LSG vs SRH IPL 2024: ಬೌಂಡರಿ, ಸಿಕ್ಸರ್ ಮಳೆಗೈದ ಹೆಡ್-ಅಭಿಷೇಕ್; ಲಕ್ನೋ ಎದುರು ಹೈದರಾಬಾದ್‌ಗೆ ಜಯ
ಮೇ 8 ಬುಧವಾರ, ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಎದುರು ತಂಡ ದಾಖಲೆಯ ಗೆಲುವು ಸಾಧಿಸಿದೆ.
ಲಕ್ನೋ ನೀಡಿದ 166 ರನ್‌ಗಳನ್ನು ಬೆನ್ನಟ್ಟಿದ್ದ ಹೈದರಾಬಾದ್ ಪರ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಈ ಮೂಲಕ ಹೈದರಾಬಾದ್‌ಗೆ ಕೇವಲ 9.4 ಓವರ್‌ನಲ್ಲೇ 10 ವಿಕೆಟ್‌ಗಳ ಜಯ ತಂದು ಕೊಟ್ಟಿದ್ದಾರೆ. ಅಲ್ಲದೆ ಮತ್ತೆ ನಾವೇ ಬೆಸ್ಟ್ ಓಪನರ್ಸ್ ಎಂದು ಸಾಬೀತುಪಡಿಸಿದ್ದಾರೆ.

ಸನ್‌ರೈಸರ್ಸ್ ಆರಂಭಿಕರಾದ ಅಭಿಷೇಕ್ ಹಾಗೂ ಹೆಡ್ ಜೋಡಿ ತವರಿನಲ್ಲಿ ಅಬ್ಬರಿಸಿದರು. ಲಕ್ನೋ ಬೌಲರ್ಸ್ ಅನ್ನು ಬೆಂಡೆತ್ತಿದ ಈ ಜೋಡಿ ಪವರ್ ಪ್ಲೇನಲ್ಲೇ 107 ರನ್‌ಗಳಿಸಿ ಸ್ಪೋಟಕ ಬ್ಯಾಟಿಂಗ್ ಮಾಡದರು.
ಕಳೆದೆರಡು ಪಂದ್ಯಗಳಿಂದ ಮಂಕಾಗಿದ್ದ ಟ್ರಾವಿಸ್ ಹೆಡ್ ಲಕ್ನೋ ಎದುರು ಕೇವಲ 16 ಎಸೆತಗಳಲ್ಲೇ ಅರ್ಧ ಶತಕ ಬಾರಿಸಿದರು. ಜೊತೆಗೆ ಈ ಆವೃತ್ತಿಯಲ್ಲಿ 500 ರನ್‌ಗಳಿಸಿ ದಾಖಲೆ ಬರೆದರು. ಮತ್ತೊಂದೆಡೆ ಅಭಿಷೇಕ್ ಕೂಡ 19 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಸಂಭ್ರಮಿಸಿದರು.
ಒಟ್ಟಾರೆ, ಟ್ರಾವಿಸ್ ಎದುರಿಸಿದ 30 ಎಸೆತಗಳಲ್ಲಿ 8 ಬೌಂಡರಿ ಹಾಗು 8 ಸಿಕ್ಸರ್ ನೆರವಿನಿಂದ ಅಜೇಯ 89 ರನ್ ಹೊಡೆದರು. ಇತ್ತ ಅಭಿಷೇಕ್ ಕೇವಲ 28 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ ಮೂಲಕ 75 ರನ್ ಸಿಡಿಸಿ ಮಿಂಚಿದರು. ಇದೀಗ ಲಕ್ನೋ ಎದುರು ಗೆದ್ದಿರುವ ಹೈದರಾಬಾದ್ ಉತ್ತಮ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಪ್ಲೇ ಆಫ್ ಹಾದಿಯನ್ನೂ ಸುಗಮ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications