Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LSG vs RR: ಲಕ್ನೋಗೆ ಕೈ ಕೊಟ್ಟ ಲಕ್: ಸಾಧಾರಣ ಮೊತ್ತ ಡಿಫೆಂಡ್ ಮಾಡಿಕೊಂಡ ರಾಯಲ್ಸ್‌

ಭರವಸೆಯ ಬೌಲರ್‌ಗಳ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ರಾಜಸ್ಥಾನ್ ರಾಯಲ್ಸ್‌ 19ನೇ ಆವೃತ್ತಿಯ ಐಪಿಎಲ್‌ನ 32ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡವನ್ನು ಮಣಿಸಿ, ಹ್ಯಾಟ್ರಿಕ್ ಸೋಲಿನಿಂದ ಪಾರಾಗಿದೆ. ಈ ಮೂಲಕ ರಾಯಲ್ಸ್ ತಂಡದ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಗುರಿಯನ್ನು ಬೆನ್ನಟ್ಟಿದ ಎಲ್‌ಎಸ್‌ಜಿ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕರಾಗಿ ಬಡ್ತಿ ಪಡೆದ ಆಯುಷ್ ಬದೋನಿ, ನಾಯಕ ರಿಷಭ್ ಪಂತ್, ಭರವಸೆಯ ಆಟಗಾರ ಏಡನ್ ಮಾರ್ಕ್ರಾಮ್‌ ಸೊನ್ನೆ ಸುತ್ತಿದರು. ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ರಾಜಸ್ಥಾನ ತಂಡಕ್ಕೆ ವೇಗದ ಬೌಲರ್‌ ಜೋಫ್ರಾ ಆರ್ಚರ್ ಹಾಗೂ ನಾಂಡ್ರಿ ಬರ್ಗರ್ ಬಿಗುವಿನ ದಾಳಿ ನಡೆಸಿತು. ಅಲ್ಲದೆ ಪವರ್‌ ಪ್ಲೇನಲ್ಲಿ ಲಕ್ನೋ ತಂಡದ ಬ್ಯಾಟಿಂಗ್‌ಗೆ ಪೆಟ್ಟು ನೀಡಿದರು. 2.5 ಓವರ್‌ಗಳಲ್ಲಿ ಎಲ್‌ಎಸ್‌ಜಿ 11 ರನ್‌ ಸೇರಿಸಿ ಮೂರು ವಿಕೆಟ್‌ ಕಳೆದುಕೊಂಡಿತ್ತು.

LSG vs RR

ನಾಲ್ಕನೇ ವಿಕೆಟ್‌ಗೆ ನಿಕೋಲಸ್ ಪೂರನ್ ಹಾಗೂ ಮಿಚೆಲ್ ಮಾರ್ಷ್ ಜೋಡಿ ತಂಡಕ್ಕೆ ಕೊಂಚ ಆಧಾರವಾದರು. ಈ ಜೋಡಿ 41 ಎಸೆತಗಳಲ್ಲಿ 43 ರನ್‌ ಸೇರಿಸಿತು.ಈ ಹಂತದಲ್ಲಿ ನಿಕೋಲಸ್ 3 ಬೌಂಡರಿ ಸೇರಿದಂತೆ 22 ರನ್ ಬಾರಿಸಿ ಔಟ್ ಆದರು. 5ನೇ ವಿಕೆಟ್‌ಗೆ ಮಿಚೆಲ್ ಮಾರ್ಷ್ ಹಾಗೂ ಹಿಮ್ಮತ್ ಸಿಂಗ್ ಜೋಡಿ ಸಹ 37 ರನ್‌ ಸೇರಿಸಿತು. ಹಿಮ್ಮತ್ ಸಿಂಗ್ 15 ರನ್‌ ಬಾರಿಸಿ ಔಟ್ ಆದರು. ಆರಂಭಿಕ ಮಿಚೆಲ್ ಮಾರ್ಷ್ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 55 ರನ್‌ ಬಾರಿಸಿ ಬರ್ಗರ್‌ಗೆ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಎಲ್‌ಎಸ್‌ಜಿ 18 ಓವರ್‌ಗಳಲ್ಲಿ 119 ರನ್‌ ಸೇರಿಸಿ ಸೋಲು ಕಂಡಿತು.

ರಾಯಲ್ಸ್‌ ಪರ ಜೋಫ್ರಾ ಆರ್ಚರ್ 20 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. ಬರ್ಗರ್‌, ಬ್ರಿಜೇಶ್‌ ಶರ್ಮಾ ತಲಾ 2 ವಿಕೆಟ್‌ ಪಡೆದರು.

ಜಡೇಜಾ ಕಮಾಲ್‌ ಬ್ಯಾಟಿಂಗ್

ರಾಜಸ್ಥಾನ್ ರಾಯಲ್ಸ್ ತಂಡದ ಆರಂಭ ಸಹ ಸಾಧಾರಣವಾಗಿತ್ತು. ಆರಂಭಿಕ ಯಶಸ್ವಿ ಜೈಸ್ವಾಲ್‌ 22 ರನ್‌ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಮೊಹಮ್ಮದ್ ಶಮಿಗೆ ಕ್ಯಾಚ್ ನೀಡಿದರು. ವಿಕೆಟ್‌ ಕೀಪರ್ ಧ್ರುವ್ ಜುರೇಲ್‌ ಸೊನ್ನೆ ಸುತ್ತಿದರು. 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ 8 ರನ್‌ಗಳಿಗೆ ಆಟ ಮುಗಿಸಿದರು. ನಾಯಕ ರಿಯಾನ್ ಪರಾಗ್‌ 20, ಶಿಮ್ರೊನ್ ಹೆಟ್ಮೆಯರ್ 22, ಡೊನೊವನ್ ಫೆರೀರಾ 20 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಭರವಸೆಯ ಆಲ್‌ರೌಂಡರ್ ರವೀಂದ್ರ ಜಡೇಜಾ ಅಜೇಯ 43 ರನ್‌ ಸಿಡಿಸಿದರು. ಇವರ ಈ ಇನಿಂಗ್ಸ್‌ನಲ್ಲಿ 2 ಬೌಂಡರಿ, 1 ಸಿಕ್ಸರ್ ಸಿಡಿಸಿದರು. ಅಂತಿಮವಾಗಿ ಆರ್‌ಆರ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 159 ರನ್‌ ಸೇರಿಸಿತು. ಎಲ್‌ಎಸ್‌ಜಿ ಪರ ಮೊಹಮ್ಮದ್ ಶಮಿ, ಪ್ರಿನ್ಸ್ ಯಾದವ್, ಮೊಹ್ಸಿನ್ ಖಾನ್ ತಲಾ 2 ವಿಕೆಟ್‌ ಪಡೆದರು.

Story first published: Wednesday, April 22, 2026, 23:36 [IST]
Other articles published on Apr 22, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+