LSG vs MI IPL 2024: ಲಕ್ನೋ ಸಂಘಟಿಕ ಬೌಲಿಂಗ್ ದಾಳಿಗೆ ನಡುಕಿದ ಮುಂಬೈ: ಸಾಧಾರಣ ಮೊತ್ತಕ್ಕೆ ಹಾರ್ದಿಕ್ ಪಡೆ ಸುಸ್ತು
ಮಂಗಳವಾರ, ಏಪ್ರಿಲ್ 30ರಂದು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 48ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡ ಯಶಸ್ವಿಯಾಗಿದೆ.
ಲಕ್ನೋ ಸಂಘಟಿಕ ಬೌಲಿಂಗ್ ದಾಳಿಗೆ ನಡುಕಿದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 144 ರನ್‌ಗಳನ್ನು ಗಳಿಸಿದೆ. ಹೀಗಾಗಿ ಲಕ್ನೋ ತಂಡದ ಗೆಲುವಿಗೆ 145 ರನ್‌ಗಳ ಅವಶ್ಯಕತೆ ಇದೆ. ಕುಸಿದ ಮುಂಬೈ ಪರ ನೆಹಾಲ್ ವಧೇರಾ 46 ರನ್ ಗಳಿಸಿ ಆಸರೆಯಾದರು.

ಲಕ್ನೋ ಸೂಪರ್ ಜೆಂಟ್ಸ್ ಎದುರು ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ಮುಂಬೈ ಕೇವಲ 27 ರನ್‌ಗಳಿಸುವಷ್ಟರಲ್ಲೇ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಆರಂಭಿಕ ರೋಹಿತ್ ಶರ್ಮಾ (4), ಸೂರ್ಯಕುಮಾರ್ ಯಾದವ್ (10), ತಿಲಕ್ ವರ್ಮಾ (7) ಹಾಗು ಬಂದ ದಾರಿಗೆ ಸುಂಕವಿಲ್ಲದಂತೆ ನಾಯಕ ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟ್ ಆಗುವ ಮೂಲಕ ತಂಡಕ್ಕೆ ನೆರವಾಗಲಿಲ್ಲ.
ಈ ಹಂತದಲ್ಲಿ ಇಶಾನ್ ಕಿಶಾನ್‌ದ ತಾಳ್ಮೆಯಿಂದ ಬ್ಯಾಟ್ ಬೀಸಿದರು. ಆದರೆ ಲಕ್ನೋ ಸ್ಪಿನ್ನರ್ ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ಇಶಾನ್ (36) ಔಟ್ ಆದರು. ಇನ್ನೊಂದೆಡೆ ನೆಹಾಲ್ ವಧೇರಾ ಕೂಡ ಇಶಾನ್ ಅವರೊಂದಿಗೆ ನಿಧಾನವಾಗಿ ರನ್ ಗಳಸಿದರು. ಈ ಮೂಲಕ ಮುಂಬೈ ಮೊತ್ತ ನೂರಾರ ಗಡಿ ದಾಟುವಂತೆ ಮಾಡಿದರು. ಅರ್ಧಶತಕದ ಹೊಸ್ತಿಲಲ್ಲಿ ಇದ್ದ ನೆಹಾಲ್ ವಧೇರಾ (46) ಕೊನೆಯ ಹಂತದಲ್ಲಿ ವಿಕೆಟ್ ಕಳೆದುಕೊಂಡರು.
ಬಳಿಕ ಬಂದ ಟಿಮ್ ಡೇವಿಡ್ ಅವರಿಂದಲ್ಲೂ ಲಕ್ನೋ ಬೌಲರ್ಸ್ ಎದುರು ರನ್ ಗಳಿಸಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಮೊಹಮ್ಮದ್ ನಬಿ (1) ವಿಕೆಟ್ ನೀಡಿ ಹೊರ ನಡೆದರು. ಅಂತಿವಾಗಿ ಟಿಮ್ ಡೇವಿಡ್ ಅಜೇಯ (35) ಮತ್ತು ಜೆರಾಲ್ಡ್ ಕೋಯಟ್ಜಿ (1) ಗಳಿಸಿದರು.
ಲಕ್ನೋ ಸೂಪರ್ ಜೈಂಟ್ಸ್ ಪರ ಬೌಲರ್ಸ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಮೊಹ್ಸಿನ್ ಖಾನ್ 2 ವಿಕೆಟ್ ಪಡೆದುಕೊಂಡರೆ, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಮಯಾಂಕ್ ಯಾದವ್, ಮತ್ತು ಮಾರ್ಕಸ್ ಸ್ಟೋಯಿನಿಸ್ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications