ನ್ಯೂಜಿಲೆಂಡ್‌ಗೆ ನೂತನ ಬ್ಯಾಟಿಂಗ್ ಕೋಚ್ ಆಗಿ ಲ್ಯೂಕ್ ರೊಂಚಿ ಆಯ್ಕೆ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಲ್ಯೂಕ್ ರೊಂಚಿ ನ್ಯೂಜಿಲೆಂಡ್‌ಗೆ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಲ್ಯೂಕ್ ಅವರು ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಪೀಟರ್ ಫುಲ್ಟನ್ ಸ್ಥಾನ ಆವರಿಸಿಕೊಂಡಿದ್ದಾರೆ. ಫುಲ್ಟನ್ ಅವರು ಪ್ರಥಮದರ್ಜೆ ತಂಡ ಕ್ಯಾಂಟರ್‌ಬರಿಗೆ ಮುಖ್ಯ ಕೋಚ್ ಆಯ್ಕೆಯಾಗಿದ್ದರಿಂದ ಸ್ಥಾನದಿಂದ ಕೆಳಗಿಳಿದಿದ್ದರು.
ನ್ಯೂಜಿಲೆಂಡ್ ಕ್ರಿಕೆಟ್ ವೃತ್ತಿ ಬದುಕನ್ನು ಲ್ಯೂಕ್ ರೊಂಚಿ 2017ರಲ್ಲಿ ಕೊನೆಗೊಳಿಸಿದ್ದರು. ಆ ಬಳಿಕ ಲ್ಯೂಕ್ ನ್ಯೂಜಿಲೆಂಡ್ ರಾಷ್ಟ್ರೀಯ ತಂಡಕ್ಕೆ ಫೀಲ್ಡಿಂಗ್ ಮತ್ತು ವಿಕೆಟ್ ಕೀಪಿಂಗ್ ವಿಚಾರದಲ್ಲಿ ಸಹಾಯ ನೀಡುತ್ತಿದ್ದರು. ಲ್ಯೂಕ್ 4 ಟೆಸ್ಟ್ ಪಂದ್ಯಗಳಲ್ಲಿ 319 ರನ್, 85 ಏಕದಿನ ಪಂದ್ಯಗಳಲ್ಲಿ 1397 ರನ್ ಮತ್ತು 33 ಟಿ20ಐ ಪಂದ್ಯಗಳಲ್ಲಿ 359 ರನ್ ಗಳಿಸಿದ್ದಾರೆ.
ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಸುಮಾರು ಒಂದು ವರ್ಷ ಜೊತೆಗಿದ್ದ ಪೀಟರ್ ಫುಲ್ಟನ್, ಕಳೆದ ಜುಲೈನಲ್ಲಿ ತನ್ನ ಸ್ಥಾನದಿಂದ ಕೆಳಗಿಳಿದಿದ್ದರು. ಕಿವೀಸ್‌ಗೆ ಕೋಚ್ ಆಗಿ ಆಯ್ಕೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಲ್ಯೂಕ್, 'ನನಗೆ ನಿಜಕ್ಕೂ ಈ ಸಂಗತಿ ಉತ್ಸಾಹ ತಂದಿದೆ,' ಎಂದಿದ್ದಾರೆ.
'ಇತ್ತೀಚಿನ ಸೀಸನ್‌ಗಳಲ್ಲಿ ತಂಡಕ್ಕೆ ಬೆಂಬಲಿಸುವುದನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ. ಈ ಸಾರಿ ಫುಲ್ ಟೈಮ್ ಆಗಿ ತಂಡಕ್ಕೆ ಬಲ ತುಂಬುವ ಅವಕಾಶ ಸಿಕ್ಕಿದ್ದಕ್ಕೆ ನಾನು ಉತ್ಸುಕನಾಗಿದ್ದೇನೆ,' ಎಂದು ಲ್ಯೂಕ್ ಖುಷಿ ಹಂಚಿಕೊಂಡಿದ್ದಾರೆ. ಇನ್ನು ಎರಡು ವಾರಗಳಲ್ಲಿ ನ್ಯೂಜಿಲೆಂಡ್-ವೆಸ್ಟ್ ಇಂಡೀಸ್ ಸರಣಿ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications