LSG vs MI IPL 2024: ರಾಹುಲ್-ಪೂರನ್ ಸ್ಪೋಟಕ ಬ್ಯಾಟಿಂಗ್; ಮುಂಬೈಗೆ ಬೃಹತ್ ಗುರಿ ನೀಡಿದ ಲಕ್ನೋ
ಮೇ 17 ಶುಕ್ರವಾರ, ಮುಂಬೈನ ಪ್ರತಿಷ್ಠಿತ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 67ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಲಕ್ನೋ ಸೂಪರ್ ಜೈಂಟ್ಸ್ ಬೃಹತ್ ರನ್ ಕಲೆ ಹಾಕಿದೆ.
ಲಕ್ನೋ ನಾಯಕ ಕೆಎಲ್ ರಾಹುಲ್ ಮತ್ತು ನಿಕೋಲಸ್ ಪೂರನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ಮುಂಬೈ ಬೌಲರ್ಸ್ ಬೆಂಡೆತ್ತಿದರು. ನಿಗದಿತ 20 ಓವರ್‌ಗಳಲ್ಲಿ ಲಕ್ನೋ 6 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿದೆ. ಮುಂಬೈ ಗೆಲುವಿಗೆ 215 ರನ್‌ಗಳ ಅವಶ್ಯಕತೆ ಇದೆ.

ಟಾಸ್ ಸೋತು ಮೊದಲು ಲಕ್ನೋ ಬ್ಯಾಟಿಂಗ್ ಮಾಡಿತ್ತು. ಆರಂಭಿಕರಾಗಿ ನಾಯಕ ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಶುರುವಿನಲ್ಲೇ ದೇವದತ್ ಪಡಿಕ್ಕಲ್ ಶೂನ್ಯಕ್ಕೆ ನುವಾನ್ ತುಷಾರ ಬೌಲಿಂಗ್‌ನಲ್ಲಿ ಔಟ್ ಆದರು.
ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ಮಾರ್ಕಸ್ ಸ್ಟೋನಿಸ್ ಜೊತೆಗೂಡಿದ ಕೆಎಲ್ ರಾಹುಲ್ ನಿಧಾನವಾಗಿ ರನ್ ಗಳಿಸಿದರು. ಅದ್ಭುತವಾಗಿ ಆಡುತ್ತಿದ ಮಾರ್ಕಸ್ ಸ್ಟೋನಿಸ್ (28) ಅವರನ್ನು ಪಿಯೂಷ್ ಚಾವ್ಲಾ ಔಟ್ ಮಾಡಿದರು.
ನಾಲ್ಕನೇ ಕ್ರಮಾಂಕದಲ್ಲಿ ಆಗಮಿಸಿದ ದೀಪಕ್ ಹೂಡ ಸಹಾ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಪಿಯೂಷ್ ಚಾವ್ಲಾ ಅವರ ಬೌಲಿಂಗ್‌ನಲ್ಲಿ ದೀಪಕ್ ಹೂಡ (11) ವಿಕೆಟ್ ಕಳೆದುಕೊಂಡರು. ಈ ವೇಳೆ ಕ್ರೀಸ್‌ಗೆ ಬಂದ ನಿಕೋಲಸ್ ಪೂರನ್ ಮತ್ತು ಕೆಎಲ್ ರಾಹುಲ್ ಅದ್ಭುತ ಇನ್ನಿಂಗ್ಸ್ ಆಡಿದರು.
ಮುಂಬೈ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸುವಲ್ಲಿ ನಿಕೋಲಸ್ ಪೂರನ್ ಯಶಸ್ವಿಯಾದರು. ಅಬ್ಬರದ ಬ್ಯಾಟಿಂಗ್ ಮಾಡಿದ ಪೂರನ್ ಕೇವಲ 29 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 5 ಬೌಂಡರಿ ನೆರವಿನಿಂದ 75 ರನ್ ಬಾರಿಸಿ ಮಿಂಚಿದರು.
ಮತ್ತೊಂದೆಡೆ ಕೆಎಲ್ ರಾಹುಲ್ ಕೂಡ ಅರ್ಧಶತಕ ಸಿಡಿಸಿದರು. ಕೆಎಲ್ ರಾಹುಲ್ ಎದುರಿಸಿ 41 ಎಸೆತಗಳಲ್ಲಿ 3 ಸಿಕ್ಸರ್ ಹಾಗು 3 ಬೌಂಡರಿ ಮೂಲಕ 55 ರನ್ ಹೊಡೆದರು.
ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ಪೂರನ್ ಅವರು ನುವಾನ್ ತುಷಾರ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರೆ, ಅರ್ಷದ್ ಖಾನ್ ಸಹಾ ಯಾವುದೇ ರನ್ ಗಳಿಸದೆ ಔಟ್ ಆದರು. ಪಿಯೂಷ್ ಚಾವ್ಲಾ ಅವರಿಗೆ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದರು.
ಕೊನೆಯಲ್ಲಿ ಆಯುಷ್ ಬಡೋನಿ (22) ಮತ್ತು ಕೃನಾಲ್ ಪಾಂಡ್ಯ (11) ಅಜೇಯರಾಗುಳಿದರು.
ಮುಂಬೈ ಪರ ಕೇವಲ ಇಬ್ಬರು ಬೌಲರ್ಸ್ ವಿಕೆಟ್ ಪಡೆಯುವಲ್ಲಿ ಸಫಲರಾದರು. ನುವಾನ್ ತುಷಾರ ಮತ್ತು ಪಿಯೂಷ್ ಚಾವ್ಲಾ ತಲಾ 3 ವಿಕೆಟ್ ಕಬಳಿಸಿ ಸಂಭ್ರಮಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications