Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LSG vs PBKS IPL 2025: ಎಲ್‌ಎಸ್‌ಜಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕಟ್ಟಿ ಹಾಕಿದ ಪಂಜಾಬ್‌

ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಟಾರ್ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ಸಫಲವಾದ ಪಂಜಾಬ್ ಕಿಂಗ್ಸ್‌ 171 ರನ್‌ಗಳಿಗೆ ಕಟ್ಟಿ ಹಾಕಿದೆ. 18ನೇ ಆವೃತ್ತಿಯ ಐಪಿಎಲ್‌ನ 13ನೇ ಪಂದ್ಯಕ್ಕೆ ಲಕ್ನೋ ಮೈದಾನ ಸಾಕ್ಷಿಯಾಗಿತ್ತು. ತವರಿನಲ್ಲೂ ರಿಷಭ್‌ ಪಂತ್ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಪರಿಣಾಮ ಆತಿಥೇಯ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕುವ ಕನಸು ನನಸಾಗಲಿಲ್ಲ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್‌ ಆರಂಭ ಕಳಪೆಯಾಗಿತ್ತು. ಆರಂಭಿಕ ಮಿಚೆಲ್ ಮಾರ್ಷ್ (0) ಅವರಿಗೆ ಅರ್ಷದೀಪ್ ಸಿಂಗ್ ಖೆಡ್ಡಾ ತೋಡಿದರು. ಎರಡನೇ ವಿಕೆಟ್‌ಗೆ ನಿಕೋಲಸ್‌ ಪೂರನ್‌ ಹಾಗೂ ಐಡೆನ್ ಮಾರ್ಕ್ರಾಮ್ ಜೋಡಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತುವ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಈ ಜೋಡಿ 19 ಎಸೆತಗಳಲ್ಲಿ 31 ರನ್‌ ಸೇರಿಸಿತು. ಐಡೆನ್ ಮಾರ್ಕ್ರಾಮ್ 28 ರನ್‌ ಬಾರಿಸಿ ಔಟ್ ಆದರು. ತಂಡದ ನಾಯಕ ರಿಷಭ್ ಪಂತ್‌ ತಮ್ಮ ಘನತೆಗೆ ತಕ್ಕ ಆಟವನ್ನು ಆಡಲಿಲ್ಲ. ಇವರಿಗೆ ಹೆಚ್ಚಿನ ಹಣವನ್ನು ನೀಡಿ ಎಲ್‌ಎಸ್‌ಜಿ ಇವರಿಗೆ ತಂಡಕ್ಕೆ ಸೇರಿಸಿಕೊಂಡಿತ್ತು.

LSG vs PBKS IPL 2025 Punjab Kings Restrict Lucknow Super Giants to a Competitive Total

35 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಭರವಸೆಯ ಬ್ಯಾಟರ್‌ ನಿಕೋಲಸ್ ಪೂರನ್ ಹಾಗೂ ಆಯೂಷ್ ಬದೋನಿ ಆಧಾರವಾದರು. ಈ ಜೋಡಿ ಕೊಂಚ ಹೊತ್ತ ಪಂಜಾಬ್‌ ಬೌಲರ್‌ಗಳ ಸವಾಲನ್ನು ಮೆಟ್ಟಿನಿಂತು ರನ್‌ ಕಲೆ ಹಾಕಿತು. ಈ ಜೋಡಿ 40 ಎಸೆತಗಳಲ್ಲಿ 54 ರನ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿತು. ನಿಕೋಲಸ್‌ ಪೂರನ್‌ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 44 ರನ್‌ ಬಾರಿಸಿ ಔಟ್ ಆದರು.

ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್ ಡೇವಿಡ್ ಮಿಲ್ಲರ್ (19) ದೊಡ್ಡ ಇನಿಂಗ್ಸ್ ಕಟ್ಟಲೇ ಇಲ್ಲ. 6ನೇ ವಿಕೆಟ್‌ಗೆ ಆಯುಷ್ ಬದೋನಿ ಹಾಗೂ ಅಬ್ದುಲ್ ಸಮದ್ ಜೋಡಿ ಸ್ಥಿರ ಬ್ಯಾಟಿಂಗ್ ನಡೆಸಿತು. ಈ ಜೋಡಿ 21 ಎಸೆತಗಳಲ್ಲಿ 47 ರನ್‌ ಬಾರಿಸಿ ಸೈ ಎನಿಸಿಕೊಂಡಿತು. 25 ವರ್ಷದ ಆಯುಷ್ ಬದೋನಿ 1 ಬೌಂಡರಿ, 3 ಸಿಕ್ಸರ್ ಸಹಾಯದಿಂದ 41 ರನ್‌ ಬಾರಿಸಿದರು. ಇನ್ನು ಅಬ್ದುಲ್ ಸಮದ್ 12 ಎಸೆತಗಳಲ್ಲಿ 27 ರನ್‌ ಸಿಡಿಸಿದರು. ಈ ಇನಿಂಗ್ಸ್‌ನಲ್ಲಿ 2 ಬೌಂಡರಿ, 2 ಸಿಕ್ಸರ್ ಸೇರಿವೆ.

ಅರ್ಷದೀಪ್‌ ಅಬ್ಬರ

ಪಂಜಾಬ್‌ ಕಿಂಗ್ಸ್ ಪರ ಅರ್ಷದೀಪ್ ಸಿಂಗ್‌ ಅಮೋಘ ಬೌಲಿಂಗ್ ದಾಳಿ ನಡೆಸಿದರು. ಇವರು ರನ್‌ಗಳನ್ನು ನೀಡಿದರೂ ಸಹ ವಿಕೆಟ್‌ ಕಬಳಿಸುವಲ್ಲಿ ಸಫಲರಾದರು. ಅರ್ಷದೀಪ್‌ 43 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. ಉಳಿದಂತೆ ಲಾಕಿ ಫಾರ್ಗ್ಯೂಸನ್, ಗ್ಲೇನ್ ಮ್ಯಾಕ್ಸ್‌ವೆಲ್, ಮಾರ್ಕೋ ಜಾನ್ಸನ್‌, ಯುಜುವೇಂದ್ರ ಚಹಾಲ್ ತಲಾ ಒಂದು ವಿಕೆಟ್‌ ಪಡೆದರು.

Story first published: Tuesday, April 1, 2025, 21:08 [IST]
Other articles published on Apr 1, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+