LSG vs SRH IPL 2024: ಕುಸಿದ ಲಕ್ನೋಗೆ ಆಸರೆಯಾದ ಬಡೋನಿ, ಪೂರನ್; ಹೈದರಾಬಾದ್‌ಗೆ ಸಾಧಾರಣ ಗುರಿ
ಮೇ 8 ಬುಧವಾರ, ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 57ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಎದುರು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡ ಸಾಧಾರಣ ಮೊತ್ತ ಕಲೆ ಹಾಕಿದೆ.
ಕುಸಿದ ಲಕ್ನೋ ಪರ ಕೊನೆಯಲ್ಲಿ ಅಬ್ಬರಿಸಿದ ನಿಕೋಲಸ್ ಪೂರನ್ ಮತ್ತು ಆಯುಷ್ ಬಡೋನಿ ಜೋಡಿ ಬೀರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿತು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೆ ಶಕ್ತವಾಯಿತು. ಹೈದರಾಬಾದ್ ಗೆಲುವಿಗೆ 166 ರನ್‌ಗಳ ಅವಶ್ಯಕತೆ ಇದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿ ಲಕ್ನೋ ಸೂಪರ್ ಜೈಂಟ್ಸ್ ಪರ ಕ್ವಿಂಟನ್ ಡಿ ಕಾಕ್ ಮತ್ತು ಕೆಎಲ್ ರಾಹುಲ್ ಬೃಹತ್ ರನ್ ಗಳಿಸುವ ಲೆಕ್ಕಚಾರದಲ್ಲಿದರು. ಆದರೆ ಕ್ವಿಂಟನ್ ಡಿ ಕಾಕ್ ಕೇವಲ 2 ಗಳಿಸಿ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಔಟ್ ಆದರು.
ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ಮಾರ್ಕಸ್ ಸ್ಟೋನಿಸ್ (3) ಕೂಡ ತಮ್ಮ ಅಬ್ಬರ ಆಟ ಪ್ರದರ್ಶನ ಮಾಡಲು ಸಾಧ್ಯವಾಗಲಿಲ್ಲ. ಮತ್ತೆ ಬೌಲಿಂಗ್ ದಾಳಿಗಿಳಿದ ಭುವನೇಶ್ವರ್ ಕುಮಾರ್ ಅವರು ಮಾರ್ಕಸ್ ಸ್ಟೋನಿಸ್ ವಿಕೆಟ್ ಪಡೆದುಕೊಂಡರು.
ನಂತರ ನಾಲ್ಕನೇ ಕ್ರಮಾಂಕದಲ್ಲಿ ಬಂದ ಕೃನಾಲ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಚೇತರಿಕೆ ಆಟವಾಡಿದರು. ಆದರೆ ತಂಡಕ್ಕೆ ದೊಡ್ಡ ಮಟ್ಡದಲ್ಲಿ ನೆರವಾಗುವುದಕ್ಕೆ ಕೆಎಲ್ ರಾಹುಲ್ (29) ಮತ್ತು ಕೃನಾಲ್ ಪಾಂಡ್ಯ (24) ಅವರಿಂದ ಸಾಧ್ಯವಾಗಲಿಲ್ಲ. ಕೆಎಲ್ ರಾಹುಲ್ ಅವರು ಪ್ಯಾಟ್ ಕಮ್ಮಿನ್ಸ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರೆ, ಕೃನಾಲ್ ಪಾಂಡ್ಯ ಅವರನ್ನು ಪ್ಯಾಟ್ ಕಮ್ಮಿನ್ಸ್ ರನ್ ಔಟ್ ಮಾಡುವಲ್ಲಿ ಯಶಸ್ವಿಯಾದರು.
ಈ ಹಂತ ಒಂದಾದ ನಿಕೋಲಸ್ ಪೂರನ್ ಮತ್ತು ಆಯುಷ್ ಬಡೋನಿ ಹೈದರಾಬಾದ್ ಬೌಲರ್ಸ್ ಅನ್ನು ಸಮರ್ಥವಾಗಿ ಎದುರಿಸಿದರು. ಜೊತೆಗೆ ಈ ಜೋಡಿ ಉತ್ತಮವಾಗಿ ರನ್ ಕಲೆ ಹಾಕಿತು. ಅಬ್ಬರದ ಆಟವಾಡಿದ ಆಯುಷ್ ಬಡೋನಿ ಅರ್ಧಶತಕ ಸಿಡಿಸಿ ಲಕ್ನೋ ತಂಡಕ್ಕೆ ನೆರವಾದರು. ಇನ್ನೊಂದೆಡೆ ಬಡೋನಿ ಅವರಿಗೆ ನಿಕೋಲಸ್ ಪೂರನ್ ಸಾಥ್ ನೀಡಿದರು.
ಆಯುಷ್ ಬಡೋನಿ ಎದುರಿಸಿ 30 ಎಸೆತಗಳಲ್ಲಿ 9 ಬೌಂಡರಿ ಬಾರಿಸುವ ಮೂಲಕ ಆಜೇಯ 55 ರನ್ ಪೇರಿಸಿದರು. ನಿಕೋಲಸ್ ಪೂರನ್ ಕೇವಲ 26 ಎಸೆತಗಳಲ್ಲಿ 6 ಬೌಂಡರಿ ಹಾಗು 1 ಸಿಕ್ಸರ್ ನೆರವಿನಿಂದ ಅಜೇಯ 48 ರನ್ ಹೊಡೆದು ಲಕ್ನೋ ತಂಡದ ಮೊತ್ತವನ್ನು ಹೆಚ್ಚಿಸಿದರು. ಇದರೊಂದಿಗೆ ಈ ಜೋಡಿ 99 ರನ್‌ಗಳ ಜೊತೆಯಾಟವಾಡಿತು.
ಸನ್ ರೈಸರ್ಸ್ ಹೈದರಾಬಾದ್ ಪರ ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ಉತ್ತಮ ಸ್ಪೆಲ್ ಮಾಡಿದರು. ನಾಲ್ಕು ಓವರ್‌ಗಳಲ್ಲಿ ಕೇವಲ 12 ರನ್ ಬಿಟ್ಟುಕೊಟ್ಟು, 2 ವಿಕೆಟ್ ಕಬಳಿಸಿದರು. ನಾಯಕ ಪ್ಯಾಟ್ ಕಮ್ಮಿನ್ಸ್ 1 ವಿಕೆಟ್ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications