ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳು ಪ್ರಸಕ್ತ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಎರಡನೇ ಜಯದ ಕನಸು ಕಾಣುತ್ತಿವೆ. ಎರಡೂ ತಂಡಗಳು 18ನೇ ಆವೃತ್ತಿಯ ಐಪಿಎಲ್‌ನಲ್ಲಿ ತಲಾ ಒಂದೊಂದು ಜಯ ದಾಖಲಿಸಿವೆ.
ಲಕ್ನೋ ಸೂಪರ್ ಜೇಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳಲ್ಲಿ ಸ್ಟಾರ್ ಆಟಗಾರರ ಮೇಲೆ ಕಣ್ಣು ನೆಟ್ಟಿದೆ. ಉಭಯ ತಂಡಗಳ ಅಂಕಿ ಅಂಶಗಳು ಸಹ ಉತ್ತಮವಾಗಿದ್ದು, ಎರಡನೇ ಜಯ ದಾಖಲಿಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದೇ ವೇಳೆ ಡ್ರೀಮ್ ತಂಡವನ್ನು ನೀವು ಮಾಡಲು ಬಯಸಿದ್ದೇರೆ ಯಾವೆಲ್ಲಾ ಆಟಗಾರರನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಉಭಯ ತಂಡದಲ್ಲೂ ಹೆಸರಾಂತ ವಿಕೆಟ್ ಕೀಪರ್ಸ್‌ಗಳು ಇದ್ದಾರೆ. ಈ ವಿಕೆಟ್ ಕೀಪರ್‌ಗಳು ಭರವಸೆ ಮೂಡಿಸಿದ್ದಾರೆ. ನಿಕೋಲಸ್ ಪೂರನ್ ಈಗಾಗಲೇ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಇವರ ಆಯ್ಕೆ ಸಹಜವಾಗಿದೆ. ಇನ್ನು ದುಬಾರಿ ಆಟಗಾರ ಹೇಗೆ ಆಡುತ್ತಾರೆ ಎಂಬ ಬಗ್ಗೆ ಅಭಿಮಾನಿಗಳಿಗೆ ಚೆನ್ನಾಗಿ ಅರಿವಿದೆ. ಹೀಗಾಗಿ ಎಲ್‌ಎಸ್‌ಜಿ ತಂಡದಿಂದ ಇಬ್ಬರು ವಿಕೆಟ್ ಕೀಪರ್‌ಗಳನ್ನು ಹಾಕಿಕೊಳ್ಳುವುದು ಬೆಸ್ಟ್. ಇನ್ನು ರಯಾನ್ ರಿಕೆಲ್ಟನ್ ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದು ಭರವಸೆ ಮೂಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮ ಅವರನ್ನು ತಂಡದಲ್ಲಿ ಹಾಕಿಕೊಳ್ಳುವದು ಒಳ್ಳೆಯದು. ಆದರೆ ರೋಹಿತ್ ಶರ್ಮಾ ಅವರನ್ನು ಸಹ ಕಡೆಗಣಿಸುವ ಹಾಗಿಲ್ಲ. ಆದರೆ ಪ್ರಸಕ್ತ ಫಾರ್ಮ್ ಅವರನ್ನು ಕೈ ಬಿಡುವಂತೆ ಮಾಡಿರಬಹುದು. ಆದರೆ ಅವರ ಆರ್ಭಟ ಎಲ್ಲರಿಗೂ ಅರಿವಿದೆ. ಉಳಿದಂತೆ ಎಲ್‌ಎಸ್‌ಜಿ ಪರ ಮಿಚೆಲ್ ಮಾರ್ಷ್ ಅವರನ್ನು ತಂಡದಲ್ಲಿ ಇರಿಸಿಕೊಳ್ಳುವುದು ಉತ್ತಮ.

ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ವಿಲ್ ಜಾಕ್ಸ್ ಅವರ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಇವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಬೆಸ್ಟ್ ಚಾಯ್ಸ್. ಉಳಿದಂತೆ ಎಸ್‌ಆರ್‌ಎಚ್ ತಂಡದ ಐಡೇನ್ ಮಾರ್ಕ್ರಮ್ ಅವರನ್ನು ಸೇರಿಸಿಕೊಂಡರೆ ಒಳ್ಳೆಯದು.
ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಶಾರ್ದೂಲ್ ಠಾಕೂರ್ ಮೊದಲ ಆಯ್ಕೆಯ ಬೌಲರ್. ಇನ್ನು ಮುಂಬೈ ತಂಡದಿಂದ ದೀಪಕ್ ಚಹಾರ್ ಅವರನ್ನು ಹಾಕಿಕೊಳ್ಳುವುದು ಸಹ ಉತ್ತಮ ಆಯ್ಕೆ. ಮುಂಬೈ ತಂಡದ ವೇಗಿ ಟ್ರೆಂಟ್ ಬೋಲ್ಟ್ ಸಹ ತಮ್ಮ ಬಿಗುವಿನ ದಾಳಿಯಿಂದ ಎದುರಾಳಿಗಳನ್ನು ಕಾಡಿದ್ದು ಇವರ ಆಯ್ಕೆ ಸಹ ಉತ್ತಮವಾಗಬಹುದು.
ನಾಯಕನಾಗಿ ನೀವು ನಿಕೋಲಸ್ ಪೂರನ್ ಅವರನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇಲ್ಲವೇ ಸೂರ್ಯಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡರು ಬೆಸ್ಟ್. ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ, ಮಿಚೆಲ್ ಮಾರ್ಚ್ ನಿಮ್ಮ ತಂಡದಲ್ಲಿ ಸ್ಥಾನ ನೀಡಿದರೆ ಬೆಸ್ಟ್