LSG vs MI: ಟಿ20 ವಿಶ್ವಕಪ್ ಆಯ್ಕೆ ದಿನದಂದೇ ಭಾರತ ತಂಡದ ನಾಯಕ, ಉಪನಾಯಕ ಫೇಲ್!
ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್ ತಂಡವನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮುಂಬೈ ಇಂಡಿಯನ್ಸ್‌ನ ಐಪಿಎಲ್ 2024ರ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದರು.
ರೋಹಿತ್ ಶರ್ಮಾ ತಮ್ಮ 37ನೇ ಜನ್ಮದಿನದಂದು ಕೇವಲ 4 ರನ್ ವಿಕೆಟ್ ಒಪ್ಪಿಸಿದರೆ, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲಿ ಡಕ್‌ಗೆ ಔಟಾದರು.

ಮಂಗಳವಾರ, ಏಪ್ರಿಲ್ 30ರಂದು ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮುಂಬೈ ಇಂಡಿಯನ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕಡಿಮೆ ಮೊತ್ತಕ್ಕೆ ಪೆವಿಲಿಯನ್ ಸೇರಿದರು.
ವಿಕೆಟ್‌ಕೀಪರ್ ತಲೆಯ ಮೇಲೆ ಅದ್ಭುತ ಸ್ಕೂಪ್ ಶಾಟ್ ಬಾರಿಸಿದ ರೋಹಿತ್ ಶರ್ಮಾ 2ನೇ ಓವರ್‌ನಲ್ಲಿ ಔಟಾದರು. ಶಾರ್ಟ್ ಕವರ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮಾರ್ಕಸ್ ಸ್ಟೊಯಿನಿಸ್ ಪಡೆದ ಉತ್ತಮ ಕ್ಯಾಚ್‌ಗೆ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 0 ರನ್‌ಗೆ ಔಟಾದ ನಂತರ, ತಮ್ಮ ಕಳಪೆ ಪ್ರದರ್ಶನ ಮುಂದುವರೆಸಿದರು. ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್-ಉಲ್-ಹಕ್ ಅವರ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿದರು.

ಮುಂಬೈ ಇಂಡಿಯನ್ಸ್ ತಂಡದ ಈ ಸಂಕಷ್ಟಕ್ಕೆ ಹೆಚ್ಚುವರಿಯಾಗಿ, ವಿಶ್ವ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ 6 ಎಸೆತಗಳಲ್ಲಿ 10 ರನ್ ಗಳಿಸಿದ್ದಾಗ ಮಾರ್ಕಸ್ ಸ್ಟೋಯಿನಿಸ್ ಅವರ ಬೌಲಿಂಗ್‌ನಲ್ಲಿ ಪವರ್‌ಪ್ಲೇನಲ್ಲೇ ಔಟಾದರು.
ಮುಂಬೈ ಇಂಡಿಯನ್ಸ್ ಪವರ್‌ಪ್ಲೇನಲ್ಲಿ 2 ವಿಕೆಟ್‌ಗೆ 27 ರನ್‌ಗಳಿಗೆ ಕುಸಿಯಿತು. ಇದು ಐಪಿಎಲ್ 2024ರಲ್ಲಿ ಮೊದಲ 6 ಓವರ್‌ಗಳಲ್ಲಿ ತಮ್ಮ ಕಡಿಮೆ ಮೊತ್ತವನ್ನು ದಾಖಲಿಸಿತು.
ರೋಹಿತ್ ಶರ್ಮಾ ಅಪರೂಪದ ವೈಫಲ್ಯವನ್ನು ಅನುಭವಿಸಿದರೆ, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಫಾರ್ಮ್ ಟಿ20 ವಿಶ್ವಕಪ್‌ನ ಮುಂದಿರುವಾಗ ಆತಂಕಕ್ಕೆ ಕಾರಣವಾಗಿದೆ.
ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಆಡಿದ 10 ಪಂದ್ಯಗಳಲ್ಲಿ 35ರ ಸರಾಸರಿ ಮತ್ತು 158.29ರ ಸ್ಟ್ರೈಕ್‌ರೇಟ್‌ನಲ್ಲಿ 315 ರನ್ ಗಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಆಡಿದ 10 ಪಂದ್ಯಗಳಲ್ಲಿ 46 ರನ್‌ಗಳ ಅತ್ಯುತ್ತಮ ಸ್ಕೋರ್‌ನೊಂದಿ ಕೇವಲ 197 ರನ್ ಗಳಿಸಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಐಪಿಎಲ್ 2024ರ ಮೊದಲ 3 ಪಂದ್ಯಗಳಿಂದ ತಪ್ಪಿಸಿಕೊಂಡಿದ್ದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಆಡಿದ 7 ಪಂದ್ಯಗಳಿಂದ 25.14ರ ಸರಾಸರಿಯಲ್ಲಿ ಕೇವಲ 176 ರನ್ ಕಲೆಹಾಕಿದ್ದಾರೆ. ಆ ಸ್ಕೋರ್‌ಗಳಲ್ಲಿ ಎರಡು 50-ಪ್ಲಸ್ ಆಗಿವೆ. ಸ್ಟಾರ್ ಬ್ಯಾಟರ್ ಈ ಅವೃತ್ತಿಯಲ್ಲಿ ಸ್ಥಿರತೆಗಾಗಿ ಹೆಣಗಾಡಿದ್ದಾರೆ.
ಐಪಿಎಲ್ 2024ರಲ್ಲಿ ತಮ್ಮ ಮೊದಲ 9 ಪಂದ್ಯಗಳಲ್ಲಿ ಕೇವಲ 3 ಗೆಲುವಿನೊಂದಿಗೆ 10-ತಂಡಗಳ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲುವಿನ ಅಗತ್ಯತೆ ಇದೆ.
ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರು ಸ್ಥಿರತೆಯನ್ನು ಕಂಡುಕೊಳ್ಳಬೇಕೆಂದು ಬಯಸುತ್ತಿದ್ದಾರೆ. ಏಕೆಂದರೆ, ಮುಂಬೈ ಇಂಡಿಯನ್ಸ್ ತಂಡದಿಂದ ರೋಹಿತ್, ಹಾರ್ದಿಕ್, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಈ 4 ಆಟಗಾರರು ಟಿ20 ವಿಶ್ವಕಪ್‌ಗಾಗಿ 15 ಸದಸ್ಯರ ಭಾರತ ತಂಡದಲ್ಲಿ ಆಯ್ಕೆಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications