For Quick Alerts
ALLOW NOTIFICATIONS  
For Daily Alerts
 

IPL 2025: ಡೆಲ್ಲಿ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಲಕ್ನೋ ಸಜ್ಜು; ಪಂತ್-ರಾಹುಲ್ ಆಟದ ಮೇಲೆ ಚಿತ್ತ

ಐಪಿಎಲ್ 2025 ರ 40ನೇ ಪಂದ್ಯ ಏಪ್ರಿಲ್ 22, ಮಂಗಳವಾರ ಲಕ್ನೋ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡಗಳು ಸೆಣಸಾಡಲಿವೆ. ಕಳೆದ ಬಾರಿ ಡೆಲ್ಲಿ ಕ್ಯಾಟಪಿಲ್ಸ್ ಮುನ್ನಡೆಸಿದ್ದ ರಿಷಭ್ ಪಂತ್ ಐಪಿಎಲ್ 2025 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ. ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ನಾಯಕ ಕೆಎಲ್ ರಾಹುಲ್ ಅವರು ಈ ಬಾರಿ ಡೆಲ್ಲಿ ಕ್ಯಾಟಪಿಲ್ಸ್ ತಂಡದ ಪರ ಆಡುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯ ಭಾರಿ ಕುತೂಹಲ ಮೂಡಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿದ ಏಳು ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಸಾಧಿಸಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಸೋತಿದೆ. ಇತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡವು ಆಡಿದ 8 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಸಾಧಿಸಿದೆ. ರಾಜಸ್ಥಾನ ವಿರುದ್ಧದ ಕೊನೆಯ ಪಂದ್ಯದಲ್ಲಿ 2 ರನ್‌ಗಳ ಸಣ್ಣ ಅಂತರದ ಜಯಗಳಿಸಿದೆ.

Lucknow Super Giants vs Delhi Capitals IPL 2025 40th Match Preview

ಸೇಡಿಗೆ ಸಜ್ಜು

ಐಪಿಎಲ್ 2025 ರಲ್ಲಿ ಉಭಯ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಮೊದಲ ಪಂದ್ಯದಲ್ಲಿ ಲಕ್ನೋ ತಂಡದ ವಿರುದ್ಧ ಡೆಕ್ಕು 1 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಡೆಲ್ಲಿ ಪರ ಅಶುತೋಷ್ ಶರ್ಮಾ ಅಬ್ಬರಿಸಿ ಗೆಲುವಿನ ತಂದು ಕೊಟ್ಟಿದ್ದರು. ಈ ಸೋಲಿಗೆ ಸೇಡು ತಿರಿಸಿಕೊಳ್ಳಲಿ ರಿಷಭ್ ಪಂತ್ ಪಡೆ ಸಜ್ಜಾಗಿದೆ. ಲಕ್ನೋಗೆ ಮತ್ತೊಂದು ಟಕ್ಕರ್ ಕೊಡಲು ಡೆಲ್ಲಿ ರಣ ತಂತ್ರ ರೂಪಿಸಿದೆ.

ಹೆಡ್ ಟು ಹೆಡ್

ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ಒಟ್ಟು 6 ಪಂದ್ಯಗಳು ನಡೆದಿವೆ. ಉಭಯ ತಂಡಗಳು ತಲಾ 3 ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿವೆ. ಇಂದು ನಡೆಯಲಿರುವ ಪಂದ್ಯದಲ್ಲಿ ಯಾರು ಗೆದ್ದು ಪ್ರಾಬಲ್ಯ ಸಾಧಿಸುತ್ತಾರೆ? ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಐಪಿಎಲ್ 2025 ರಲ್ಲಿ ಉಭಯ ತಂಡಗಳು ಬಲಿಷ್ಠವಾಗಿದ್ದು, ಸ್ಟಾರ್ ಆಟಗಾರರಿಂದ ಕಂಗೊಳಿಸುತ್ತಿವೆ.

ಪಿಚ್ ವರದಿ

ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿರುವ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್‌ ಉತ್ತಮವಾಗಿದೆ. ಟಾಸ್ ಗೆದ್ದ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿ ಅಂಶದ ನಿರೀಕ್ಷೆಯಿರುವುದರಿಂದ ಚೇಸಿಂಗ್ ಮಾಡಲು ನೋಡಬೇಕು. ಈ ಸ್ಥಳದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಲಕ್ನೋ ಎದುರಿಸಿತು. ಒಟ್ಟು 12 ವಿಕೆಟ್‌ಗಳ ನಷ್ಟಕ್ಕೆ 334 ರನ್ ಗಳಿಸಲಾಯಿತು.

ಐಪಿಎಲ್ 2025 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಅದ್ಭುತ ಫಾರ್ಮ್‌ನಲ್ಲಿದೆ. ಲಕ್ನೋ ಪರ ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ನಿರಂತರವಾಗಿ ರನ್ ಕಲೆ ಹಾಕುತ್ತಿದ್ದಾರೆ. ಈ ಮೂವರು ಸ್ಪೋಟಕ ಬ್ಯಾಟರ್ಸ್ ಟಾಪ್ ಆರ್ಡರ್‍‌ನಲ್ಲಿ ತಂಡದ ಬಲ ಹೆಚ್ಚಿಸಿದ್ದಾರೆ. ಇನ್ನೂ ಬೌಲಿಂಗ್‌ನಲ್ಲಿ ದಿಗ್ವೇಶ್‌ ರಾಠಿ, ರವಿ ಬಿಷ್ಣೋಯಿ, ಆವೇಶ್‌ ಖಾನ್‌ ಮತ್ತು ಶಾರ್ದೂಲ್ ಠಾಕೂರ್‌ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ರಾಜಸ್ಥಾನ ವಿರುದ್ಧದ ಕಳೆದ ಪಂದ್ಯದಲ್ಲಿ ಆವೇಶ್‌ ಖಾನ್‌ ಡೆತ್‌ ಓವರ್‍‌ಗಳಲ್ಲಿ ಉರಿ ಬೌಲಿಂಗ್ ದಾಳಿ ನಡೆಸಿದ್ದರು. ಕೊನೆಯ ಓವರ್‌ನಲ್ಲಿ ರಾಜಸ್ಥಾನ ಗೆಲುವಿಗೆ 9 ರನ್‌ಗಳು ಅವಶ್ಯಕತೆ ಇದ್ದಾಗ ಆವೇಶ್‌ ಕೇವಲ 7 ರನ್‌ ನೀಡಿ ಲಕ್ನೋ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಎಲ್‌ಎಸ್‌ಜಿ ಟಾಪ್ ರನ್ ಗೆಟರ್ಸ್

ನಿಕೋಲಸ್ ಪೂರನ್- 8 ಪಂದ್ಯ, 368 ರನ್
ಮಿಚೆಲ್ ಮಾರ್ಷ್- 7 ಪಂದ್ಯ, 299 ರನ್
ಐಡೆನ್ ಮಾರ್ಕ್ರಾಮ್- 8 ಪಂದ್ಯ, 274 ರನ್

ಎಲ್‌ಎಸ್‌ಜಿ ಟಾಪ್ ವಿಕೆಟ್‌ ಟೇಕರ್ಸ್

ಶಾರ್ದೂಲ್ ಠಾಕೂರ್- 8 ಪಂದ್ಯ, 12 ವಿಕೆಟ್‌
ದಿಗ್ವೇಶ್‌ ರಾಠಿ- 8 ಪಂದ್ಯ, 9 ವಿಕೆಟ್
ಅವೇಶ್ ಖಾನ್- 7 ಪಂದ್ಯ, 8 ವಿಕೆಟ್

ಲಕ್ನೋ ಸೂಪರ್ ಜೈಂಟ್ಸ್: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್ (ವಿಕೆಟ್‌ಕೀಪರ್-ಬ್ಯಾಟರ್), ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ರವಿ ಬಿಷ್ಣೋಯ್, ಶಾರ್ದೂಲ್ ಠಾಕೂರ್, ಪ್ರಿನ್ಸ್ ಯಾದವ್, ದಿಗ್ವೇಶ್ ಸಿಂಗ್ ರಾಠಿ, ಅವೇಶ್ ಖಾನ್.

ಡೆಲ್ಲಿ ಕ್ಯಾಟಪಿಲ್ಸ್ ಕೂಡ ಐಪಿಎಲ್ 2025 ರಲ್ಲಿ ವಿಭಿನ್ನ ತಂಡವಾಗಿ ರೂಪುಗೊಂಡಿದೆ. ಬ್ಯಾಟಿಂಗ್, ಬೌಲಿಂಗ್ ವಿಭಾಗಗಳಲ್ಲಿ ಕ್ಲಾಸಿಕ್ ಪ್ರದರ್ಶನ ನೀಡುತ್ತಿದೆ. ನಾಯಕ ಅಕ್ಸರ್ ಪಟೇಲ್ ಭರ್ಜರಿ ಆಲ್‌ರೌಂಡರ್ ಪ್ರದರ್ಶನ ನೀಡುತ್ತಿದ್ದಾರೆ. ಕೆಎಲ್ ರಾಹುಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ತಂಡದ ಪರ ರನ್ ಗಳಿಸುತ್ತಿದ್ದಾರೆ. ಇದಲ್ಲದೆ, ಯುವ ಬ್ಯಾಟರ್‍ ಅಭಿಷೇಕ್ ಪೂರಲ್ ಕೂಡ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್ ಮತ್ತು ಕುಲ್‌ದೀಪ್ ಯಾದವ್ ಮಿಂಚುತ್ತಿದ್ದಾರೆ. ಮತ್ತೊಂದೆಡೆ ಡೆಲ್ಲಿ ತಂಡಕ್ಕೆ ವಿಪ್ರಜ್ ನಿಗಮ್ ವಿಕೆಟ್ ಟೇಕರ್ ಬೌಲರ್ ಆಗಿದ್ದಾರೆ.

ಡಿಸಿ ಟಾಪ್ ರನ್ ಗೆಟರ್ಸ್

ಕೆಎಲ್ ರಾಹುಲ್- 6 ಪಂದ್ಯ, 266 ರನ್
ಟ್ರಿಸ್ಟಾನ್ ಸ್ಟಬ್ಸ್- 7 ಪಂದ್ಯ, 183 ರನ್
ಅಭಿಷೇಕ್ ಪೂರೆಲ್- 7 ಪಂದ್ಯ, 174 ರನ್

ಡಿಸಿ ಟಾಪ್ ವಿಕೆಟ್ ಟೇಕರ್ಸ್

ಕುಲ್‌ದೀಪ್ ಯಾದವ್- 7 ಪಂದ್ಯ, 12 ವಿಕೆಟ್
ಮಿಚೆಲ್ ಸ್ಟಾರ್ಕ್- 7 ಪಂದ್ಯ, 10 ವಿಕೆಟ್
ವಿಪ್ರಜ್ ನಿಗಮ್- 7 ಪಂದ್ಯ, 7 ವಿಕೆಟ್

ಡೆಲ್ಲಿ ಕ್ಯಾಪಿಟಲ್ಸ್: ಅಭಿಷೇಕ್ ಪೂರೆಲ್, ಕರುಣ್ ನಾಯರ್, ಕೆಎಲ್ ರಾಹುಲ್ (ವಿಕೆಟ್‌ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಕ್ಸರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ಮೋಹಿತ್ ಶರ್ಮಾ, ಮುಖೇಶ್ ಕುಮಾರ್.

Story first published: Tuesday, April 22, 2025, 7:07 [IST]
Other articles published on Apr 22, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+