Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 LSG: ರಿಷಭ್ ಪಂತ್ ಪಡೆ ಸೋಲಿನ ಗಾಯದ ಮೇಲೆ ದಂಡದ ಬರೆ

ಐಪಿಎಲ್ 2025 ರ 45ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಸೋಲನ್ನು ಅನುಭವಿಸಿತು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ತಂಡವು ಲಕ್ನೋವನ್ನು 54 ರನ್‌ಗಳಿಂದ ಸೋಲಿಸಿತು. ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಅವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರಿ ದಂಡ ವಿಧಿಸಿದೆ. ಇದರಿಂದ ಅವರಿಗೆ ದೊಡ್ಡ ಆಘಾತವಾಗಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾರಂಣ ರಿಷಭ್ ಪಂತ್ ಮೇಲೆ ದಂಡ ವಿಧಿಸಲಾಗಿದೆ. ರಿಷಭ್ ನೇತೃತ್ವದ ಲಕ್ನೋ ತಂಡವೂ ಐಪಿಎಲ್ 2025 ರಲ್ಲಿ ಎರಡನೇ ಬಾರಿಗೆ ಈ ತಪ್ಪನ್ನು ಮಾಡಿರುವುದು ಕಂಡು ಬಂದಿದೆ.

Lucknow Supergiants captain Rishabh Pant fined by BCCI after defeat against Mumbai Indians

ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್ ಸಮಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕೊನೆಯಲ್ಲಿ ಒಂದು ಓವರ್ ಹಿಂದಿತ್ತು. ಈ ಕಾರಣದಿಂದಾಗಿ ಲಕ್ನೋ 20ನೇ ಓವರ್‍‌ನ್ಲಿ ಹೆಚ್ಚುವರಿ ಫೀಲ್ಡರ್ ಅನ್ನು ಕಣಕ್ಕಿಳಿಸಬೇಕಾಯಿತು. ಪಂದ್ಯದ ನಂಯತರ, ಬಿಸಿಸಿಐ ನಾಯಕ ರಿಷಭ್ ಪಂತ್ ವಿರುದ್ಧ ಕ್ರಮ ಕೈಗೊಂಡು ಲಕ್ಷ ರೂ. ದಂಡ ವಿಧಿಸಿತು.

ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್ 2025 ರಲ್ಲಿ ಎರಡನೇ ಬಾರಿ ಈ ತಪ್ಪನ್ನು ಮಾಡಿದ್ದು, ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ ಪಂತ್ ಅವರಿಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಆಡುವ 11 ಜನರ ತಂಡದ ಇತಸ ಆಟಗಾರರು ಮತ್ತು ಇಂಪ್ಯಾಕ್ಟ್ ಆಟಗಾರರಿಗೆ 6 ಲಕ್ಷ ರೂ. ಅಥವಾ ಅವರ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ.

ರಾಜಸ್ಥಾನ ರಾಯಲ್ಸ್ ನಂತರ ಎರಡು ಬಾರಿ ದಂಡ ವಿಧಿಸಿದ ಸೀಸನ್‌ನ ಎರಡನೇ ತಂಡ ಲಕ್ನೋ ಸೂಪರ್ ಜೈಂಟ್ಸ್ ಆಗಿದೆ. ಮಾರ್ಚ್‌ನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ನಿಧಾನಗತಿಯ ಓವರ್ ರೇಟ್‌ಗಾಗಿ ರಿಯಾನ್ ಪರಾಗ್‌ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಯಿತು. ಇದಾದ ನಂತರ, ಏಪ್ರಿಲ್ 9 ರಂದು ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ನಂತರ ತಂಡದ ನಿಯಮಿತ ನಾಯಕ ಸಂಜು ಸ್ಯಾಮ್ಸನ್ ಅವರಿಗೆ 25 ಲಕ್ಷ ರೂ. ದಂಡ ವಿಧಿಸಲಾಯಿತು.

ರಿಷಬ್ ಪಂತ್ ಐಪಿಎಲ್ 2025 ರಲ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ರಿಷಭ್ ಪಂತ್ ಘರ್ಜಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಇಲ್ಲಿಯೂ ಅಭಿಮಾನಿಗಳನ್ನು ರಿಷಭ್ ಪಂತ್ ನಿರಾಶೆಗೊಳಿಸಿದರು. ಇಲ್ಲಿಯವರೆಗೆ 10 ಪಂದ್ಯಗಳಲ್ಲಿ ರಿಷಭ್ ಪಂತ್ 12.22 ಸರಾಸರಿ ಮತ್ತು 98.21 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 110 ರನ್‌ಗಳನ್ನು ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 63 ರನ್‌ಗಳು.

ಸೂಪರ್ ಜೈಂಟ್ಸ್ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯಬೇಕಾದರೆ, ಉಳಿದ ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಬೇಕಾಗಿದೆ. ಎಂಐ ವಿರುದ್ಧ ಸೋತ ನಂತರ, ಲಕ್ನೋ 10 ರಲ್ಲಿ 5 ಗೆಲುವುಗಳು ಮತ್ತು -0.325 ರನ್ ರೇಟ್‌ನೊಂದಿಗೆ 10 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.

Story first published: Monday, April 28, 2025, 14:44 [IST]
Other articles published on Apr 28, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+