LSG vs DC: ಅಪಾಯಕಾರಿ ಬೌಲಿಂಗ್ ಮಾಡಿದ ಡೆಲ್ಲಿ ವೇಗಿ: ಓವರ್ ಪೂರ್ಣಗೊಳಿಸಲು ನಿರಾಕರಣೆ!


ಐಪಿಎಲ್ 15ನೇ ಆವೃತ್ತಿಯ 15ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೊಂದು ಭಾರೀ ಸೋಲು ಅನುಭವಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ವಿಫಲವಾದ ರಿಷಬ್ ಪಂತ್ ಬಳಗ ಲಕ್ನೋ ತಂಡಕ್ಕೆ ಸುಲಭ ಸವಾಲಾಗಿದೆ. ಆದರೆ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯುವ ಮೂಲಕ ನಿರೀಕ್ಷೆ ಮೂಡಿಸಿದಿದ್ದ ಡೆಲ್ಲಿ ತಂಡದ ಇಬ್ಬರು ವಿದೇಶಿ ಆಟಗಾರರು ಈ ಪಂದ್ಯದಲ್ಲಿ ತಮ್ಮ ತಂಡಕ್ಕೆ ಆಘಾತ ನೀಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇಬ್ಬರು ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಅನ್ರಿಕ್ ನಾರ್ಕಿಯಾ ಈ ಬಾರಿಯ ಐಪಿಎಲ್‌ನಲ್ಲಿ ಇಂದು ಮೊದಲ ಪಂದ್ಯವನ್ನು ಆಡಿದ್ದಾರೆ. ಆದರೆ ಇಬ್ಬರು ಆಟಗಾರರು ಕುಡ ಕಳಪೆ ಪ್ರದರ್ಶನ ನೀಡಿದ್ದಾರೆ. ಡೇವಿಡ್ ವಾರ್ನರ್ 12 ಎಸೆತಗಳನ್ನು ಎದುರಿಸಿ 4 ರನ್ ಮಾತ್ರ ಗಳಿಸಲು ಶಕ್ತವಾದರೆ ಬೌಲಿಂಗ್‌ನಲ್ಲಿ ಅನ್ರಿಕ್ ನಾರ್ಕಿಯಾ 2.2 ಓವರ್‌ಗಳಲ್ಲಿ 35 ರನ್ ಬಿಟ್ಟಿಕೊಡುವ ಮೂಲಕ ತಮ್ ಮೇಲಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿದರು. ಅದಕ್ಕಿಂತ ವಿಪರ್ಯಾಸವೆಂದರೆ ಎರಡು ಅಪಾಯಕಾರಿ ಬೀಮರ್ ಎಸೆತಗಳನ್ನು ಎಸೆಯುವ ಮೂಲಕ ಅನ್ರಿಕ್ ನಾರ್ಕಿಯಾ ತಮ್ಮ ಓವರ್‌ಅನ್ನು ಕೂಡ ಸಂಪೂರ್ಣಗೊಳಿಸಲು ನಿರಾಕರಿಸಲ್ಪಟ್ಟರು.
ಗಾಯದ ಕಾರಣದಿಂದಾಗಿ ಕೆಲ ಕಾಲದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವುಳಿದಿದ್ದ ಅನ್ರಿಕ್ ನಾರ್ಕಿಯಾ ಐಪಿಎಲ್ ಸಂದರ್ಭದಲ್ಲಿ ಆಡಲು ಸಮರ್ಥರಾಗಿ ಕಣಕ್ಕಿಳಿದಿದ್ದರು. ಆದರೆ ಬೌಲಿಂಗ್ ದಾಳಿ ಮಾತ್ರ ಈ ಹಿಂದಿನಂತೆ ಮೊನಚಾಗಿರಲಿಲ್ಲ. ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ದ.ಆಫ್ರಿಕಾದ ವೇಗಿ ಸಂಪೂರ್ಣ ವಿಫಲವಾದರು. ಹೀಗಾಗಿ ಎರಡು ಅಪಾಯಕಾರಿ ಬೀಮರ್ ಎಸೆತಗಳನ್ನು ನಾರ್ಕಿಯಾ ಎಸೆದರು. ಹೀಗಾಗಿ ನಿಯಮದ ಪ್ರಕಾರ ಮುಂದಿನ ಎಸೆತವನ್ನು ಎಸೆಯಲು ನಾರ್ಕಿಯಾಗೆ ನಿರಾಕರಿಸಲಾಯಿತು.
ಕೊಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಆಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಉಮೇಶ್ ಯಾದವ್, ರಸಿಖ್ ಸಲಾಂ, ವರುಣ್ ಚಕ್ರವರ್ತಿ
ಬೆಂಚ್: ಮೊಹಮ್ಮದ್ ನಬಿ, ಶೆಲ್ಡನ್ ಜಾಕ್ಸನ್, ಚಾಮಿಕಾ ಕರುಣಾರತ್ನೆ, ಬಾಬಾ ಇಂದ್ರಜಿತ್, ರಿಂಕು ಸಿಂಗ್, ಅನುಕುಲ್ ರಾಯ್, ಪ್ರಥಮ್ ಸಿಂಗ್, ಅಭಿಜೀತ್ ತೋಮರ್, ಅಮನ್ ಹಕೀಮ್ ಖಾನ್, ಅಶೋಕ್ ಶರ್ಮಾ, ರಮೇಶ್ ಕುಮಾರ್, ಟಿಮ್ ಸೌಥಿ, ಶಿವಂ ಮಾವಿ
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ರಿಷಬ್ ಪಂತ್ (ನಾಯಕ & ವಿಕೆಟ್ ಕೀಪರ್), ಸರ್ಫರಾಜ್ ಖಾನ್, ರೋವ್ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಅನ್ರಿಚ್ ನಾರ್ಟ್ಜೆ
ಬೆಂಚ್: ಅಶ್ವಿನ್ ಹೆಬ್ಬಾರ್, ಮಿಚೆಲ್ ಮಾರ್ಷ್, ಶ್ರೀಕರ್ ಭರತ್, ಪ್ರವೀಣ್ ದುಬೆ, ಕಮಲೇಶ್ ನಾಗರಕೋಟಿ, ಚೇತನ್ ಸಕರಿಯಾ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಓಸ್ತ್ವಾಲ್, ಟಿಮ್ ಸೀಫರ್ಟ್, ಮನ್ದೀಪ್ ಸಿಂಗ್, ಖಲೀಲ್ ಅಹ್ಮದ್, ಲುಂಗಿ ಎನ್ಗಿಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications