ಐಪಿಎಲ್‌ನಿಂದ ವನಿಂದು ಹಸರಂಗ ಔಟ್; ದಕ್ಷಿಣ ಆಫ್ರಿಕಾದ ಆಟಗಾರನಿಗೆ ಅವಕಾಶ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿದ್ದು, ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡ ಸ್ಥಿರ ಪ್ರದರ್ಶನ ನೀಡುತ್ತಿದೆ. ಈ ವೇಳೆ ತಂಡಕ್ಕೆ ಮತ್ತೊಂದು ಪೆಟ್ಟು ಬಿದ್ದಿದೆ. ಎಲ್‌ಎಸ್‌ಜಿ ತಂಡದ ಸ್ಪಿನ್ ಬೌಲರ್ ವನಿಂದು ಹಸರಂಗ ಅವರು ಈ ಬಾರಿಯ ಐಪಿಎಲ್‌ನಿಂದ ಹೊರ ನಡೆದಿದ್ದಾರೆ. ಇವರು ಇನ್ನು ಫಿಟ್ ಆಗದೇ ಇರುವುದರಿಂದ ಐಪಿಎಲ್‌ನಲ್ಲಿ ಆಡುತ್ತಿಲ್ಲ. ವನಿಂದು ಹಸರಂಗ ಅವರ ಬದಲಿ ಆಟಗಾರರನ್ನು ಸಹ ಎಲ್‌ಎಸ್‌ಜಿ ಘೋಷಿಸಿದೆ.
ವನಿಂದು ಹಸರಂಗ ಅವರ ಬದಲಿಗೆ ಎಲ್‌ಎಸ್‌ಜಿ 34 ವರ್ಷದ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ ಬೌಲರ್ ಜಾರ್ಜ್ ಲಿಂಡೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡವು ಏಪ್ರಿಲ್ 12ರಂದು ಎಲ್‌ಎಸ್‌ಜಿ ಜಿಟಿ ವಿರುದ್ಧ ಕಣಕ್ಕೆ ಇಳಿಯಲಿದ್ದು, ಈ ವೇಳೆ ಲಿಂಡೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.

ಲಕ್ನೋ ಸೂಪರ್ ಜೈಂಟ್ಸ್ ಕ್ರಿಕೆಟ್ ನಿರ್ದೇಶಕ ಟಾಮ್ ಮೂಡಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕೆಕೆಆರ್ ವಿರುದ್ಧ ಪಂದ್ಯದ ವೇಳೆ ಟಾಮ್ ಮೂಡಿ ವನಿಂದು ಹಸರಂಗ ಅವರ ಅನುಪಸ್ಥಿತಿಯಲ್ಲಿ ಬೇರೆ ಆಟಗಾರನ ಹುಡುಕಾಟದಲ್ಲಿದ್ದೇವೆ ಎಂದು ತಿಳಿಸಿದ್ದರು. ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಬದಲಿ ಆಟಗಾರನನ್ನು ಘೋಷಿಸಲಾಗುವುದು ಎಂದು ಹೇಳಿದ್ದರು. ಲಿಂಡೆ ಅವರನ್ನು ಈಗ ಹಸರಂಗ ಬದಲಿಗೆ ತಂಡಕ್ಕೆ ಸೇರಿಸಿಕೊಂಡಿದೆ. ವನಿಂದು ಹಸರಂಗ ಬದಲಿಗೆ ಅಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್ ಮತ್ತು ಲಿಯಾಮ್ ಡಾಸನ್ ಸೇರಿದಂತೆ ಹಲವು ವಿದೇಶಿ ಸ್ಪಿನ್ ಬೌಲರ್‌ಗಳನ್ನು ಆಯ್ಕೆ ಮಾಡಿತ್ತು. ಕೊನೆಯಲ್ಲಿ ಎಲ್‌ಎಸ್‌ಜಿ ದಕ್ಷಿಣ ಆಫ್ರಿಕಾದ ಸ್ಪಿನ್ ಬೌಲರ್‌ಗೆ ಮಣೆ ಹಾಕಿದೆ.
ಲಿಂಡೆ ಸಾಧನೆ
ಇದೇ ಮೊದಲ ಬಾರಿಗೆ ಜಾರ್ಜ್ ಲಿಂಡೆ ಐಪಿಎಲ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಇವರಿಗೆ ಟಿ20 ಫಾರ್ಮೆಟ್ ಆಡಿದ ಸಾಕಷ್ಟು ಅನುಭವವಿದೆ. ಈ ವರೆಗೆ ಇವರು 250 ಟಿ20 ಪಂದ್ಯಗಳನ್ನು ಆಡಿದ್ದು, 26ರ ಸರಾಸರಿಯಲ್ಲಿ 218 ವಿಕೆಟ್ ಪಡೆದಿದ್ದಾರೆ. ಇಷ್ಟೇ ಅಲ್ಲದೆ ಇವರು ಬ್ಯಾಟಿಂಗ್‌ನಲ್ಲೂ ಕಮಾಲ್ ಪ್ರದರ್ಶನ ನೀಡಬಹುದು. ಇವರು ಟಿ20 ಗಳಲ್ಲಿ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications