For Quick Alerts
ALLOW NOTIFICATIONS  
For Daily Alerts
 

ಮಹಾರಾಜ ಟ್ರೋಫಿ 2ನೇ ಕ್ವಾಲಿಫೈಯರ್: ಗೆಲ್ಲುವ ತಂಡ ಬೆಂಗಳೂರು ಜೊತೆ ಫೈನಲ್‌ಗೆ!

Maharaja Trophy 2022, Qualifier 2: preview, probable playing 11 and live streaming details

ಕಳೆದ ಆಗಸ್ಟ್ 7ರಂದು ಆರಂಭವಾಗಿದ್ದ ಮಹಾರಾಜ ಟಿ ಟ್ವೆಂಟಿ ಲೀಗ್ ಟೂರ್ನಿ ಸದ್ಯ ಮುಕ್ತಾಯದ ಹಂತಕ್ಕೆ ತಲುಪಿದೆ. ಮೊದಲಿಗೆ ನಡೆದ 30 ಪಂದ್ಯಗಳ ಲೀಗ್ ಹಂತ ಮುಕ್ತಾಯವಾದ ನಂತರ ಟೂರ್ನಿಯಲ್ಲಿ ಭಾಗವಹಿಸಿದ್ದ ಬೆಂಗಳೂರು ಬ್ಲಾಸ್ಟರ್ಸ್, ಗುಲ್ಬರ್ಗಾ ಮಿಸ್ಟಿಕ್ಸ್, ಮೈಸೂರು ವಾರಿಯರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಪ್ಲೇಆಫ್ ಸುತ್ತಿಗೆ ಲಗ್ಗೆ ಇಟ್ಟಿದ್ದವು. ಈ ಪೈಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಾಟ ನಡೆಸಿದವು ಹಾಗೂ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ನೇರವಾಗಿ ಫೈನಲ್ ಪ್ರವೇಶಿಸಿತು ಮತ್ತು ಸೋತ ಗುಲ್ಬರ್ಗಾ ಮಿಸ್ಟಿಕ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಾಟ ನಡೆಸಿದ ಮೈಸೂರು ವಾರಿಯರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳ ಪೈಕಿ ಹುಬ್ಬಳ್ಳಿ ಟೈಗರ್ಸ್ ಸೋತು ಟೂರ್ನಿಯಿಂದ ಹೊರಬಿದ್ದಿದ್ದರೆ, ಗೆದ್ದ ಮೈಸೂರು ವಾರಿಯರ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ. ಈ ಮೂಲಕ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ ತಲುಪಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಜತೆ ಸೆಣಸಾಟ ನಡೆಸಲಿದೆ.

ಎರಡನೇ ಕ್ವಾಲಿಫೈಯರ್ ಪಂದ್ಯ ಯಾವಾಗ, ನೇರಪ್ರಸಾರ ವೀಕ್ಷಿಸುವುದು ಹೇಗೆ?

ಮಹಾರಾಜ ಟ್ರೋಫಿಯ ಎರಡನೇ ಕ್ವಾಲಿಫೈಯರ್ ಪಂದ್ಯ ಆಗಸ್ಟ್ 25ರ ಗುರುವಾರದಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ನಲ್ಲಿ ಹಾಗೂ ಸೋನಿ ಲಿವ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ.

ಸಂಭಾವ್ಯ ಆಡುವ ಬಳಗ:

ಗುಲ್ಬರ್ಗಾ ಮಿಸ್ಟಿಕ್ಸ್ ಸಂಭಾವ್ಯ ಆಡುವ ಬಳಗ: ರೋಹನ್ ಪಾಟೀಲ್, ಜೆಸ್ವತ್ ಆಚಾರ್ಯ, ಕೃಷ್ಣನ್ ಶ್ರೀಜಿತ್(ವಿಕೆಟ್ ಕೀಪರ್), ಮನೀಶ್ ಪಾಂಡೆ(ನಾಯಕ), ಮನೋಜ್ ಭಾಂಡಗೆ, ಡಿ ಪಡಿಕ್ಕಲ್, ರಿತೇಶ್ ಭಟ್ಕಳ್, ಕುಶಾಲ್ ವಾಧ್ವಾನಿ, ಪ್ರಣವ್ ಭಾಟಿಯಾ, ವಿಧ್ವತ್ ಕಾವೇರಪ್ಪ ಮತ್ತು ಸಿಎ ಕಾರ್ತಿಕ್

ಮೈಸೂರು ವಾರಿಯರ್ಸ್ ಸಂಭಾವ್ಯ ಆಡುವ ಬಳಗ: ನಿಹಾಲ್ ಉಳ್ಳಾಲ್ ( ವಿಕೆಟ್ ಕೀಪರ್) , ಕರುಣ್ ನಾಯರ್(ಸಿ), ಪವನ್ ದೇಶಪಾಂಡೆ, ಶಿವರಾಜ್ ಎಸ್, ನಾಗ ಭರತ್, ಶುಭಾಂಗ್ ಹೆಗ್ಡೆ, ಶ್ರೇಯಸ್ ಗೋಪಾಲ್, ಭರತ್ ಧುರಿ, ವಿದ್ಯಾಧರ್ ಪಾಟೀಲ್, ಆದಿತ್ಯ ಗೋಯಲ್ ಮತ್ತು ಪ್ರತೀಕ್ ಜೈನ್

ಡ್ರೀಮ್ ಟೀಮ್ಸ್:

ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುವ ಕ್ರಿಕೆಟ್ ಪ್ರೇಮಿಗಳು ಈ ಕೆಳಕಂಡಂತೆ ತಂಡಗಳನ್ನು ರಚಿಸುವುದು ಉತ್ತಮ

ಡ್ರೀಮ್ ಟೀಮ್ 1: ಎನ್ ಉಳ್ಳಾಲ್, ಆರ್ ಪಾಟೀಲ್ (ನಾಯಕ), ಜೆ ಆಚಾರ್ಯ, ಡಿ ಪಡಿಕಲ್, ಪಿ ದೇಶಪಾಂಡೆ, ಎಸ್ ಹೆಗಡೆ (ಉಪ ನಾಯಕ), ಎಸ್ ಗೋಪಾಲ್, ಎಂ ಭಾಂಡಗೆ, ವಿ ಪಾಟೀಲ್, ಎ ಗೋಯಲ್ ಮತ್ತು ವಿ ಕಾವೇರಪ್ಪ

ಡ್ರೀಮ್ ಟೀಮ್ 2: ಎನ್ ಉಳ್ಳಾಲ್, ಆರ್ ಪಾಟೀಲ್, ಜೆ ಆಚಾರ್ಯ, ಎಂ ಪಾಂಡೆ (ನಾಯಕ), ಪಿ ದೇಶಪಾಂಡೆ, ಎಸ್ ಹೆಗ್ಡೆ, ಎಸ್ ಗೋಪಾಲ್ (ಉಪ ನಾಯಕ), ಆರ್ ಭಟ್ಕಳ್, ವಿ ಪಾಟೀಲ್, ಎ ಗೋಯಲ್, ಸಿ ಎ ಕಾರ್ತಿಕ್

ಪಿಚ್ ವರದಿ: ಈ ಪಂದ್ಯ ನಡೆಯಲಿರುವ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಒಣಗಿದ್ದು, ಚೆಂಡು ತಿರುಗುವುದರಿಂದ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಾಯಕವಾಗಿರಲಿದೆ. ಇನ್ನು ಈ ಪಂದ್ಯದಲ್ಲಿಯೂ ಸಹ ಕಳೆದ ಪಂದ್ಯದ ರೀತಿ ರನ್ ಹೊಳೆ ಹರಿಯುವ ನಿರೀಕ್ಷೆಯಿದ್ದು, ಕಣಕ್ಕಿಳಿಯುವ ಉಭಯ ತಂಡಗಳು ಚೇಸಿಂಗ್ ಆಯ್ಕೆ ಮಾಡಿಕೊಳ್ಳಲು ಇಚ್ಛಿಸಲಿವೆ.

Story first published: Thursday, August 25, 2022, 9:47 [IST]
Other articles published on Aug 25, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+