LSG vs RR: ಲಕ್ನೋ ಬೌಲರ್‌ಗಳ ಎದುರು ನಡೆಯದ ರಾಯಲ್ಸ್ ಬ್ಯಾಟರ್‌ಗಳ ಆಟ
ಲಕ್ನೋ: ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗದ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ 19ನೇ ಆವೃತ್ತಿ ಐಪಿಎಲ್‌ನ 32ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡದ ಆರಂಭ ಸಾಧಾರಣವಾಗಿತ್ತು. ಲೀಗ್‌ನಲ್ಲಿ ಬಿಗ್ ಇನಿಂಗ್ಸ್ ಕಟ್ಟಿ ಭರವಸೆ ಮೂಡಿಸಿದ್ದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬಿಗ್ ಹಿಟ್ ಬಾರಿಸಲು ವಿಫಲರಾದರು. ಇವರು 4 ಬೌಂಡರಿ ನೆರವಿನಿಂದ 22 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಮೊಹಮ್ಮದ್ ಶಮಿ ಅವರ ಎಸೆತದಲ್ಲಿ ರಿಷಭ್ ಪಂತ್ ಅವರಿಗೆ ಕ್ಯಾಚ್ ನೀಡಿದರು. ಇದೇ ಓವರ್‌ನ ಕೊನೆಯ ಎಸೆತದಲ್ಲಿ ಮೊಹಮ್ಮದ್ ಶಮಿ ಸ್ವಿಂಗ್ ಅರಿಯುವಲ್ಲಿ ವಿಫಲರಾದ ಧ್ರುವ್ ಜುರೇಲ್ ಸಹ ವಿಕೆಟ್ ಕೀಪರ್ ಅವರಿಗೆ ಕ್ಯಾಚ್ ನೀಡಿದರು.

ಈ ಲೀಗ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಗುರುವಾರ ನಿರಾಸೆ ಅನುಭವಿಸಿದರು. ಮೋಹ್ಸಿನ್ ಖಾನ್ ಅವರ ಎಸೆತದಲ್ಲಿ ವೈಭವ್ ಸೂರ್ಯವಂಶಿ ಲಾಂಗ್ ಆನ್ ಮೇಲೆ ಸಿಕ್ಸರ್ ಬಾರಿಸಲು ಹೋಗಿ ದಿಗ್ವೇಶ್ ರಾಠಿ ಅವರಿಗೆ ಕ್ಯಾಚ್ ನೀಡಿದರು. ಆಗ ಆರ್‌ಆರ್ ತಂಡದ ಮೊತ್ತ 32 ಆಗಿತ್ತು. ರಾಜಸ್ಥಾನ್ 32 ರನ್ ಸೇರುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
4ನೇ ವಿಕೆಟ್‌ಗೆ ಶಿಮ್ರೊನ್ ಹೆಟ್ಮೆಯರ್ ಹಾಗೂ ರಿಯಾನ್ ಪರಾಗ್ ಜೋಡಿ 30 ಎಸೆತಗಳಲ್ಲಿ 30 ರನ್ ಸೇರಿಸಿತು. 19 ಎಸೆತಗಳಲ್ಲಿ 20 ರನ್ ಬಾರಿಸಿ ಭರವಸೆ ಮೂಡಿಸಿದ್ದ ನಾಯಕ ರಿಯಾನ್ ಪರಾಗ್ ರನ್ ವೇಗಕ್ಕೆ ಚುರುಕು ಮುಟ್ಟಿಸಲು ಹೋಗಿ ಪ್ರಿನ್ಸ್ ಯಾದವ್ ಎಸೆತದಲ್ಲಿ ನಿಕೋಲಸ್ ಪೂರನ್‌ಗೆ ಕ್ಯಾಚ್ ನೀಡಿದರು. ಭರವಸೆಯ ಆಟಗಾರ ಶಿಮ್ರೊನ್ ಹೆಟ್ಮೆಯರ್ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 22 ರನ್ ಬಾರಿಸಿ ಮೊಹ್ಸಿನ್ ಖಾನ್‌ಗೆ ವಿಕೆಟ್ ಒಪ್ಪಿಸಿದರು.
ಜಡೇಜಾ ಜವಾಬ್ದಾರಿಯುತ ಆಟ
6ನೇ ವಿಕೆಟ್‌ಗೆ ರವೀಂದ್ರ ಜಡೇಜಾ ಹಾಗೂ ಡೊನೊವನ್ ಫೆರೀರಾ ಜೋಡಿ 35 ಎಸೆತಗಳಲ್ಲಿ 33 ರನ್ ಸೇರಿಸಿತು. ಈ ಹಂತದಲ್ಲಿ ಡೊನೊವನ್ ಫೆರೀರಾ 20 ರನ್ ಬಾರಿಸಿ ಔಟ್ ಆದರು. ಏಳನೇ ವಿಕೆಟ್‌ಗೆ ಜಡೇಜಾ ಹಾಗೂ ಶುಭಂ ದುಬೆ 25 ಎಸೆತಗಳಲ್ಲಿ ಅಜೇಯ 49 ರನ್ ಸೇರಿಸಿತು. ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ 29 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 43 ರನ್ ಬಾರಿಸಿದರು. ಅಂತಿಮವಾಗಿ ರಾಜಸ್ಥಾನ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 159 ರನ್ ಸೇರಿಸಿತು.
ವೇಗಿಗಳ ಕಮಾಲ್
ಲಕ್ನೋ ತಂಡದ ಪರ ವೇಗದ ಬೌಲರ್‌ಗಳು ಬಿಗುವಿನ ದಾಳಿ ನಡೆಸಿದರು. ಈ ಲೀಗ್‌ನಲ್ಲಿ ಇದೇ ಮೊದಲ ಬಾರಿಗೆ ಕಣಕ್ಕೆ ಇಳಿದ ಮಯಾಂಕ್ ಯಾದವ್ ದುಬಾರಿಯಾದರು. ಇವರು 4 ಓವರ್‌ಗಳಲ್ಲಿ 56 ರನ್ ನೀಡಿ ಕೈ ಸುಟ್ಟುಕೊಂಡರು. ಉಳಿದಂತೆ ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್, ಪ್ರಿನ್ಸ್ ಯಾದವ್ ತಲಾ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications