಗೆ ತುತ್ತಾಗಿದ್ದರಿಂದ ಇವರು ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯುವುದು ಡೌಟ್. ಇನ್ನು ಟಾಪ್ ಆರ್ಡರ್ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುವ ಅನಿವಾರ್ಯತೆ ಇದೆ. ಇನ್ನು ಬೌಲರ್‌ಗಳು ಸರಿಯಾಗಿ ಬೌಲಿಂಗ್ ನಡೆಸಬೇಕಿದೆ. ಅಂದಾಗ ಎಸ್‌ಆರ್‌ಎಚ್ ನಾಲ್ಕನೇ ಗೆಲುವಿನ ನಗೆ ಬೀರಬಹುದು.