ಡೆಲ್ಲಿ ಬಿಟ್ಟುಕೊಟ್ಟ ಬೌಲರ್ ಅವರನ್ನೇ ಕಾಡುತ್ತಿದ್ದಾರೆ ಭೂತವಾಗಿ!
ಐಪಿಎಲ್ 2020 ಫೈನಲ್ಸ್‌ನಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ಅನ್ನು ಎದುರಿಸುತ್ತಿದೆ. ಮುಂಬೈ ಐದನೇ ಬಾರಿ ಚಾಂಪಿಯನ್ ಆಗುವ ವಿಶ್ವಾಸದಲ್ಲಿದ್ದರೆ, ಡೆಲ್ಲಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕುವ ತವಕದಲ್ಲಿದೆ.
ಇಂದಿನ ಫೈನಲ್ ಅನ್ನು ಕೇಂದ್ರದಲ್ಲಿಟ್ಟುಕೊಂಡು ಈವರೆಗಿನ ಟೂರ್ನಿಯನ್ನು ಗಮನಿಸಿದರೆ, ಡೆಲ್ಲಿಗಿಂತ ಮುಂಬೈ ತುಸು ಬಲಿಷ್ಠ ತಂಡದಂತೆ ಕಾಣುತ್ತಿದೆ.
ಐದು ದಿನದ ಹಿಂದಷ್ಟೆ ನಡೆದ ಪಂದ್ಯದಲ್ಲಿ ಡೆಲ್ಲಿಯನ್ನು ಬಹು ಹೀನಾಯವಾಗಿ ಸೋಲಿಸಿತ್ತು ಮುಂಬೈ ತಂಡ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿ ಸೋಲಲು ಮೈದಾನದ ಒಳಗೆ ಮಾಡಿದ ತಪ್ಪಿನಷ್ಟೆ ಮೈದಾನದ ಹೊರಗೆ ಅಂದರೆ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮಾಡಿದ ತಪ್ಪೂ ಸಹ ಕಾರಣವಾಯಿತು! ಹೌದು, ಒಬ್ಬ ಪ್ರಮುಖ ಆಟಗಾರನನ್ನು ಡೆಲ್ಲಿ ಮುಂಬೈ ಗೆ ಬಿಟ್ಟುಕೊಟ್ಟಿತು. ಅವರೇ ಟ್ರೆಂಟ್ ಬೋಲ್ಟ್.

ಎರಡು ಓವರ್‌ಗೆ ಎರಡು ವಿಕೆಟ್, ಒಂದು ಮೇಡಿನ್
ಮೊದಲ ಕ್ವಾಲಿಫೈಯರ್ಸ್ ಪಂದ್ಯದಲ್ಲಿ ಟ್ರೆಂಟ್ ಬೋಲ್ಟ್ ಕೇವಲ ಎರಡು ಓವರ್‌ಗೆ ಎರಡು ವಿಕೆಟ್ ಕಿತ್ತೆಸೆದಿದ್ದರು. ಎರಡು ಓವರ್‌ನಲ್ಲಿ ಒಂದು ಮೇಡಿನ್ ಸಹ ಎಸೆದಿದ್ದರು. ಇದೇ ಟ್ರೆಂಟ್ ಬೋಲ್ಟ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದರು. ಹರಾಜು ಪ್ರಕ್ರಿಯೆಯಲ್ಲಿ ಅವರನ್ನು ಮುಂಬೈ ಕೊಂಡುಕೊಂಡಿತು.

ಡೆಲ್ಲಿಯಿಂದ ಖರೀದಿಸಿದ್ದು ನಮ್ಮ ಅದೃಷ್ಟ: ರೋಹಿತ್
ಟ್ರೆಂಟ್ ಬೋಲ್ಟ್ ಬಗ್ಗೆ ಮಾತನಾಡಿರುವ ಮುಂಬೈ ನಾಯಕ ರೋಹಿತ್ ಶರ್ಮಾ, 'ಹೊಸ ಬಾಲ್‌ನೊಂದಿಗೆ ಟ್ರೆಂಟ್ ಬೌಲರ್ ವಿಶ್ವದ ನಂಬರ್ 1 ಬೌಲರ್' ಎಂದಿದ್ದಾರೆ. ಬೋಲ್ಟ್‌ನನ್ನು ಡೆಲ್ಲಿಯಿಂದ ನಾವು ಖರೀದಿಸಿದ್ದು ನಮ್ಮ ಅದೃಷ್ಟ ಎಂದಿದ್ದಾರೆ ರೋಹಿತ್ ಶರ್ಮಾ.

ಬೋಲ್ಟ್ ಫಿಟ್ ಆಗಿದ್ದಾರೆ: ರೋಹಿತ್
ಬೋಲ್ಟ್ ಗಾಯದ ಬಗ್ಗೆಯೂ ಮಾತನಾಡಿರುವ ರೋಹಿತ್ ಶರ್ಮಾ, 'ಟ್ರೆಂಟ್ ಬೋಲ್ಟ್ ಫಿಟ್ ಆಗಿದ್ದಾರೆ. ಮಂಗಳವಾರದ ಪಂದ್ಯದಲ್ಲಿ ಅವರು ಆಡಲಿದ್ದಾರೆ' ಎಂದಿದ್ದಾರೆ. ಅಷ್ಟೇ ಅಲ್ಲದೆ, ತಂಡದಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ ಎಂದೂ ಸಹ ಹೇಳಿದ್ದಾರೆ.

ದುಬೈನಲ್ಲಿ ಫೈನಲ್ ಪಂದ್ಯ
ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪರವಾಗಿ ದುಬೈ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಕ್ಕೆ ಪಂದ್ಯವು ಪ್ರಾರಂಭವಾಗಲಿದೆ. ಎರಡೂ ತಂಡಗಳು ಕಪ್‌ಗಾಗಿ ತೀವ್ರ ಸೆಣೆಸಾಟ ನಡೆಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications