LSG vs RCB: ಶತಕ ಬಾರಿಸಿ ರಿಷಭ್ ಪಂತ್ ದಾಖಲೆ ಅಳಿಸಿ ಹಾಕಿದ ಮಿಚೆಲ್ ಮಾರ್ಷ್
ಲಕ್ನೋ: ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಅವರು ಬಾರಿಸಿದ ಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 50ನೇ ಪಂದ್ಯದಲ್ಲಿ 213 ರನ್‌ಗಳ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೀಡಿದೆ. ಮಳೆ ಬಾಧಿತ ಪಂದ್ಯದಲ್ಲಿ ಒಂದು ಓವರ್‌ಗೆ ಕತ್ತರಿ ಬಿದ್ದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಲ್‌ಎಸ್‌ಜಿ ತಂಡದ ಆರಂಭ ಭರ್ಜರಿಯಾಗಿತ್ತು. ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಆಡುವ ಅವಕಾಶವನ್ನು ಪಡೆದ ಮಹಾರಾಷ್ಟ್ರದ 21 ವರ್ಷದ ಅರ್ಶಿನ್ ಕುಲಕರ್ಣಿ ಹಾಗೂ ಮಿಚೆಲ್ ಮಾರ್ಷ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಪವರ್ ಪ್ಲೇನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿತು. ಮೊದಲ 6 ಓವರ್‌ಗಳಲ್ಲಿ ಅರ್ಶಿನ್ ಕುಲಕರ್ಣಿ ಹಾಗೂ ಮಾರ್ಷ್ 68 ರನ್ ಕಾಣಿಕೆ ನೀಡಿತು.

ಈ ಹಂತದಲ್ಲಿ ಆಟಕ್ಕೆ ಮಳೆ ಸಹ ಕಾಟ ನೀಡಿತು. ಮಳೆ ನಿಂತ ಬಳಿಕ ಮತ್ತೆ ಪಂದ್ಯ ಆರಂಭವಾಯಿತು. ಅರ್ಶಿನ್ ಕುಲಕರ್ಣಿ 17 ರನ್ ಬಾರಿಸಿ ಕೃನಾಲ್ ಪಾಂಡ್ಯ ಅವರಿಗೆ ವಿಕೆಟ್ ಒಪ್ಪಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 95 ರನ್ ಸೇರಿಸಿತು.
ಮಿಚೆಲ್ ಮಾರ್ಷ್ ಶತಕ
ಆರಂಭಿಕ ಮಿಚೆಲ್ ಮಾರ್ಷ್ ಅಬ್ಬರಿಸಿದರು. ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಮಾರ್ಷ್ ಅಬ್ಬರಿಸಿದರು. ಇವರು ಕೇವಲ 49 ಎಸೆತಗಳಲ್ಲಿ 9 ಬೌಂಡರಿ, 8 ಸಿಕ್ಸರ್ ಸಹಿತ 100 ರನ್ ಬಾರಿಸಿದರು. ಈ ಮೂಲಕ ಮಾರ್ಷ್ ರಿಷಭ್ ಪಂತ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಪಂತ್ ಎಲ್‌ಎಸ್‌ಜಿ ಪರ 54 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈಗ ಈ ದಾಖಲೆ ಮಾರ್ಷ್ ತಮ್ಮ ಹೆಸರು ನಮೂದಿಸಿದರು. ಇವರು 56 ಎಸೆತಗಳಲ್ಲಿ 9 ಬೌಂಡರಿ, 9 ಸಿಕ್ಸರ್ ಸಹಾಯದಿಂದ 111 ರನ್ ಬಾರಿಸಿ ಜೋಶ್ ಹ್ಯಾಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್‌ಗೆ ನಿಕೋಲಸ್ ಪೂರನ್ ಹಾಗೂ ಮಿಚೆಲ್ ಮಾರ್ಷ್ ಜೋಡಿ 41 ಎಸೆತಗಳಲ್ಲಿ 70 ರನ್ ಸೇರಿಸಿತು.
ನಿಕೋಲಸ್ ಪೂರನ್ 23 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 38 ರನ್ ಬಾರಿಸಿ ರಸಿಕ್ ಸಲಾಂ ದಾರ್ ಎಸೆತದಲ್ಲಿ ಔಟ್ ಆದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಿಷಭ್ ಪಂತ್ 10 ಎಸೆತಗಳಲ್ಲಿ 32 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಎಲ್‌ಎಸ್‌ಜಿ 19 ಓವರ್‌ಗಳಲ್ಲಿ 3 ವಿಕೆಟ್‌ಗೆ 209 ರನ್ ಸೇರಿಸಿತು. ಆರ್‌ಸಿಬಿ ಪರ ಜೋಶ್ ಹ್ಯಾಜಲ್‌ವುಡ್, ಕೃನಾಲ್ ಪಾಂಡ್ಯ, ರಸೀಕ್ ಸಲಾಂ ದಾರ್ ತಲಾ ಒಂದು ವಿಕೆಟ್ ಪಡೆದರು. ತಮ್ಮ ಐಪಿಎಲ್ ವೃತ್ತಿ ಜೀವನದ 200ನೇ ಪಂದ್ಯವನ್ನು ಆಡುತ್ತಿರುವ ಕೃನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಒಪಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications