IPL 2024: ಕ್ರಿಕೆಟ್ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿದ ಲಕ್ನೋ ವೇಗಿ ಐಪಿಎಲ್‌ನಿಂದ ಔಟ್; ರಾಹುಲ್ ಪಡೆಗೆ ಹಿನ್ನೆಡೆ
ಮೇ 5 ಭಾನುವಾರ, 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೆ.ಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಭಾರೀ ಹಿನ್ನೆಡೆ ಉಂಟಾಗಿದೆ.
ಐಪಿಎಲ್ ಟೂರ್ನಿಯ ಮುಂಬರುವ ಎಲ್ಲಾ ಪಂದ್ಯಗಳಿಂದ ಲಕ್ನೋ ಸೂಪರ್ ಜೈಂಟ್ಸ್‌ನ ವೇಗದ ಬೌಲರ್ ಮಯಾಂಕ್ ಯಾದವ್ ಹೊರಗುಳಿದಿದ್ದಾರೆ.ಹೊಟ್ಟೆಯ ಕೆಳಭಾಗದ ಗಾಯದಿಂದಾಗಿ ಮಯಾಂಕ್ ಯಾದವ್ ಹೊರಗುಳಿದಿದ್ದಾರೆ.

ಲಕ್ನೋ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ :
ಈ ಬಗ್ಗೆ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಲಕ್ನೋ ಸೂಪರ್ ಜೈಂಟ್ಸ್ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್, ಗ್ರೇಡ್ 1 ಟಿಯರ್ (ಸೈಡ್ ಸ್ಟ್ರೈನ್) ಕಾರಣದಿಂದಾಗಿ 21 ವರ್ಷದ ದೆಹಲಿ ಮೂಲದ ಆಟಗಾರನಾದ ಮಯಾಂಕ್ ಯಾದವ್ ಅವರನ್ನು ಐಪಿಎಲ್‌ನಿಂದ ಹೊರಗಿಡಲಾಗಿದೆ ಎಂದು ಖಚಿತಪಡಿಸಿದ್ದಾರೆ.
ಮಯಾಂಕ್ ಅವರ ಫಿಟ್‌ನೆಸ್ ಬಗ್ಗೆ ಕೇಳಿದಾಗ, ಪ್ಲೇ-ಆಫ್‌ನಲ್ಲಿ ಆಡಬೇಕೆಂದು ನಾವು ಪ್ರಾರ್ಥಿಸುತ್ತೇವೆ, ಆದರೆ ಅದು ಸಾಧ್ಯವಾಗುತ್ತದೆಯೋ ಅಥವಾ ಇಲ್ಲವೋ ಎಂಬುದರ ಕುರಿತು ನಾನು ಏನನ್ನೂ ಹೇಳಲು ಸಾಧ್ಯವಿಲ್ಲ. ಬಹುಶಃ ಟೂರ್ನಿಯ ಅಂತಿಮ ಹಂತ ತಲುಪುವುದು ಮಯಾಂಕ್ ಯಾದವ್‌ಗೆ ಕಷ್ಟವಾಗಬಹುದು ಎಂದು ಲ್ಯಾಂಗರ್ ಅವರು ತಿಳಿಸಿದ್ದಾರೆ.
ಗಂಟೆಗೆ 155.8 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿರುವ ಮಯಾಂಕ್ ಈವರೆಗೆ 4 ಐಪಿಎಲ್ ಪಂದ್ಯಗಳನ್ನು ಆಡಿದ್ದು, 7 ವಿಕೆಟ್ ಪಡೆದಿದ್ದಾರೆ. ಆದರೆ ಎರಡು ಪಂದ್ಯಗಳಲ್ಲಿ ಮಯಾಂಕ್ ತಮ್ಮ ಓವರ್‌ಗಳ ಕೋಟಾವನ್ನು ಪೂರ್ಣಗೊಳಿಸದೆ ಮೈದಾನದಿಂದ ಹೊರಗಿದ್ದರು. ಈ ವೇಗದ ಬೌಲರ್ ಗುಜರಾತ್ ಟೈಟಾನ್ಸ್ ವಿರುದ್ಧ ಮೊದಲ ಬಾರಿಗೆ ಗಾಯಗೊಂಡಿದ್ದರು. ಒಂದು ಓವರ್ ಬೌಲಿಂಗ್ ಮಾಡಿದ ನಂತರ ಮಯಾಂಕ್ ಸೈಡ್ ಸ್ಟ್ರೆನ್‌ನಿಂದ ಮೈದಾನದಿಂದ ಹೊರಗೆ ಹೋಗಿದ್ದರು.

ನಂತರ ಮುಂಬೈ ಇಂಡಿಯನ್ಸ್ ವಿರುದ್ಧ ಮಯಾಂಕ್ ಪುನರಾಗಮನ ಮಾಡಿದರು. ಆದರೆ 3.1 ಓವರ್ ಬೌಲಿಂಗ್ ಮಾಡಿದ ಬಳಿಕ ಕೂಡ ಮತ್ತೆ ಮಯಾಂಕ್ ಗಾಯಗೊಂಡಿದ್ದಾರೆ. ಈ ಹಿಂದೆ ಯಾವ ಭಾಗದಲ್ಲಿ ಗಾಯಗೊಂಡಿದ್ದರೋ ಅದೇ ಭಾಗದಲ್ಲಿ ಮತ್ತೆ ಮಯಾಂಕ್ ಗಾಯಗೊಂಡಿದ್ದಾರೆ ಎಂದು ಲ್ಯಾಂಗರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಆವೃತ್ತಿಯಿಂದಲೂ ಹೊರಬಿದ್ದಿದ್ದ ಮಯಾಂಕ್ :
2022ರ ಐಪಿಎಲ್ ಹರಾಜಿನಲ್ಲಿ ಕೇವಲ 20 ಲಕ್ಷ ರೂಪಾಯಿ ಮೂಲ ಬೆಲೆಗೆ 21 ವರ್ಷದ ವೇಗಿಯನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಖರೀದಿ ಮಾಡಿತು. ಆದರೆ ಮಯಾಂಕ್ ಯಾದವ್ ಅವರು ಅಭ್ಯಾಸ ಸಮಯದಲ್ಲಿ ಗಾಯಗೊಂಡಾಗ ಕಳೆದ ಆವೃತ್ತಿಯಲ್ಲಿ ದುರದೃಷ್ಟಕರವಾಗಿ ಹೊರಬಿದ್ದರು. ಇದರಿಂದಾಗಿ ಅವರು ಇಡೀ ಆವೃತ್ತಿಯನ್ನು ಕಳೆದುಕೊಳ್ಳಬೇಕಾಯಿತು. ನಂತರ ಗಾಯದ ಕಾರಣ ಅವರ ಬದಲಾಗಿ ಅರ್ಪಿತ್ ಗುಲೇರಿಯಾರನ್ನು ಆಯ್ಕೆ ಮಾಡಲಾಗಿತ್ತು.

ದೇಶಿ ಕ್ರಿಕೆಟ್‌ನಲ್ಲಿ ಮಿಂಚಿರುವ ಪ್ರತಿಭೆ :
ಮಯಾಂಕ್ ಯಾದವ್ ಅವರ ಟಿ20 ವೃತ್ತಿಜೀವನದಲ್ಲಿ ಆಡಿದ 12 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಅವರ ಲಿಸ್ಟ್ ಎ ವೃತ್ತಿಜೀವನದಲ್ಲಿ ಆಡಿದ 17 ಪಂದ್ಯಗಳಲ್ಲಿ 34 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮಯಾಂಕ್ ಯಾದವ್ ದೇಶೀಯ ಟೂರ್ನಿಯಲ್ಲಿ ದೆಹಲಿ ತಂಡವನ್ನು ಪ್ರತಿನಿಧಿಸುತ್ತಿದ್ದು, 2023-2024ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದರೂ, ಪಂಜಾಬ್ ವಿರುದ್ಧ ದೆಹಲಿ ಸೋತಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications