Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಾರಾಜ ಟ್ರೋಫಿ: ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ 54 ರನ್‌ಗಳ ಗೆಲುವು ಸಾಧಿಸಿದ ಮೈಸೂರು ವಾರಿಯರ್ಸ್

ಮಹಾರಾಜ ಟ್ರೋಫಿ 2023ರ ಆವೃತ್ತಿಯಲ್ಲಿ ಇಂದು ಮೈಸೂರು ವಾರಿಯರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅಮೋಘ ಪ್ರದರ್ಶನ ನೀಡಿದ ಮೈಸೂರು ವಾರಿಯರ್ಸ್ ತಂಡ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಅದ್ಭುತ ಗೆಲುವು ಸಾಧಿಸಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದ ಮೈಸೂರು ವಾರಿಯರ್ಸ್ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ ಶೀಘ್ರವಾಗಿ ಕಳೆದುಕೊಂಡರೂ ಎರಡನೇ ವಿಕೆಟ್‌ಗೆ ಸಮರ್ಥ್ ಹಾಗೂ ನಾಯಕ ಕರುಣ್ ನಾಯರ್ ಅಮೋಘ ಜೊತೆಯಾಟ ನೀಡಿದರು. ಸಮರ್ಥ್ 48 ರನ್‌ಗಳಿಗೆ ವಿಕೆಟ್ ಕಳೆದುಕೊಂಡರೆ ನಾಯಕ ಕರುಣ್ ನಾಯರ್ 39 ಎಸೆತಗಳಲ್ಲಿ 57 ರನ್‌ಗಳನ್ನು ಬಾರಿಸಿದರು.

Maharaja Trophy 2023: Mysore Warriors Defeat Gulbarga Mystics by 54 runs in 8th Match

ಇನ್ನು ಸುಚಿತ್ 8 ಎಸೆತಗಳಲ್ಲಿ 17 ರನ್ ಹಾಗೂ ಮನೋಜ್ ಭಾಂಡಗೆ 15 ಎಸೆತಗಳಲ್ಲಿ 32 ರನ್ ಬಾರಿಸಿ ಅಂತಿಮ ಹಂತದಲ್ಲಿ ಅಬ್ಬರಿಸಿದರು. ಇನ್ನು ಶಿವಕುಮಾರ್ ರಕ್ಷಿತ್ ಕೂಡ 8 ಎಸೆತಗಳಲ್ಲಿ 21 ರನ್ ಬಾರಿಸಿ ಗಮನಸಳೆದರು. ಹೀಗಾಗಿ ಮೈಸೂರು ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಭರ್ಜರಿ 198 ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ 48 ರನ್‌ಗಳ ಜೊತೆಯಾಟ ಬಂದಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ಬಾರಲಿಲ್ಲ. ಆರಂಭಿಕ ಆಟಗಾರ ಎಲ್‌ಆರ್ ಚೇತನ್ 44 ರನ್‌ಗಳ ಕೊಡುಗೆ ನೀಡಿದ್ದು ಹೊರತುಪಡಿಸಿದರೆ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ.

ಮೈಸೂರು ವಾರಿಯರ್ಸ್ ತಂಡದ ಪರವಾಗಿ ಮನೋಜ್ ಭಾಂಡಗೆ ಬೌಲಿಂಗ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡಿದ್ದು ಮೂರು ಓವರ್‌ಗಳ ಬೌಲಿಂಗ್‌ನಲ್ಲಿ 19 ರನ್‌ಗಳನ್ನು ನೀಡಿದ್ದು 4 ವಿಕೆಟ್‌ಗಳನ್ನು ಕಬಳಿಸಿದರು. ಉಳಿದಂತೆ ಆರು ಬೌಲರ್‌ಗಳು ತಲಾ ಒಂದು ವಿಕೆಟ್ ಕಿತ್ತು ಗಮನಸೆಳದಿದ್ದಾರೆ. ಅಂತಿಮವಾಗಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ 144 ರನ್‌ಗಳಿಗೆ ಆಲೌಟ್ ಆಗುವ ಮೂಲಕ 54 ರನ್‌ಗಳ ಅಂತರದಿಂದ ಶರಣಾಗಿದೆ.

ಮೈಸೂರು ವಾರಿಯರ್ಸ್ ಪ್ಲೇಯಿಂಗ್ XI: ರವಿಕುಮಾರ್ ಸಮರ್ಥ್, ಕೋದಂಡ ಅಜಿತ್ ಕಾರ್ತಿಕ್, ಕರುಣ್ ನಾಯರ್ (ನಾಯಕ), ರಾಹುಲ್ ರಾವತ್, ತುಷಾರ್ ಸಿಂಗ್, ಶಿವಕುಮಾರ್ ರಕ್ಷಿತ್ (ವಿಕೆಟ್ ಕೀಪರ್), ಮನೋಜ್ ಭಾಂಡಗೆ, ಜಗದೀಶ ಸುಚಿತ್, ಮುರಳೀಧರ ವೆಂಕಟೇಶ್, ಮೋನಿಶ್ ರೆಡ್ಡಿ, ಶಶಿಕುಮಾರ್ ಕೆ.
ಬೆಂಚ್: ಶ್ರೀಷ ಆಚಾರ್, ಕುಶಾಲ್ ವಾಧ್ವಾನಿ, ಶೋಯೆಬ್ ಮ್ಯಾನೇಜರ್, ಭರತ್ ಧುರಿ, ಪ್ರಸಿದ್ಧ್ ಕೃಷ್ಣ, ಗೌತಮ್ ಮಿಶ್ರಾ, ಆದಿತ್ಯ ಮಣಿ

ಗುಲ್ಬರ್ಗಾ ಮಿಸ್ಟಿಕ್ಸ್ ಪ್ಲೇಯಿಂಗ್ ‍XI: ಎಲ್ ಆರ್ ಚೇತನ್, ಆದರ್ಶ್ ಪ್ರಜ್ವಲ್ (ವಿಕೆಟ್ ಕೀಪರ್), ಅನೀಶ್ ಕೆವಿ, ಸ್ಮರಣ್ ಆರ್, ಅಮಿತ್ ವರ್ಮಾ, ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ, ವಿಜಯಕುಮಾರ್ ವೈಶಾಕ್ (ನಾಯಕ), ಅವಿನಾಶ್ ಡಿ, ಹಾರ್ದಿಕ್ ರಾಜ್, ಅಭಿಲಾಷ್ ಶೆಟ್ಟಿ, ಕೆ.ಪಿ.ಅಪ್ಪಣ್ಣ
ಬೆಂಚ್: ಸೌರಭ್ ಮುತ್ತೂರ್, ಶರಣ್ ಗೌಡ್, ಶ್ರೀನಿವಾಸ್ ಶರತ್, ದೇವದತ್ತ್ ಪಡಿಕ್ಕಲ್, ಶಿಮೊನ್ ಲೂಯಿಜ್, ಮೊಹಮ್ಮದ್ ಅಕಿಬ್ ಜವಾದ್, ಯಶೋವರ್ಧನ್ ಪರಂತಪ್, ಶಾನ್ ಜೋಸೆಫ್, ಅಬುಲ್ ಹಸನ್ ಖಾಲಿದ್

Story first published: Wednesday, August 16, 2023, 22:09 [IST]
Other articles published on Aug 16, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+