ಮೇ 18 ಶನಿವಾರ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 67ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಗೆಲುವು ಸಾಧಿಸಿದೆ.
ಮುಂಬೈ ಪರ ರೋಹಿತ್ ಶರ್ಮಾ ಆರಂಭದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದರೆ, ಕೊನೆಯಲ್ಲಿ ನೆಹಾಲ್ ವಧೇರಾ ಅರ್ಧಶತಕ ಸಿಡಿಸಿ ಮಿಂಚಿದರು. ಆದರೂ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಲಷ್ಟೇ ಮುಂಬೈ ಶಕ್ತವಾಯಿತು. ಈ ಮೂಲಕ ಲಕ್ನೋ 18 ರನ್ ಗಳಿಂದ ಗೆದ್ದು ಬೀಗಿತು.

ಲಕ್ನೋ ನೀಡಿದ ಗುರಿ ಬೆನ್ನಟ್ಟಿದ್ದ ಮುಂಬೈ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಡೆವಾಲ್ಡ್ ಬ್ರೆವಿಸ್ ಕಣಕ್ಕೀಳಿದರು. ಅಂದುಕೊಂಡತೆ ಈ ಜೋಡಿ ಶುರುವಿನಿಂದಲ್ಲೇ ಉತ್ತಮ ರನ್ ಕಲೆ ಹಾಕಿದರು. ಮೊದಲ ವಿಕೆಟ್ 88 ರನ್‌ಗಳ ಜೊತೆಯಾಟವಾಡಿದರು.
ಉತ್ತಮವಾಗಿ ಆಡುತ್ತಿದ ಡೆವಾಲ್ಡ್ ಬ್ರೆವಿಸ್ (23) ನವೀನ್-ಉಲ್-ಹಕ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ಮುಂಬೈ ಪರ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯನ್ನು ಹುಸಿ ಮಾಡಿದರು.
ಬಂದ ದಾರಿಗೆ ಸುಂಕವಿಲ್ಲದಂತೆ ಸೂರ್ಯಕುಮಾರ್ ಯಾದವ್ ಅವರು ಕೃನಾಲ್ ಪಾಂಡ್ಯ ಬೌಲಿಂಗ್‌ನಲ್ಲಿ ಔಟ್ ಆದರು. ಮತ್ತೊಂದೆಡೆ ಸ್ಪೋಟಕ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಅರ್ಧಶತಕ ಸಿಡಿಸುವ ಮೂಲಕ ಫಾರ್ಮಾಗೆ ಮರಳಿದರು.
ರೋಹಿತ್ ಶರ್ಮಾ ಕೇವಲ 38 ಎಸೆತಗಳಲ್ಲಿ 10 ಬೌಂಡರಿ ಹಾಗು 3 ಸಿಕ್ಸರ್ ನೆರವಿನಿಂದ 68 ರನ್ ಗಳಿಸಿ ರವಿ ಬಿಷ್ಣೋಯ್ ಬೌಲಿಂಗ್ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಹೇಳಿ ಕೊಳ್ಳುವಂತ ಪ್ರದರ್ಶನ ನೀಡುವಲ್ಲಿ ಎಡುವಿದರು.
ಕೇವಲ 16 ರನ್‌ಗಳಿಗೆ ಸೀಮಿತವಾದ ಪಾಂಡ್ಯ ಮೊಹ್ಸಿನ್ ಖಾನ್ ಬೌಲಿಂಗ್‌ನಲ್ಲಿ ಔಟ್ ಆದರು. ಬಳಿಕ ನೆಹಾಲ್ ವಧೇರಾ (1) ರವಿ ಬಿಷ್ಣೋಯ್ ಅವರಿಗೆ ವಿಕೆಟ್ ಒಪ್ಪಿಸಿದರು.
ಈ ವೇಳೆ ಒಂದಾದ ಇಶಾನ್ ಕಿಶನ್ ಮತ್ತು ನೆಹಾಲ್ ವಧೇರಾ ನಿಧಾನವಾಗಿ ರನ್ ಗಳಿಸಿದರು. ಕೊನೆಯಲ್ಲಿ ಹೋರಾಟ ನಡೆಸಿದ ನೆಹಾಲ್ ವಧೇರಾ ಕೇವಲ 28 ಎಸೆತಗಳಲ್ಲಿ 5 ಸಿಕ್ಸರ್ ಹಾಗು 4 ಬೌಂಡರಿ ಮೂಲಕ ಅಜೇಯ 62 ರನ್ ಗಳಿಸಿದರು. ಇಶಾನ್ ಕಿಶನ್ (14) ನವೀನ್-ಉಲ್-ಹಕ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು. ರೊಮಾರಿಯೋ ಶೆಫರ್ಡ್ ಅಜೇಯ 1 ರನ್ ಗಳಿಸಿದರು.
ಲಕ್ನೋ ಪರ ನವೀನ್-ಉಲ್-ಹಕ್ ಮತ್ತು ರವಿ ಬಿಷ್ಣೋಯ್ 2 ವಿಕೆಟ್ ಪಡೆದುಕೊಂಡರೆ, ಕೃನಾಲ್ ಪಾಂಡ್ಯ, ಮೊಹ್ಸಿನ್ ಖಾನ್ ತಲಾ 1 ವಿಕೆಟ್ ಕಬಳಿಸಿದರು.