Maharaja Trophy 2026: ಗುಲ್ಬಾರ್ಗಾ ತಂಡಕ್ಕೆ ಭರ್ಜರಿ ಜಯ;
ಮೈಸೂರು: ಸಂಘಟಿತ ಆಟದ ಪ್ರದರ್ಶನ ನೀಡಿದ ಗುಲ್ಬರ್ಗಾ ಮಿಸ್ಟೆಕ್ಸ್ 95 ರನ್‌ಗಳಿಂದ ಶಿವಮೊಗ್ಗ ಯೋಧಾಸ್ ತಂಡವನ್ನು ಮಹಾರಾಜ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಲೋಚನ್ ಗೌಡ ಹಾಗೂ ಶರತ್ ಬಿ.ಆರ್ (24 ರನ್, 1 ಬೌಂಡರಿ, 3 ಸಿಕ್ಸರ್) ಮೊದಲ ವಿಕೆಟ್‌ಗೆ 38 ರನ್ ಸೇರಿಸಿದರು. ಎರಡನೇ ವಿಕೆಟ್‌ಗೆ ಲೋಚನ್ ಗೌಡ ಮತ್ತು ಪ್ರಖರ್ ಚತುರ್ವೇದಿ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಎರಡನೇ ವಿಕೆಟ್‌ಗೆ 28 ಎಸೆತಗಳಲ್ಲಿ 74 ರನ್ ಸೇರಿಸಿತು. ಈ ಹಂತದಲ್ಲಿ ಪ್ರಖರ್ ಚತುರ್ವೇದಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 45 ರನ್ ಬಾರಿಸಿ ಔಟ್ ಆದರು.

ಆರಂಭಿಕ ಆಟಗಾರ ಲೋಚನ್ ಗೌಡ 21 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ನೆರವಿನಿಂದ 47 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ನೀಲ್ ನೊರೊನ್ಹಾ 26, ಮನೀಶ್ ಪಾಂಡೆ 22, ಕ್ರಾಂತಿ ಕುಮಾರ್ 31 ರನ್ ಸಿಡಿಸಿದರು. ಅಂತಿಮವಾಗಿ ಗುಲ್ಬರ್ಗಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 232 ರನ್ ಸೇರಿಸಿತು. ಶಿವಮೊಗ್ಗ ತಂಡದ ಪರ ನವೀನ್ ಎಂಜೆ, ಭೀಮ್ ರಾವ್ ನವಲೆ ತಲಾ 2 ವಿಕೆಟ್ ಕಬಳಿಸಿದರು.
233 ರನ್ ಗುರಿ ಬೆನ್ನಟ್ಟಿದ ಶಿವಮೊಗ್ಗ ಲಯನ್ಸ್ ತಂಡವು ಗುಲ್ಬರ್ಗ ತಂಡದ ಕ್ರಾಂತಿ ಕುಮಾರ್, ಗೌತಮ್ ಮಿಶ್ರಾ ಮತ್ತು ಸುಹಾಸ್ ಪುರುಷೋತ್ತಮ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 19.4 ಓವರ್‌ಗಳಲ್ಲಿ ಕೇವಲ 137 ರನ್‌ಗಳಿಗೆ ಆಲೌಟ್ ಆಯಿತು. ಶಿವಮೊಗ್ಗ ಪರ ಲವ್ನೀತ್ ಸಿಸೋಡಿಯಾ 30 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿತ್ತು. ಗುಲ್ಬರ್ಗ ತಂಡದ ಪ್ರಖರ್ ಚತುರ್ವೇದಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಎಲ್‌ಆರ್ ಚೇತನ್ ಶತಕ
ಇನ್ನು ಎರಡನೇ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ವಿರುದ್ಧ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ 60 ಎಸೆತಗಳಲ್ಲಿ 9 ಬೌಂಡರಿ, 7 ಸಿಕ್ಸರ್ ಸಹಾಯದಿಂದ 106 ರನ್ ಸಿಡಿಸಿದರು. ಕೆ.ಪಿ. ಕಾರ್ತಿಕೇಯ 41 ಎಸೆತಗಳಲ್ಲಿ 65 ರನ್ ಸಿಡಿಸಿದರು. ಅಂತಿಮವಾಗಿ ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 203 ರನ್ ಸೇರಿಸಿತು.
ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ತಂಡದ ಪರ ಸಮೀತ್ ದ್ರಾವಿಡ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 36 ರನ್ ಬಾರಿಸಿದರೆ, ಪ್ರವೀಣ್ ದುಬೆ 22 ಎಸೆತಗಳಲ್ಲಿ 36 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಕಲ್ಯಾಣಿ ತಂಡ 16 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಮೈಸೂರು ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications