Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Maharaja Trophy 2026: 215ರ ಸ್ಟ್ರೈಕ್‌ ರೇಟ್‌ನಲ್ಲಿ ಮನೀಷ್‌ ಪಾಂಡೆ ಬ್ಯಾಟಿಂಗ್

ಹುಬ್ಬಳ್ಳಿ: ಅನುಭವಿ ಬ್ಯಾಟರ್‌ ಮನೀಷ್‌ ಪಾಂಡೆ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆರ್ಭಟಿಸಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ವಿರುದ್ಧ ಅಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ಆದರೆ ಇವರ ಸ್ಫೋಟಕ ಬ್ಯಾಟಿಂಗ್ ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ಗೆಲುವಿಗೆ ಸಹಾಯ ಮಾಡಲಿಲ್ಲ. ಆದರೆ ಇವರು ಈ ಪಂದ್ಯದಲ್ಲಿ 215ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ ತಮ್ಮಲ್ಲಿ ಇನ್ನು ಬ್ಯಾಟಿಂಗ್ ಕ್ಷಮತೆ ಇರುವುದಾಗಿ ಸಾಬೀತು ಪಡಿಸಿದ್ದಾರೆ.

ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್‌ ಮೈದಾನದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗಾ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ಆರವ್ ಮಹೇಶ್ ಮತ್ತು ಶರತ್ ಬಿ.ಆರ್. ತಂಡಕ್ಕೆ ದೊಡ್ಡ ಜೊತೆಯಾಟವನ್ನು ನೀಡಲಿಲ್ಲ. 24 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಗುಲ್ಬರ್ಗಾ ತಂಡ ಸಂಕಷ್ಟದಲ್ಲಿತ್ತು.

Maharaja Trophy 2026

ಈ ಹಂತದಲ್ಲಿ ತಂಡಕ್ಕೆ ನಾಯಕ ಮ್ಯಾಕ್ನೀಲ್ ನೊರೊನ್ಹಾ ಹಾಗೂ ಧ್ರುವ್ ಪ್ರಭಾಕರ್ ಜೋಡಿ ಆಸರೆಯಾಯಿತು. ಈ ಜೋಡಿ 3ನೇ ವಿಕೆಟ್‌ಗೆ 35 ಎಸೆತಗಳಲ್ಲಿ 43 ರನ್‌ ಕಾಣಿಕೆ ನೀಡಿತು. ಈ ಹಂತದಲ್ಲಿ ನಾಯಕ ಮ್ಯಾಕ್ನೀಲ್ ನೊರೊನ್ಹಾ 27 ರನ್‌ ಬಾರಿಸಿದ್ದಾಗ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ನಾಲ್ಕನೇ ವಿಕೆಟ್‌ಗೆ ಧ್ರುವ್ ಜೊತೆಗೂಡಿದ ತಿಪ್ಪಾ ರೆಡ್ಡಿ ತಂಡಕ್ಕೆ ಅರ್ಧಶತಕ ಜೊತೆಯಾಟದ ಕಾಣಿಕೆ ನೀಡಿತು. ಧ್ರುವ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 51 ರನ್ ಬಾರಿಸಿದರೆ, ತಿಪ್ಪಾ ರೆಡ್ಡಿ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 51 ರನ್‌ ಸಿಡಿಸಿದರು.

ಮನೀಷ್ ಮಿಂಚು

ಸ್ಟಾರ್ ಆಟಗಾರ ಮನೀಷ್ ಪಾಂಡೆ ತಮ್ಮ ನೈಜ ಆಟವನ್ನು ಆಡಿ ನೆರೆದಿದ್ದ ಅಭಿಮಾನಿಗಳಿಗೆ ಮುದ ನೀಡಿದರು. ಇವರು 215 ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಿ ಗುಲ್ಬರ್ಗಾ ತಂಡದ ಮೊತ್ತವನ್ನು ಹಿಗ್ಗಿಸಿದರು. ಇವರು 19 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 41 ರನ್ ಬಾರಿಸಿದರು. ಅಂತಿಮವಾಗಿ ಗುಲ್ಬರ್ಗಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 196 ರನ್‌ ಕಲೆ ಹಾಕಿತು. ಮೈಸೂರು ತಂಡದ ಪರ ಅರಬಿಂದ್ ರಾಯ್, ಲವಿಶ್ ಕೌಶಲ್ ತಲಾ ಮೂರು ವಿಕೆಟ್‌ ಪಡೆದರು.

ಗುರಿಯನ್ನು ಬೆನ್ನಟ್ಟಿದ ಮೈಸೂರು ತಂಡದ ಆರಂಭ ಸಹ ಕಳಪೆಯಾಗಿತ್ತು. ಎಸ್‌ಯು ಕಾರ್ತಿಕ್ (7) ಜವಾಬ್ದಾರಿ ಮರೆತರು. ಆರಂಭಿಕ ಆಟಗಾರ ಎಲ್‌ಆರ್ ಚೇತನ್ (23) ಹಾಗೂ ರಿತೇಶ್ ಭಟ್ಕಳ್ ಕೊಂಚ ತಂಡಕ್ಕೆ ಆಧಾರವಾದರು. 4ನೇ ವಿಕೆಟ್‌ಗೆ ರಿತೇಶ್‌ ಹಾಗೂ ಲಂಕೇಶ್‌ ಜೋಡಿ 37 ಎಸೆತಗಳಲ್ಲಿ 68 ರನ್‌ ಬಾರಿಸಿತು. ಲಂಕೇಶ್‌ 29, ಯುವರಾಜ್‌ ಆರೋರ 16, ಮನೋಜ್ ಭಾಂಡಗೆ 24 ರನ್‌ ಸಿಡಿಸಿದರು.

ರಿತೇಶ್ ಅರ್ಧಶತಕ

ಭರವಸೆಯ ಆಟಗಾರ ರಿತೇಶ್‌ ಭಟ್ಕಳ್ 42 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 75 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ಮೈಸೂರು ತಂಡ ಮೂರು ವಿಕೆಟ್‌ ಹಾಗೂ ಮೂರು ಎಸೆತ ಬಾಕಿ ಇರುವಾಗಲೇ ಜಯ ಸಾಧಿಸಿತು.

Story first published: Friday, July 3, 2026, 23:23 [IST]
Other articles published on Jul 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+