Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗ್ರೇಗ್ ಚಾಪೆಲ್ ಕೋಚ್ ಆಗಿ ಪಡೆಯಲು ನಾವು ಅದೃಷ್ಟ ಮಾಡಿದ್ದೆವು: ಸುರೇಶ್ ರೈನಾ

lucky to have coach like him: Suresh Raina praises Greg Chappell

ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ವಿವಾದಾತ್ಮಕ ಕೋಚ್ ಆಗಿರುವ ಗ್ರೇಗ್ ಚಾಪೆಲ್ ಅವರ ಮಾರ್ಗದರ್ಶನದಲ್ಲಿ ಆಡಿದ ಅನುಭವವನ್ನು ಸುರೇಶ್ ರೈನಾ ಹಂಚಿಕೊಂಡಿದ್ದು ಕುತೂಹಲಕಾರಿ ವಿಚಾರವೊಂದನ್ನು ವಿವರಿಸಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಬಹುತೇಕ ಆಟಗಾರರು ಗ್ರೇಗ್ ಚಾಪೆಲ್ ಅವರ ಕೋಚ್ ಅವಧಿಯ ಬಗ್ಗೆ ನಕಾರಾತ್ಮಕವಾಗಿಯೇ ಮಾತನಾಡುತ್ತಾರೆ. ಚಾಪೆಲ್ ಅವಧಿಯಲ್ಲಿ ತಂಡದಲ್ಲಿ ಉಂಟಾಗಿದ್ದ ಗೊಂದಲದ ವಾತಾವರಣ ಇದಕ್ಕೆ ಪ್ರಮುಖ ಕಾರಣವಾಗಿದೆ. ಕೋಚ್ ಆಗಿದ್ದು ತಂಡವನ್ನು ಇಬ್ಬಾಗ ಮಾಡಿದ್ದರು ಎಂಬ ಅಭಿಪ್ರಾಯವನ್ನು ಹಿರಿಯ ಕ್ರಿಕೆಟಿಗರು ವ್ಯಕ್ತಪಡಿಸುತ್ತಾರೆ. ಅದರಲ್ಲೂ ಸೌರವ್ ಗಂಗೂಲಿ ಜೊತೆಗೆ ಚಾಪೆಲ್ ನಡೆದುಕೊಂಡ ರೀತಿ ಬಹುತೇಕ ಎಲ್ಲಾ ಭಾರತೀಯ ಕ್ರಿಕೆಟ್ ಪ್ರೇಮಿಗಳ ನೆನಪಿನಲ್ಲಿ ಉಳಿದುಕೊಂಡಿರುತ್ತದೆ.

ಆದರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆಯನ್ನು ನೀಡಿದ್ದಾರೆ. ಅವರು ಹೇಳಿದ್ದೇನು? ಮುಂದೆ ಓದಿ..

ಗ್ರೇಚ್ ಚಾಪೆಲ್ ಬಗ್ಗೆ ಮೆಚ್ಚುಗೆಯ ಮಾತು

ಗ್ರೇಚ್ ಚಾಪೆಲ್ ಬಗ್ಗೆ ಮೆಚ್ಚುಗೆಯ ಮಾತು

ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಮಾತ್ರ ಗ್ರೇಗ್ ಚಾಪೆಲ್ ಕೋಚ್ ಅವಧಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಲ್ಲದೆ ಅಂಥಾ ಕೋಚ್‌ನ್ನು ವೃತ್ತಿ ಜೀವನದ ಆರಂಭದ ಕಾಲದಲ್ಲಿ ಪಡೆದಿರುವುದಕ್ಕೆ ಅದೃಷ್ಟ ಮಾಡಿದ್ದೆ ಎಂದಿದ್ದಾರೆ. ಗೌರವ್ ಕಪೂರ್ ಜೊತೆಗಿನ 'ದಿ 22 ಯಾರ್ನ್ಸ್' ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಸುರೇಶ್ ರೈನಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶಿಸ್ತುಬದ್ಧ ವ್ಯಕ್ತಿ ಚಾಪೆಲ್

ಶಿಸ್ತುಬದ್ಧ ವ್ಯಕ್ತಿ ಚಾಪೆಲ್

ಅಂದಿನ ತಂಡದಲ್ಲಿದ್ದ ಯುವ ಆಟಗಾರರಾದ್ದ ಸ್ವತಃ ಸುರೇಶ್ ರೈನಾ ಸಹಿತ ಇರ್ಫಾನ್ ಪಠಾಣ್, ರಾಬಿನ್ ಉತ್ತಪ್ಪ ಅವರೊಂದಿಗೆ ಎಷ್ಟು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದರು ಎಂಬುದನ್ನು ವಿವರಿಸಿದ್ದಾರೆ. "ನನ್ನ ಪ್ರಕಾರ ಅವರು(ಗ್ರೇಗ್ ಚಾಪೆಲ್) ಹಾಗೂ ರಾಹುಲ್ ದ್ರಾವಿಡ್ ಅತ್ಯಂತ ಶಿಸ್ತುಬದ್ಧ ವ್ಯಕ್ತಿಗಳಾಗಿದ್ದರು. ನಾನು ಮತ್ತು ತಂಡದಲ್ಲಿದ್ದ ಯುವ ಆಟಗಾರರು ಸಾಕಷ್ಟು ಕಠಿಣ ಪರಿಶ್ರಮವನ್ನು ಪಡುತ್ತಿದ್ದೆವು" ಎಂದು ಸುರೇಶ್ ರೈನಾ ವಿವರಿಸಿದ್ದಾರೆ,

ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ | Oneindia Kannada
ಯುವ ಆಟಗಾರರನ್ನು ಬೆಂಬಲಿಸುತ್ತಿದ್ದರು

ಯುವ ಆಟಗಾರರನ್ನು ಬೆಂಬಲಿಸುತ್ತಿದ್ದರು

"ಅವರು ಸಾಕಷ್ಟು ಯುವ ಆಟಗಾರರು ತಂಡದಲ್ಲಿರುವುದನ್ನು ಬಯಸಿದ್ದರು. ಯುವ ಆಟಗಾರರನ್ನು ಸಾಕಷ್ಟು ಬೆಂಬಲಿಸುತ್ತಿದ್ದ ಅವರಂತಾ ಕೋಚ್‌ಅನ್ನು ಪಡೆಯಲು ನಾವು ಅದೃಷ್ಟ ಮಾಡಿದ್ದೆವು. ಅವರು ಭಾರತ ತಂಡವನ್ನು ಫೀಲ್ಡಿಂಗ್‌ನಲ್ಲಿ ನಂಬರ್ 1 ತಂಡವನ್ನಾಗಿ ಮಾಡಲು ಬಯಸಿದ್ದರು" ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ.

Story first published: Thursday, July 15, 2021, 23:27 [IST]
Other articles published on Jul 15, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+