LSG IPL 2024: ರಾಹುಲ್ ಪಡೆ ಸೇರಿದ ಕಿವೀಸ್ ಪೇಸರ್; ಇಂಗ್ಲೆಂಡ್ ಬೌಲರ್ ಔಟ್
ಈಗಾಗಲೇ ಐಪಿಎಲ್ ಆರಂಭವಾಗಿದೆ. ಎಲ್ಲ ತಂಡಗಳೂ ಸಹ ಸ್ಥಿರ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕುವತ್ತ ಚಿತ್ತ ನೆಟ್ಟಿವೆ. ಈ ನಿಟ್ಟಿನಲ್ಲಿ ಲಖ್ನೋ ಸೂಪರ್ ಜೈಂಟ್ಸ್ ಸಹ ತನ್ನ ಕಾರ್ಯವನ್ನು ಮಾಡುತ್ತಿದೆ. ಮೂರನೇ ಆವೃತ್ತಿಯ ಐಪಿಎಲ್ ಆಡುತ್ತಿರುವ ಎಲ್‌ಎಸ್‌ಜಿ ಮೊದಲ ಕಪ್ ಗೆಲುವಿನ ಕನಸಿನೊಂದಿಗೆ ಅಂಗಳಕ್ಕೆ ಇಳಿಯುತ್ತಿದೆ.
ಎಲ್‌ಸಿಜಿ ಕ್ಯಾಂಪ್‌ನಿಂದ ಹೊಸ ಸುದ್ದಿಯೊಂದು ಬಂದಿದೆ. ಈ ಸುದ್ದಿ ನಿಜಕ್ಕೂ ಅವರ ಅಭಿಮಾನಿಗಳಿಗೆ ಖುಷಿ ನೀಡೋದಂತು ಸುಳ್ಳ ಅಲ್ಲ. ಐಪಿಎಲ್ 2024ರಲ್ಲಿ ಲಖ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದ ಇಂಗ್ಲೆಂಡ್ ವೇಗದ ಬೌಲರ್ ಡೇವಿಡ್ ವಿಲ್ಲಿ ತಂಡವನ್ನು ತೊರೆದಿದ್ದಾರೆ. ವಿಲ್ಲಿ ಅವರನ್ನು ಲಕ್ನೋ 2 ಕೋಟಿ ರೂಪಾಯಿಗೆ ಖರೀದಿಸಿತು. ಆದರೆ ಇದೀಗ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ.

ವಿಲ್ಲಿ ಬದಲಿಗೆ ತಂಡ ಸೇರಿದ್ದು ಯಾರು?
ಇಂಗ್ಲೆಂಡ್ ವೇಗದ ಬೌಲರ್ ವಿಲ್ಲಿ ಬದಲಿಗೆ ಲಕ್ನೋ ನ್ಯೂಜಿಲೆಂಡ್ ವೇಗದ ಬೌಲರ್ ಮ್ಯಾಟ್ ಹೆನ್ರಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. 1.25 ಕೋಟಿ ಮೂಲ ಬೆಲೆಗೆ ಹೆನ್ರಿ ಅವರನ್ನು ಸೂಪರ್ ಜೈಂಟ್ಸ್ ತಂಡಕ್ಕೆ ಸೇರಿಸಿಕೊಂಡಿದ್ದಾರೆ. "ನ್ಯೂಜಿಲೆಂಡ್ ವೇಗದ ಬೌಲರ್ ಮ್ಯಾಟ್ ಹೆನ್ರಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ 2024 ಗಾಗಿ ಲಕ್ನೋ ಸೂಪರ್ ಜೈಂಟ್ಸ್‌ನೊಂದಿಗೆ ಸಹಿ ಹಾಕಿದ್ದಾರೆ ಎಂದು ಎಲ್‌ಎಸ್‌ಜಿ ತಿಳಿಸಿದೆ.
ಮ್ಯಾಟ್ ಹೆನ್ರಿ ಈ ಹಿಂದೆಯೂ ಐಪಿಎಲ್‌ನ ಭಾಗವಾಗಿದ್ದಾರು. ಅವರು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಹೆನ್ರಿ ಐಪಿಎಲ್‌ನಲ್ಲಿ 2 ಪಂದ್ಯಗಳನ್ನು ಆಡಿದ್ದಾರೆ.

ಹೆನ್ರಿ ಪ್ರದರ್ಶನ
ಮ್ಯಾಟ್ ಹೆನ್ರಿ ನ್ಯೂಜಿಲೆಂಡ್‌ಗಾಗಿ ಪರ ಮೂರು ಫಾರ್ಮೆಟ್‌ಗಳನ್ನು ಆಡುವ ಬೌಲರ್. ಇಲ್ಲಿಯವರೆಗೆ, ಅವರು 25 ಟೆಸ್ಟ್, 82 ODI ಮತ್ತು 17 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನ 32.41 ಸರಾಸರಿಯಲ್ಲಿ 95 ವಿಕೆಟ್‌ಗಳನ್ನು ಪಡೆದಿದ್ದು, 600 ರನ್ ಸಿಡಿಸಿದ್ದಾರೆ. 80 ಏಕದಿನ ಪಂದ್ಯಗಳ ಇನ್ನಿಂಗ್ಸ್‌ಗಳಲ್ಲಿ 141 ವಿಕೆಟ್‌ಗಳನ್ನು ಪಡೆದು 255 ರನ್ ಗಳಿಸಿದ್ದಾರೆ. ಇದಲ್ಲದೆ ಟಿ20 ಅಂತರಾಷ್ಟ್ರೀಯ 16 ಇನ್ನಿಂಗ್ಸ್‌ಗಳಲ್ಲಿ 20 ವಿಕೆಟ್ ಪಡೆದಿದ್ದಾರೆ.
ಎಲ್‌ಎಸ್‌ಜಿ ತಂಡ: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ದೇವದತ್ ಪಡಿಕ್ಕಲ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಕೃನಾಲ್ ಪಾಂಡ್ಯ, ಯುದ್ಧವೀರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಶಮರ್ ಜೋಸೆಫ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಕೆ.ಗೌತಮ್, ಶಿವಂ ಮಾವಿ, ಅರ್ಶಿನ್ ಕುಲಕರ್ಣಿ, ಎಂ ಸಿದ್ಧಾರ್ಥ್, ಆಷ್ಟನ್ ಟರ್ನರ್, ಮ್ಯಾಟ್ ಹೆನ್ರಿ, ಮೊಹಮ್ಮದ್. ಅರ್ಷದ್ ಖಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications