ರಿಷಭ್ ಪಂತ್ ಹಾಗೂ ಎಲ್‌ಎಸ್‌ಜಿ ಮಾಲೀಕ ಗೋಯೆಂಕಾ ವಿಡಿಯೊ ವೈರಲ್ ಆಗುತ್ತಿರುವುದು ಏಕೆ?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಚಕತೆ ದಿನಕಳೆದಂತೆ ಹೆಚ್ಚುತ್ತಿದೆ. ಬುಧವಾರ ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಋತುವಿನ ಐದನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಜಯ ಸಾಧಿಸಿತು. ಈ ಸೋಲಿನ ನಂತರ, ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಸಾಕಷ್ಟು ಅಸಮಾಧಾನಗೊಂಡಂತೆ ಕಂಡುಬಂದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಳಿಕ ಎಲ್‌ಎಸ್‌ಜಿ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಮತ್ತು ನಾಯಕ ರಿಷಭ್ ಅವರೊಂದಿಗೆ ಮಾಲೀಕ ಸಂಜೀವ್ ಗೋಯೆಂಕಾ ಚರ್ಚಿಸುತ್ತಿರುವ ದೃಶ್ಯಗಳು ಕಂಡು ಬಂದವು. ಈ ಸಂಭಾಷಣೆಯ ವೇಳೆ ಸಂಜೀವ್ ಅವರ ಪ್ರತಿಕ್ರೆಯೆ ಫೋಟೋಗಳು ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿವೆ. ಹೀಗಾಗಿ ಸಾಮಾಜಿಕ ತಾಣದಲ್ಲಿ ಎಲ್‌ಎಸ್‌ಜಿ ಮಾಲೀಕರು ಟ್ರೋಲ್ ಆಗುತ್ತಿದ್ದಾರೆ.

ಈ ಬಗ್ಗೆ ಎಲ್‌ಎಸ್‌ಜಿ ಮಾಲೀಕ ಗೋಯೆಂಕಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ಸುದೀರ್ಘ ಲೀಗ್, ಇಂತಹ ಕ್ಷಣಗಳು ಆಟದ ಭಾಗವಾಗಿರುತ್ತದೆ. ನಮ್ಮ ತಂಡ ಲೀಗ್‌ನಲ್ಲಿ ಭರ್ಜರಿಯಾಗಿ ಪುಟಿದೇಳುತ್ತದೆ. ಈ ಲೀಗ್‌ನಲ್ಲಿ ಲಕ್ನೋ ಕಥೆ ಬರೆಯುವುದು ಬಾಕಿ ಇದೆ ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ತಾಣದಲ್ಲಿ ಟ್ರೋಲ್ ಆಗುತ್ತಿರುವ ಈ ವಿಡಿಯೋವನ್ನು ಕ್ರಿಕೆಟ್ ಪ್ರೇಮಿಗಳು ಭಿನ್ನವಾಗಿ ಕರೆದಿದ್ದರು. ಇದನ್ನು ಕೆಎಲ್ ರಾಹುಲ್ ಭಾಗ 2 ಎಂದು ಕರೆದಿದ್ದಾರೆ. ಬುಧಾವರದ ವೈರಲ್ ವಿಡಿಯೋದಲ್ಲಿ ಧ್ವನಿ ಸ್ವಷ್ಟವಾಗಿ ಕೇಳಿಸುತ್ತಿಲ್ಲ. ಆದರೆ ಮೂವರ ನಡುವೆ ಚರ್ಚೆ ನಡೆಯುತ್ತಿರುವುದು ಕಂಡು ಬಂದಿದೆ.
ಲಕ್ನೋ ಸೂಪರ್ ಜೈಂಟ್ಸ್ ನಾಯಕ ತಮ್ಮ ತಂಡ ಸೋತಾಗ ನಾಯಕರೊಂದಿಗೆ ಮಾತಿನ ಚಕಮಕಿ ನಡೆಸಿ ಸುದ್ದಿಯಾಗಿದ್ದು, ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಸಹ ಗೋಯೆಂಕಾ ಇಂತಹದ್ದೇ ವರ್ತನೆಯಿಂದ ಸುದ್ದಿಯಾಗಿದ್ದರು. ಕಳೆದ ಆವೃತ್ತಿಯಲ್ಲಿ ಇವರು ರಿಷಭ್ ಪಂತ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವ ಫೊಟೋಗಳು ವೈರಲ್ ಆಗಿದ್ದವು. ಇದಕ್ಕೂ ಮೊದಲು ಕನ್ನಡಿಗ ಕೆಎಲ್ ರಾಹುಲ್ ಅವರೊಂದಿಗೂ ಗೋಯೆಂಕಾ ಇದೇ ರೀತಿ ವರ್ತಿಸಿದರು.
ರಾಹುಲ್ ಜೊತೆಗೆ ವಾಗ್ವಾದ
ಮೇ 8, 2024 ರಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಎಲ್‌ಎಸ್‌ಜಿ ಸೋತ ಬಳಿಕ ನೇರವಾಗಿ ಮಾಲೀಕರು ಮೈದಾನಕ್ಕೆ ಪ್ರವೇಶಿಸಿ ರಾಹುಲ್ ಜೊತೆ ತೀವ್ರ ವಾಗ್ವಾದ ನಡೆಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications