Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LSG vs RCB: ಎಲ್‌ಎಸ್‌ಜಿ ವಿರುದ್ಧ ಸೋತ ಆರ್‌ಸಿಬಿ: ಪಂತ್ ಪಡೆಯ ಪ್ಲೇ ಆಫ್ ಆಸೆ ಜೀವಂತ

ಲಕ್ನೋ: ಕೊನೆಯ ಓವರ್‌ ವರೆಗೂ ಕುತೂಹಲ ಮೂಡಿಸಿದ್ದ 19ನೇ ಆವೃತ್ತಿ ಐಪಿಎಲ್‌ನ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) 9 ರನ್‌ಗಳಿಂದ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ ಸೋಲು ಕಂಡಿದೆ. ಈ ಪಂದ್ಯದಲ್ಲಿ ಸೋಲು ಕಂಡರೂ ಆರ್‌ಸಿಬಿ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಮೂರನೇ ಸ್ಥಾನ ಭದ್ರ ಪಡಿಸಿಕೊಂಡಿದೆ. ಆರ್‌ಸಿಬಿ ತಂಡದ ರನ್‌ ರೇಟ್‌ 1.234 ಆಗಿದ್ದು, ಅಮೋಘವಾಗಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ ಎಲ್‌ಎಸ್‌ಜಿ ತಂಡದ ಪ್ಲೇ ಆಫ್‌ ಆಸೆ ಜೀವಂತವಾಗಿದೆ.

ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಜಾಕೊಬ್ ಬೆಥೆಲ್‌ (4) ಹಾಗೂ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್‌ ಕೊಹ್ಲಿ (0) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕರು ತಂಡದ ಮೊತ್ತ 9 ಆಗಿದ್ದಾಗ ಪೆವಿಲಿಯನ್ ಸೇರಿದ್ದರು.

LSG vs RCB

ಮೂರನೇ ವಿಕೆಟ್‌ಗೆ ದೇವದತ್ ಪಡಿಕ್ಕಲ್‌ ಹಾಗೂ ನಾಯಕ ರಜತ್ ಪಾಟಿದಾರ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 53 ಎಸೆತಗಳಲ್ಲಿ 95 ರನ್ ಸೇರಿಸಿತು. ಈ ಹಂತದಲ್ಲಿ ಅಮೋಘ ಬ್ಯಾಟಿಂಗ್ ನಡೆಸುತ್ತಿದ್ದ ದೇವದತ್ ಪಡಿಕ್ಕಲ್ 34 ರನ್ ಬಾರಿಸಿದ್ದಾಗ ಪ್ರಿನ್ಸ್‌ ಯಾದವ್ ತೋಡಿದ ಖೆಡ್ಡಾಗೆ ಬಲಿಯಾದರು.

ನಾಯಕನ ಆಟವಾಡಿದ ರಜತ್

ನಾಯಕ ರಜತ್ ಪಾಟಿದಾರ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಇವರು 31 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್ ಸಹಾಯದಿಂದ 61 ರನ್ ಬಾರಿಸಿ ಔಟ್ ಆದರು. 6ನೇ ವಿಕೆಟ್‌ಗೆ ಕೃನಾಲ್ ಪಾಂಡ್ಯ ಹಾಗೂ ಟೀಮ್ ಡೇವಿಡ್ 46 ರನ್‌ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಏಳನೇ ವಿಕೆಟ್‌ಗೆ ಕೃನಾಲ್ (ಅಜೇಯ 28) ಹಾಗೂ ರೊಮಾರಿಯೋ ಶೆಫರ್ಡ್ (ಅಜೇಯ 23) ಜೋಡಿ ಸ್ಥಿರ ಪ್ರದರ್ಶನ ನೀಡಿದರೂ ಸಹ ತಂಡಕ್ಕೆ ಗೆಲುವಿನ ಮಾಲೆ ತೊಡಿಸುವಲ್ಲಿ ಎಡವಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭ ಆಕ್ರಮಣಕಾರಿಯಾಗಿತ್ತು. ಪದಾರ್ಪಣೆ ಪಂದ್ಯವಾಡಿದ 21 ವರ್ಷದ ಯುವ ಆಟಗಾರ ಅರ್ಶಿನ್ ಕುಲಕರ್ಣಿ ಹಾಗೂ ಮಿಚೆಲ್ ಮಾರ್ಷ್ ಜೋಡಿ ಮೊದಲ ವಿಕೆಟ್‌ಗೆ 95 ರನ್‌ಗಳ ಭರ್ಜರಿ ಜೊತೆಯಾಟ ನೀಡಿತು. ಅರ್ಶಿನ್ 17 ರನ್ ಗಳಿಸಿ ಔಟಾದರು.

ಮಿಚೆಲ್ ಮಾರ್ಷ್ ಶತಕ

ಪಂದ್ಯದ ಪ್ರಮುಖ ಆಕರ್ಷಣೆಯೆಂದರೆ ಮಿಚೆಲ್ ಮಾರ್ಷ್ ಅವರ ಸ್ಫೋಟಕ ಶತಕ ಬಾರಿಸಿ ತಂಡಕ್ಕೆ ನೆರವಾದರು. ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದ ಮಾರ್ಷ್, ನಾಯಕ ರಿಷಭ್ ಪಂತ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಅಂತಿಮವಾಗಿ 56 ಎಸೆತಗಳಲ್ಲಿ 111 ರನ್ (9 ಬೌಂಡರಿ, 9 ಸಿಕ್ಸರ್) ಸಿಡಿಸಿ ವೇಗಿ ಹ್ಯಾಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ (38 ರನ್) ಮತ್ತು ರಿಷಭ್ ಪಂತ್ (10 ಎಸೆತಗಳಲ್ಲಿ 32 ರನ್) ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಎಲ್‌ಎಸ್‌ಜಿ ಮಳೆ ಬಾಧಿತ ಪಂದ್ಯದಲ್ಲಿ 19 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 209 ರನ್ ಗಳಿಸುವ ಮೂಲಕ ಬೃಹತ್ ಮೊತ್ತ ಪೇರಿಸಿದೆ.

LSG vs RCB

ಆರ್‌ಸಿಬಿ ಪರವಾಗಿ ಜೋಶ್ ಹ್ಯಾಜಲ್‌ವುಡ್, ಕೃನಾಲ್ ಪಾಂಡ್ಯ ಮತ್ತು ರಸಿಕ್ ಸಲಾಂ ತಲಾ ಒಂದು ವಿಕೆಟ್ ಪಡೆದರು. ಕೃನಾಲ್ ಪಾಂಡ್ಯ ಅವರಿಗೆ ಇದು ಐಪಿಎಲ್ ವೃತ್ತಿಜೀವನದ 200ನೇ ಪಂದ್ಯವಾಗಿರುವುದು ವಿಶೇಷವಾಗಿತ್ತು.

Story first published: Friday, May 8, 2026, 1:46 [IST]
Other articles published on May 8, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+