Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಕೆವಿನ್ ಪೀಟರ್ಸನ್ ಮಗನಿಗೆ ಜೆರ್ಸಿ ಗಿಫ್ಟ್ ಕೊಟ್ಟ ವಿರಾಟ್

ವಿರಾಟ್ ಕೊಹ್ಲಿ ವಿಶ್ವದೆಲ್ಲೆಡೆ ಕೋಟ್ಯಾಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗ. ಪಂದ್ಯ ನೋಡಲು ಸ್ಟೇಡಿಯಂಗೆ ಬರುವವರಿಗಿಂತ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ನೋಡಲು ಬರುವ ಜನರೇ ಹೆಚ್ಚು. ಇತ್ತೀಚೆಗೆ ರಣಜಿ ಟ್ರೋಫಿ ಪಂದ್ಯದ ವೇಳೆ ದೆಹಲಿ ಪರ ಆಡುತ್ತಿದ್ದ ವಿರಾಟ್ ಕೊಹ್ಲಿ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅರುಣ್ ಜೇಟ್ಲಿ ಸ್ಟೇಡಿಯಂಗೆ ಬಂದಿದ್ದರು. ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಕ್ರೇಜ್ ಅಷ್ಟರ ಮಟ್ಟಿಗೆ ಇದೆ.

ವಿರಾಟ್ ಕೊಹ್ಲಿ ಮೈದಾನದಲ್ಲಿ ಬ್ಯಾಟಿಂಗ್ ಮೂಲಕ ಸದ್ದು ಮಾಡುವುದಲ್ಲದೆ, ಹೊರಗು ಕೂಡ ಅವರು ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಈಗ ವಿಶಿಷ್ಟವಾದ ಒಂದು ಕಾರ್ಯದ ಮೂಲಕ ವಿರಾಟ್ ಕೊಹ್ಲಿ ಸದ್ದು ಮಾಡುತ್ತಿದ್ದಾರೆ.

Mahadevaswamy MVirat Kohli gifts jersey to Kevin Pietersen s son

ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರ ಮಗ ಡೈಲನ್‌ಗೆ ತಾವು ಸಹಿ ಹಾಕಿದ ಟೀಮ್ ಇಂಡಿಯಾ ಏಕದಿನ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ವಿರಾಟ್ ಕೊಹ್ಲಿ ನೀಡಿದ ಜೆರ್ಸಿಯನ್ನು ಹೆಮ್ಮೆಯಿಂದ ಧರಿಸಿರುವ ತಮ್ಮ ಮಗನ ಪೋಟೋವನ್ನು ಪೀಟರ್ಸನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜೆರ್ಸಿ ನೀಡಿರುವುದಕ್ಕೆ ಕೊಹ್ಲಿ ಅವರಿಗೆ ಪೀಟರ್ಸನ್ ಧನ್ಯವಾದ ಹೇಳಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಟೀ ಶರ್ಟ್ ಮೇಲೆ 'ಟು ಡೈಲನ್, ವಿತ್ ಬೆಸ್ಟ್ ವಿಶ್' ಎಂದು ಬರೆದಿದ್ದಾರೆ. 'ಮನೆಗೆ ಬಂದು ಡೈಲನ್ ಅವರಿಗೆ ಉಡುಗೊರೆಯನ್ನು ನೀಡಿದ್ದಾರೆ. ಅದು ನೇರವಾಗಿ ಮುಂದುವರೆದು ಕೈಗವಸುಗಳಂತೆ ಹೊಂದಿಕೊಳ್ಳುತ್ತದೆ. ಧನ್ಯವಾದಗಳು ಸ್ನೇಹಿತ, ಎಂದು ಪೀಟರ್ಸನ್ ತಮ್ಮ ಪೋಸ್ಟ್ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಭಾರತದೊಂದಿಗೆ ಕೆವಿನ್ ಪೀಟರ್ಸನ್ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಟೀಮ್ ಇಂಡಿಯಾ ಆಟಗಾರರಿಗೂ ಕೂಡ ಬಹಳ ಪೀಟರ್ಸನ್ ಹತ್ತಿರದಲ್ಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2009-10ರ ಆರಂಭಿಕ ಆವೃತ್ತಿಯಲ್ಲಿ ಪೀಟರ್ಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡಿದ್ದರು. ಅವರು ಆಡಿದ 13 ಪಂದ್ಯಗಳಲ್ಲಿ 32.90 ಸರಾಸರಿ ಮತ್ತು 135.95 ಸ್ಟ್ರೈಕ್ ರೇಟ್‌ನಲ್ಲಿ 329 ರನ್ ಗಳಿಸಿದ್ದರು. ಇದರಲ್ಲಿ ಎರಡು ಅರ್ಧಶತಕಗಳಿವೆ. ಅವರ ಅತ್ಯುತ್ತಮ ಸ್ಕೋರ್ ಅಜೇಯ 66 ರನ್.

ಇತ್ತೀಚೆಗೆ ಮುಕ್ತಾಯಗೊಂಡ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಲಯ ಕಂಡುಕೊಂಡಿದ್ದಾರೆ. ಮೊಣಕಾಲಿನ ಗಾಯದಿಂದಾಗಿ ಅವರು ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು. ನಂತರ, ಉಳಿದರೆಡು ಪಂದ್ಯಗಳನ್ನು ಆಡಿದರು. ಆದರೆ ಎರಡನೇ ಏಕದಿನ ಪಂದ್ಯದಲ್ಲಿ ಅವರು ಕೇವಲ 5 ರನ್‌ಗರ ಔಟಾಗಿದ್ದರು. ಕೊನೆಯ ಮತ್ತು ಮೂರನೇ ಏಕದಿನ ಪಂದ್ಯದಲ್ಲಿ ಅವರು 52 ರನ್ ಗಳಿಸಿ ಫಾರ್ಮ್‌ಗೆ ಮರಳಿದ್ದರು. ಈಗ ಫೆಬ್ರವರಿ 19 ರಿಂದ ಪ್ರಾರಂಭವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಬ್ಯಾಟಿಂಗ್ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Story first published: Friday, February 14, 2025, 12:37 [IST]
Other articles published on Feb 14, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+