For Quick Alerts
ALLOW NOTIFICATIONS  
For Daily Alerts
 

LSG vs PBKS: ಐಪಿಎಲ್ 2024ರ ಅತಿ ವೇಗದ ಬಾಲ್ ಎಸೆದ ಮಯಾಂಕ್ ಯಾದವ್ ಯಾರು?

ಶನಿವಾರ, ಮಾರ್ಚ್ 30ರಂದು ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ 2024ರ ಪಂದ್ಯದಲ್ಲಿ ಚೊಚ್ಚಲ ವೇಗಿ ಮಯಾಂಕ್ ಯಾದವ್ ಪ್ರಸಕ್ತ ಆವೃತ್ತಿಯಲ್ಲಿ ಅತಿ ವೇಗದ ಚೆಂಡನ್ನು ಎಸೆದರು.

ಲಕ್ನೋ ಸೂಪರ್ ಜೈಂಟ್ಸ್ ತಂಡದ 21ರ ಹರೆಯದ ಮಯಾಂಕ್ ಯಾದವ್ ಅವರು ಬೌಲಿಂಗ್ ಮಾಡುವಾಗ ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್‌ಗಳನ್ನು ತಮ್ಮ ಅತಿ ವೇಗದ ಬೌಲಿಂಗ್‌ನಿಂದ ತೊಂದರೆಗೀಡು ಮಾಡಿದರು.

LSG vs PBKS Who is Mayank Yadav the Fastest Bowler of IPL 2024

ಪಂಜಾಬ್ ಕಿಂಗ್ಸ್ ವಿರುದ್ಧದ ತನ್ನ ಎರಡನೇ ಓವರ್‌ನಲ್ಲಿ ಮಯಾಂಕ್ ಯಾದವ್ 155.8 kmph ಅನ್ನು ದಾಖಲಿಸಿದರು. ಇದು ಈ ಋತುವಿನ ಅತ್ಯಂತ ವೇಗದ ಎಸೆತವಾಗಿತ್ತು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ನಾಂದ್ರೆ ಬರ್ಗರ್ ಅವರ ಹಿಂದಿನ ವೇಗದ ಎಸೆತವನ್ನು ಹಿಂದಿಕ್ಕಿತು.

ಯುವ ವೇಗದ ಬೌಲರ್ ಮಯಾಂಕ್ ಯಾದವ್ ಐಪಿಎಲ್‌ನ ತಮ್ಮ ಚೊಚ್ಚಲ ಪಂದ್ಯದಲ್ಲೇ ವೇಗದ ಎಸೆತವನ್ನು ಬೌಲ್ ಮಾಡುವುದರ ಜೊತೆಗೆ 3 ವಿಕೆಟ್‌ಗಳನ್ನು ಪಡೆದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಗೆಲುವಿನಲ್ಲಿ ದೊಡ್ಡ ಪ್ರಭಾವ ಬೀರಿದರು.

ಮಯಾಂಕ್ ಯಾದವ್ ಪಂದ್ಯದುದ್ದಕ್ಕೂ ಉತ್ತಮ ಲಯದಲ್ಲಿ ಕಾಣಿಸಿಕೊಂಡರು ಮತ್ತು ಎರಡನೇ ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ 155.8 kmph ಎಸೆತವನ್ನು ಎಸೆದಾಗ, ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಅವರನ್ನು ತೊಂದರೆಗೆ ಸಿಲುಕಿಸಿತು.

LSG vs PBKS Who is Mayank Yadav the Fastest Bowler of IPL 2024

2022ರ ಹರಾಜಿನಲ್ಲಿ ಕೇವಲ 20 ಲಕ್ಷ ರೂಪಾಯಿ ಮೂಲ ಬೆಲೆಗೆ 21 ವರ್ಷದ ವೇಗಿಯನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಖರೀದಿಸಿತು. ಆದರೆ ನಂತರ ಗಾಯದ ಕಾರಣ ಅರ್ಪಿತ್ ಗುಲೇರಿಯಾ ಅವರನ್ನು ಆಯ್ಕೆ ಮಾಡಲಾಗಿತ್ತು.

ಮಯಾಂಕ್ ಯಾದವ್ ಅವರ ಟಿ20 ವೃತ್ತಿಜೀವನದಲ್ಲಿ ಆಡಿದ 10 ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಅವರ ಲಿಸ್ಟ್ ಎ ವೃತ್ತಿಜೀವನದಲ್ಲಿ ಅಡಿದ 17 ಪಂದ್ಯಗಳಲ್ಲಿ 34 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮಯಾಂಕ್ ದೇಶೀಯ ಟೂರ್ನಿಯಲ್ಲಿ ದೆಹಲಿ ತಂಡವನ್ನು ಪ್ರತಿನಿಧಿಸುತ್ತಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2023-2024ರ ಸೆಮಿಫೈನಲ್ ಪಂದ್ಯದಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದರೂ, ಪಂಜಾಬ್ ವಿರುದ್ಧ ದೆಹಲಿ ಸೋತಿತ್ತು.

ಯುವ ವೇಗದ ಬೌಲರ್ ಮಯಾಂಕ್ ಯಾದವ್ ಅವರು ಜಾನಿ ಬೈರ್‌ಸ್ಟೋವ್, ಪ್ರಭ್‌ಸಿಮ್ರಾನ್ ಸಿಂಗ್ ಮತ್ತು ಜಿತೇಶ್ ಶರ್ಮಾ ಅವರ ಪ್ರಮುಖ ವಿಕೆಟ್‌ಗಳನ್ನು ಪಡೆದುಕೊಂಡು ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ 27 ರನ್ ನೀಡಿ 3 ವಿಕೆಟ್‌ಗಳ ಅಂಕಿಅಂಶದೊಂದಿಗೆ ಮುಗಿಸಿದರು.

"ಇದು ಇಷ್ಟೊಂದು ಉತ್ತಮ ಚೊಚ್ಚಲ ಪಂದ್ಯವಾಗಿರುತ್ತದೆ ಎಂದು ಭಾವಿಸಿರಲಿಲ್ಲ. ಪಂದ್ಯಕ್ಕೂ ಮುನ್ನ ಆತಂಕಗೊಂಡಿದ್ದೆ. ನನ್ನ ವೇಗಕ್ಕೆ ಅಂಟಿಕೊಳ್ಳಲು ಮತ್ತು ಸ್ಟಂಪ್‌ನತ್ತ ಗುರಿ ಇಡಲು ಪ್ರಯತ್ನಿಸಿದೆ. ಆರಂಭದಲ್ಲಿ ಕಡಿಮೆ ವೇಗ ಬಳಸುವ ಬಗ್ಗೆ ಯೋಚಿಸುತ್ತಿದ್ದೆ, ನಂತರ ವೇಗದ ಬೌಲಿಂಗ್‌ಗೆ ಅಂಟಿಕೊಂಡಿದೆ," ಎಂದು ಮಯಾಂಕ್ ಯಾದವ್ ಪಂದ್ಯದ ಬಳಿಕ ಹೇಳಿದರು.

"ಮೊದಲ ವಿಕೆಟ್ ವಿಶೇಷವಾಗಿತ್ತು. ಚಿಕ್ಕವಯಸ್ಸಿನಲ್ಲಿ ಐಪಿಎಲ್ ಪ್ರವೇಶ ಮಾಡಿದ್ದು ಉತ್ತಮವಾಗಿದೆ. ಕೆಲವು ಗುರಿಗಳನ್ನು ಹೊಂದಿದ್ದೇನೆ, ಆದರೆ ದಾರಿಯಲ್ಲಿ ಗಾಯಗಳು ಬಂದರೆ ಸಹಾಯ ಮಾಡಲು ಸಾಧ್ಯವಿಲ್ಲ," ಎಂದು ಮಯಾಂಕ್ ಯಾದವ್ ತಿಳಿಸಿದರು.

ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು 21 ರನ್‌ಗಳಿಂದ ಸೋಲಿಸಿದ ಬಳಿಕ ಮಾಯಾಂಕ್ ಯಾದವ್ ಅವರಲ್ಲಿ ಭಾರತ ಹೊಸ ವೇಗದ ಬೌಲಿಂಗ್ ಸ್ಟಾರ್‌ನನ್ನು ಕಂಡುಕೊಂಡಿದೆ. ತನ್ನ ನಿಖರ ಬೌಲಿಂಗ್‌ನಿಂದ ಭವಿಷ್ಯದಲ್ಲಿ ಭಾರತ ತಂಡಕ್ಕೆ ಪ್ರವೇಶಿಸಬಹುದು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲಲ್ಲಿ 8 ವಿಕೆಟ್ ಕಳೆದುಕೊಂಡು 199 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.

ಆರಂಭಿಕ ಕ್ವಿಂಟನ್ ಡಿ ಕಾಕ್ 38 ಎಸೆತಗಳಲ್ಲಿ 54 ರನ್ ಗಳಿಸಿ ಅಗ್ರ ಸ್ಕೋರ್ ಮಾಡಿದರೆ, ಹಂಗಾಮಿ ನಾಯಕ ನಿಕೋಲಸ್ ಪೂರನ್ 21 ಎಸೆತಗಳಲ್ಲಿ 42 ರನ್ ಗಳಿಸಿ ಮಧ್ಯಮ ಓವರ್‌ಗಳಲ್ಲಿ ತಮ್ಮ ತಂಡದ ಇನ್ನಿಂಗ್ಸ್‌ಗೆ ಜೀವ ತುಂಬಿದರು. ಕೃನಾಲ್ ಪಾಂಡ್ಯ ಕೇವಲ 22 ಎಸೆತಗಳಲ್ಲಿ 43 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿಗೆ ತಲುಪಿಸಿದರು.

ಮಯಾಂಕ್ ಯಾದವ್ ಅವರ ಬಿಗಿ ಬೌಲಿಂಗ್ ದಾಳಿಯಿಂದ ಐಪಿಎಲ್ 2024ರ ಮೊದಲ ಗೆಲುವನ್ನು ದಾಖಲಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆ ಮೊತ್ತವು ದೊಡ್ಡದಾಗಿತ್ತು. ಅಂತಿಮವಾಗಿ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 178 ರನ್ ಗಳಿಸಲಷ್ಟೇ ಶಕ್ತವಾಯಿತು.

Story first published: Sunday, March 31, 2024, 8:13 [IST]
Other articles published on Mar 31, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+