Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Maharaja Trophy 2026: ರೋಹನ್‌ ಪಾಟೀಲ್‌ ಅಬ್ಬರ, ಬೆಂಗಳೂರಿಗೆ ಭರ್ಜರಿ ಜಯ: ಗುಲ್ಬರ್ಗಾ ಹ್ಯಾಟ್ರಿಕ್‌ ಜಯ

ಹುಬ್ಬಳ್ಳಿ: ಭರವಸೆಯ ಬ್ಯಾಟರ್‌ ರೋಹನ್ ಪಾಟೀಲ್ ಅವರು ಬಾರಿಸಿದ ಅರ್ಧಶತಕ ಹಾಗೂ ರೋಹನ್ ರಾಜು ಅವರ ಬಿಗುವಿನ ದಾಳಿಯ ನೆರವಿನಿಂದ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್‌ 7 ವಿಕೆಟ್‌ಗಳಿಂದ ಶಿವಮೊಗ್ಗ ಯೋಧಾಸ್‌ ತಂಡವನ್ನು ಮಹಾರಾಜ ಟಿ20 ಟ್ರೋಫಿಯಲ್ಲಿ ಮಣಿಸಿದೆ. ಈ ಗೆಲುವಿನ ಮೂಲಕ ಬೆಂಗಳೂರು ಆಡಿದ 5 ಪಂದ್ಯಗಳಲ್ಲಿ 4 ಜಯ, 1 ಸೋಲು ಕಂಡಿದ್ದು, 8 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದಿದೆ.

ನಗರದ ಕೆಎಸ್‌ಸಿಎ ಹುಬ್ಬಳ್ಳಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ, ಟಾಸ್ ಗೆದ್ದ ಶಿವಮೊಗ್ಗ ಯೋಧಾಸ್‌ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಶಿವಮೊಗ್ಗ ತಂಡದ ಬ್ಯಾಟರ್‌ ನವೀನ್‌ ಎಂಜಿ 9 ರನ್‌ಗಳಿಗೆ ಆಟ ಮುಗಿಸಿದರು. ಎರಡನೇ ವಿಕೆಟ್‌ಗೆ ಲುವ್ನಿತ್ ಸಿಸೋಡಿಯಾ ಮತ್ತು ಅನೀಶ್‌ ಕೆ.ವಿ ಜೋಡಿ 36 ಎಸೆತಗಳಲ್ಲಿ 48 ರನ್‌ ಸಿಡಿಸಿತು. ಆರಂಭಿಕ ಲುವ್ನಿತ್ ಸಿಸೋಡಿಯಾ 32 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 51 ರನ್‌ ಬಾರಿಸಿದರು. ಅನೀಶ್‌ ಕೆವಿ 29, ಆರ್‌ ಸ್ಮರಣ್‌ 3 ಬೌಂಡರಿ ಸಹಿತ 36 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಶಿವಮೊಗ್ಗ ತಂಡದ ಪರ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 173 ರನ್‌ ಸಿಡಿಸಿತು. ಬೆಂಗಳೂರು ತಂಡದ ಪರ ರೋಹನ್‌ ರಾಜು 21 ರನ್‌ ನೀಡಿ 3 ವಿಕೆಟ್‌ ಪಡೆದರು.

Maharaja Trophy 2026

ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ತಂಡದ ಪರ ಆರಂಭಿಕರಾದ ಭುವನ್ ಮೋಹನ್ ರಾಜು ಮತ್ತು ರೋಹನ್ ಪಾಟೀಲ್ ಮೊದಲ ವಿಕೆಟ್‌ಗೆ 7.3 ಓವರ್‌ಗಳಲ್ಲಿ 65 ರನ್‌ ಸೇರಿಸಿತು. ಭುವನ್ ಮೋಹನ್ ರಾಜು 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 29 ರನ್‌ ಸಿಡಿಸಿ ಔಟ್ ಆದರು.

ರೋಹನ್‌ ಪಾಟೀಲ್‌ ಅರ್ಧಶತಕ

ಎರಡನೇ ವಿಕೆಟ್‌ಗೆ ರೋಹನ್‌ ಪಾಟೀಲ್‌ ಹಾಗೂ ಕೆಎಲ್ ಶ್ರೀಜಿತ್ (21) ಸೊಗಸಾದ ಜೊತೆಯಾಟವನ್ನು ನೀಡಿತು. ಆರಂಭಿಕ ಆಟಗಾರ ರೋಹನ್‌ ಪಾಟೀಲ್‌ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 62 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದ ಪ್ರವೀಣ್‌ ದುಬೆ ಅಜೇಯ 39, ಶುಭಾಂಗ್ ಹೆಗ್ಡೆ ಅಜೇಯ 11 ರನ್‌ ಸಿಡಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.

ಗುಲ್ಬರ್ಗಾ ತಂಡಕ್ಕೆ ಭರ್ಜರಿ ಜಯ

ಇನ್ನೊಂದು ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿದ ಗುಲ್ಬರ್ಗಾ ಮಿಸ್ಟಿಕ್ಸ್‌ ಭರ್ಜರಿ ಜಯ ಸಾಧಿಸಿತು. ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಮೈಸೂರು ತಂಡದ ಆರಂಭಿಕರಾದ ಎಸ್ ಯು ಕಾರ್ತಿಕ್ (20), ಎಲ್ ಆರ್ ಚೇತನ್ (24) ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಮಧ್ಯಮ ಕ್ರಮಾಂಕದ ಕೆಪಿ ಕಾರ್ತಿಕೇಯ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ 63 ರನ್‌ ಸಿಡಿಸಿತು. ಅಂತಿಮವಾಗಿ ವಾರಿಯರ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 155 ರನ್‌ ಸೇರಿಸಿತು.

Maharaja Trophy 2026

ಗುರಿಯನ್ನು ಬೆನ್ನಟ್ಟಿದ ಗುಲ್ಬರ್ಗಾ ಮಿಸ್ಟಿಕ್ಸ್‌ 18.5 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 156 ರನ್‌ ಸೇರಿಸಿ ಜಯವನ್ನು ಸಾಧಿಸಿತು. ವಿಜೇತ ತಂಡದ ಪರ ಶರತ್ ಬಿ ಆರ್‌ 49, ಭರವಸೆಯ ಬ್ಯಾಟರ್ ಮನೀಷ್ ಪಾಂಡೆ 5 ಬೌಂಡರಿ ಸಹಾಯದಿಂದ ಅಜೇಯ 43 ರನ್ ಬಾರಿಸಿ ಜಯದಲ್ಲಿ ಮಿಂಚಿದರು. ಗುಲ್ಬರ್ಗಾ ಈ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವಿನ ನಗೆ ಬೀರಿದೆ. ಈ ಮೂಲಕ ಮಿಸ್ಟಿಕ್ಸ್ ತಂಡ ಆಡಿದ 5 ಪಂದ್ಯಗಳಲ್ಲಿ 3 ಜಯ ಸಾಧಿಸಿದ್ದು, 2 ಸೋಲು ಕಂಡಿದ್ದು, 6 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

Story first published: Saturday, June 27, 2026, 23:50 [IST]
Other articles published on Jun 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+