Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾಸ್ಯಕ್ಕೆ ತುತ್ತಾಗುತ್ತಿದೆ ಆರ್‌ಸಿಬಿ ಸೋಲು: ಬನ್ನಿ ನಾವೂ ಕೊಂಚ ಹಲ್ಲುಕಿಸಿಯೋಣ..

Lynn powers KKR to six-wicket victory over RCB-twitter Reactions

ಬೆಂಗಳೂರು, ಏ. 30: ಆರ್‌ಸಿಬಿ ಗೆದ್ದರೆ ಬೆಂಗಳೂರು ಅಭಿಮಾನಿಗಳು ಹುಚ್ಚೆದ್ದು ಸಂಭ್ರಮವನ್ನಾಚರಿಸುತ್ತಾರೆ. ಅದೇ ಸೋತರೆ? ಹಹ್ಹ.. ಸೋತರೂ ಆ ಸೋಲನ್ನೇ ಮುಂದಿಟ್ಟು ಗಮ್ಮತ್ತು ಮಾಡುತ್ತಾರೆ.

ಒಟ್ಟಿನಲ್ಲಿಗೆಲ್ಲಲಿ ಎಂದು ಕಾಯುವ ತಂಡ ಸಾಲು ಸಾಲಾಗಿ ಸೋಲುತ್ತಿದ್ದರೆ ಆ ಸೋಲಿನ ಬೇಜಾರು ತಮಾಷೆಯಾಗಿ ಹೇಗೆಲ್ಲಾ ಹೊರ ಹೊಮ್ಮುತ್ತದೆ ಎನ್ನುವುದಕ್ಕೆ ಆರ್‌ಸಿಬಿ ಸೋಲೇ ಒಳ್ಳೆಯ ನಿದರ್ಶನ. ಅದೂ ಸಾಮಾಜಿಕ ಜಾಲತಾಣಗಳ ಭರಾಟೆ ಜೋರಿರುವ ಈ ಕಾಲದಲ್ಲಿ ಬೆಂಗಳೂರು (175/4/20) ಮತ್ತು ಕೋಲ್ಕತ್ತಾ (176/4/19.1) ನಡುವಿನ ನೆನ್ನೆಯ ಪಂದ್ಯದ ಸೋಲು ಹೇಗೆಲ್ಲ ನವೀನ ಹಾಸ್ಯಕ್ಕೆ ತುತ್ತಾಗಿದೆ ನೋಡಿ ಹಲ್ಲು ಕಿಸಿಯೋಣ ಬನ್ನಿ..

ಸ್ಕೋರ್ ಕಾರ್ಡ್

ಶಕ್ತಿಮಾನ್ ಗೆ ಹೋಲಿಕೆ

ಆರ್‌ಸಿಬಿ ಸೋಲನ್ನು ಶಕ್ತಿಮಾನ್ ಸೀರಿಯಲ್‌ಗೆ ಹೋಲಿಸಲಾಗಿದೆ. ಮಾಧ್ಯಮಗಳಲ್ಲಿ ಆರ್‌ಸಿಬಿ ತಂಡವನ್ನು ನೆಚ್ಚಿನ ತಂಡವಾಗಿ ಬಿಂಬಿಸಲಾಗುತ್ತಿದೆ. ಆದರೆ ಮೈದಾನದಲ್ಲಿ ಆರ್‌ಸಿಬಿ ನೀರಸ ಪ್ರದರ್ಶನ ನೀಡುತ್ತಿದೆ ಎಂದು ಧ್ವನಿಗುಟ್ಟುವಂತೆ ಶಕ್ತಿಮಾನ್ ಚಿತ್ರಗಳನ್ನು ಜಾಲತಾಣಗಳಲ್ಲಿ ಹಾಕಲಾಗಿದೆ. ಇಲ್ಲಿ ಕಥಾನಾಯಕ ನಾಯಕ ಶಕ್ತಿಮಾನ್ ಆಗಿ ಬದಲಾಗುವುದನ್ನು ಮಾಧ್ಯಮಗಳಲ್ಲಿ ಆರ್‌ಸಿಬಿ ಮಿಂಚುವುದಕ್ಕೆ ಹೋಲಿಸಿದ್ದರೆ, ಕಥಾನಾಯಕ ಸಾಮಾನ್ಯನಾಗಿ, ಅಸಹಾಯಕನಾಗಿ ಇರುವಾಗಿನ ಸ್ಥಿತಿಯನ್ನು ಆರ್‌ಸಿಬಿ ಮೈದಾನದಲ್ಲಿರುವಾಗಿನ ಸ್ಥಿತಿಗೆ ಹೋಲಿಸಲಾಗಿದೆ.

ಕೃತಕತೆಗೆ ಹಾಸ್ಯ

ಆರ್‌ಸಿಬಿ ಸೋಲೋದು ಗೊತ್ತಿದ್ದೂ ಅನುಷ್ಕಾ ಆರ್‌ಸಿಬಿಯನ್ನು ಹುರಿದುಂಬಿಸುವ ಪ್ರಯತ್ನ ಮಾಡಿದ್ದನ್ನು ಗೇಲಿ ಮಾಡಿ ಮಸ್ತ್ ಮಲಾಂಗ್ ಟ್ವಿಟರ್ ಪೇಜ್ನಲ್ಲಿ ಹಾಸ್ಯ ವ್ಯಕ್ತವಾಗಿದೆ.

ಆರ್‌ಸಿಬಿ ಅಭಿಮಾನಿಗಳ ಸ್ಥಿತಿಯಿದು!

ಚಿತ್ರವೊಂದರ ವೀಡಿಯೋ ತುಣುಕೊಂದನ್ನು ಹೆಕ್ಕಿ ಆರ್‌ಸಿಬಿ ಅಭಿಮಾನಿಗಳನ್ನು ಗೇಲಿ ಮಾಡಲಾಗಿದೆ. ಬೆಂಗಳೂರು ಗೆಲ್ಲುತ್ತೆ ಗೆಲ್ಲುತ್ತೇ ಅಂದುಕೊಂಡ ಕುಣಿದಾಡುವ ಬೆಂಗಳೂರು ಅಭಿಮಾನಿಗಳ ಪಾಡು ಆರ್‌ಸಿಬಿ ಸೋತಾಗ ನಗುವುದೋ ಅಳುವುದೋ ಎಂಬಂತಾಗುವುದನ್ನು ಇಲ್ಲಿ ಹಾಸ್ಯ ಮಾಡಲಾಗಿದೆ. ಪಂದ್ಯಕ್ಕೂ ಮೊದಲು ಜೋಶ್ ನಲ್ಲಿದ್ದ ಆರ್‌ಸಿಬಿ ಅಭಿಮಾನಿಗಳು ಪಂದ್ಯದ ಬಳಿಕ ಮುಖ ಮುಚ್ಚಿ ಅಳಬೇಕಾದ ಪರಿಸ್ಥಿತಿ ಇಲ್ಲಿ ಹಾಸ್ಯಕ್ಕೆ ತುತ್ತಾಗಿದೆ.

ಏಕಾಂಗಿ ಹೋರಾಟ ವ್ಯರ್ಥ

ಹಿಂದೆ ಅನೇಕ ಸಾರಿ ಸಚಿನ್ ತೆಂಡೂಲ್ಕರ್ ಭಾರತವನ್ನು ಗೆಲ್ಲಿಸಲು ಏಕಾಂಗಿಯಾಗಿ ಹೋರಾಡಿದ್ದನ್ನು ಇಲ್ಲಿ ಸ್ಮರಿಸಲಾಗಿದೆ. ಭಾನುವಾರದ ಕೆಕೆಆರ್-ಬೆಂಗಳೂರು ಪಂದ್ಯದಲ್ಲಿ ಕೊಹ್ಲಿ ಏಕಾಂಗಿ ಹೋರಾಡಿದ್ದರ ಹೊರತಾಗಿಯೂ ಆರ್‌ಸಿಬಿ ಸೋತಿದ್ದನ್ನು ವಿಡಂಬಿಸಲಾಗಿದೆ.

Story first published: Tuesday, May 8, 2018, 14:55 [IST]
Other articles published on May 8, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+