LSG vs RCB: ತವರಿನ ಹುಡುಗ ಭುವನೇಶ್ವರ್ ಕುಮಾರ್ ಸವಾಲು ಎದುರಿಸಲಿದೆ ಲಕ್ನೋ: ವಿರಾಟ್ vs ಶಮಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಯ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಲಯಕ್ಕಾಗಿ ಪರದಾಟ ನಡೆಸಿರುವ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ಸವಾಲು ಎದುರಿಸಲಿದೆ. ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವದಾಗಿದೆ. ಎಲ್‌ಎಸ್‌ಜಿ ಪ್ಲೇ ಆಫ್ ಪ್ರವೇಶಿಸಬೇಕಾದಲ್ಲಿ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಇನ್ನು ಆರ್‌ಸಿಬಿ ತಂಡ ಸಹ ಈ ಪಂದ್ಯದಲ್ಲಿ ಜಯ ಸಾಧಿಸಿ ಪ್ಲೇ ಆಫ್‌ಗೆ ಇನ್ನು ಹತ್ತಿರವಾಗುವ ಕನಸು ಕಾಣುತ್ತಿದೆ.
ಆರ್‌ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಅಲ್ಲದೆ ತಂಡದ ಭರವಸೆಯ ಆಟಗಾರರು ತಂಡದ ಗೆಲುವಿನಲ್ಲಿ ಮಿಂಚುತ್ತಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಇನ್ನು ಆರ್‌ಸಿಬಿ ತಂಡ ಆಡಿದ 9 ಪಂದ್ಯಗಳಲ್ಲಿ 6 ಜಯ ದಾಖಲಿಸಿದ್ದು, 12 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅಲಭ್ಯತೆಯ ಲಾಭ ಪಡೆಯಲು ಜಾಕೊಬ್ ಬೆಥೆಲ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಎಲ್‌ಎಸ್‌ಜಿ ತಂಡದ ಭರವಸೆಯ ಆಟಗಾರರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದರೆ. ರಿಷಭ್ ಪಂತ್ ಪಡೆ ಆಡಿದ 9 ಪಂದ್ಯಗಳಲ್ಲಿ 2 ಜಯ ದಾಖಲಿಸಿ 4 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮುಂದಿರುವ ಐದು ಪಂದ್ಯಗಳನ್ನು ಗೆದ್ದಲ್ಲಿ ಎಲ್‌ಎಸ್‌ಜಿ ಪ್ಲೇ ಆಫ್ ಆಸೆಗೆ ರೆಕ್ಕೆ ಬರುತ್ತದೆ. ಇಲ್ಲದೇ ಇದ್ದಲ್ಲಿ ಪಂತ್ ಪಡೆ ಲೀಗ್ ಹಂತದಲ್ಲೇ ಈ ಆವೃತ್ತಿಗೆ ಗುಡ್ ಬೈ ಹೇಳಬೇಕಾಗುತ್ತದೆ.
ಭುವನೇಶ್ವರ್ ಆಕರ್ಷಣೆ
ಆರ್‌ಸಿಬಿ ತಂಡದ ಆರಂಭಿಕ ಆಟಗಾರ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಇವರು ಆಡಿದ 9 ಪಂದ್ಯಗಳಲ್ಲಿ 379 ರನ್ ಕಲೆ ಹಾಕಿದ್ದಾರೆ. ಜಾಕೊಬ್ ಬೆಥೆಲ್ ಸಹ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಕರ್ನಾಟಕದ ದೇವದತ್ ಪಡಿಕ್ಕಲ್ (282 ರನ್) ಉತ್ತಮವಾಗಿ ರನ್ ಕಲೆ ಹಾಕುತ್ತಿದ್ದು ತಂಡದ ಚಿಂತೆಯನ್ನು ದೂರ ಮಾಡಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ರಜತ್ ಪಾಟಿದಾರ್ ಆಕ್ರಮಣಕಾರಿ ಆಟವನ್ನು ಆಡುತ್ತಿದ್ದು ರನ್ ರೇಟ್ ಹಿಗ್ಗಿಸಬಲ್ಲರು. ಉಳಿದ ಆಲ್‌ರೌಂಡರ್‌ಗಳು ಹಾಗೂ ಬ್ಯಾಟರ್‌ಗಳು ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರೆ ದೊಡ್ಡ ಮೊತ್ತದ ಕನಸು ಫಲಿಸುತ್ತದೆ.
ಆರ್‌ಸಿಬಿ ತಂಡದಲ್ಲಿ ಸ್ಟಾರ್ ಬೌಲರ್‌ಗಳ ದಂಡೇ ಇದೆ. ತಮ್ಮ ಸ್ವಿಂಗ್ ಮೂಲಕ ಭುವನೇಶ್ವರ್ ಕುಮಾರ್ (17 ವಿಕೆಟ್) ಎದುರಾಳಿಗಳಿಗೆ ಕಾಟ ನೀಡಿದ್ದು, ತಮ್ಮ ತವರು ನೆಲದಲ್ಲಿ ಪಂದ್ಯವನ್ನು ಆಡಲಿದ್ದಾರೆ. ಹೀಗಾಗಿ ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಭುವಿಗೆ ಹೊಸ ಚೆಂಡಿನಲ್ಲಿ ಜೋಶ್ ಹ್ಯಾಜಲ್‌ವುಡ್ (8 ವಿಕೆಟ್) ಉತ್ತಮ ಸಾಥ್ ನೀಡಲಿದ್ದಾರೆ. ಇವರು ಸಹ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಬಲ್ಲ ಕ್ಷಮತೆ ಹೊಂದಿದ್ದಾರೆ. ರಸಿಕ್ ಸಲಾಂ ದಾರ್, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ ಸಹ ಸರಿಯಾದ ಸ್ಥಳದಲ್ಲಿ ಬೌಲಿಂಗ್ ಮಾಡಿದರೆ, ಏಳನೇ ಜಯದ ಆಸೆ ಫಲಿಸುತ್ತದೆ.

ಒತ್ತಡದಲ್ಲಿ ಎಲ್‌ಎಸ್‌ಜಿ
ಎಲ್‌ಎಸ್‌ಜಿ ತಂಡದ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ (256 ರನ್) ಕಲೆ ಹಾಕುತ್ತಿದ್ದು ದೊಡ್ಡ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟಿದ್ದ ನಿಕೋಲಸ್ ಪೂರನ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆಯುಷ್ ಬದೋನಿ, ನಾಯಕ ರಿಷಭ್ ಪಂತ್, ಮುಕುಲ್ ಚೌಧರಿ ರನ್ ವೇಗಕ್ಕೆ ಚುರುಕು ನೀಡಲು ನೆರವಾಗಬೇಕಿದೆ. ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್, ಪ್ರಿನ್ಸ್ ಯಾದವ್ ಬಿಗುವಿನ ದಾಳಿ ನಡೆಸಿದರೆ ಜಯದ ಆಸೆ ಫಲಿಸುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications