Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಾರಾಜ ಟ್ರೋಫಿ ಫೈನಲ್: ಮನೀಶ್, ಪಡಿಕ್ಕಲ್ ರನ್ ಮಳೆ: ಬೆಂಗಳೂರಿಗೆ ಬೃಹತ್ ಗುರಿ ನೀಡಿದ ಗುಲ್ಬರ್ಗಾ

Maharaja trophy Final: Gulbarga Mistics sets big target to Bangaluru Blasters

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಾರಾಜ ಟ್ರೋಫಿಯ ಫೈನಲ್ ಪಂದ್ಯ ನಡೆಯುತ್ತಿದ್ದು ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಗುಲ್ಬರ್ಗಾ ಮಿಸ್ಟಿಕ್ಸ್ ರನ್ ಮಳೆ ಹರಿಸಿದೆ. ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಎದುರಾಳಿ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಟ್ರೋಫಿ ಗೆಲ್ಲಲು ಭರ್ಜರಿ 221 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದೆ. ಕಣಕ್ಕಿಳಿದ ಎಲ್ಲಾ ಆಟಗಾರರು ಕೂಡ ಸ್ಪೋಟಕ ಪ್ರದರ್ಶನ ನೀಡಿದ್ದು ಬೆಂಗಳೂರು ತಂಡದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದೆ.

ನಾಯಕ ಮನೀಶ್ ಪಾಂಡೆ ಅಂತಿಮ ಹಂತದಲ್ಲಿ ನೀಡಿದ ಸ್ಪೋಟಕ ಪ್ರದರ್ಶನ ದೇವದತ್ ಪಡಿಕ್ಕಲ್ ಅವರ ಭರ್ಜರಿ ಅರ್ಧ ಶತಕ ಹಾಗೂ ಆರಂಭಿಕ ಜೋಡಿ ಜೆಸ್ವತ್ ಆಚಾರ್ಯ ಮತ್ತು ರೋಹನ್ ಪಾಟೀಲ್ ಅವರ ಅಮೋಘ ಪ್ರದರ್ಶನದಿಂದಾಗಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 220 ರನ್‌ಗಳನ್ನು ಗಳಿಸಿದೆ. ಈ ಮೂಲಕ ಚೊಚ್ಚಲ ಆವೃತ್ತಿಯ ಮಹಾರಾಜ ಟ್ರೋಫಿಯನ್ನು ಎತ್ತಿ ಹಿಡಿಯುವ ಆತ್ಮವಿಶ್ವಾಸದೊಂದಿಗೆ ಬೌಲಿಂಗ್ ದಾಳಿಗೆ ಇಳಿದಿದೆ.

ಆಡುವ ಬಳಗ ಹೀಗಿದೆ
ಬೆಂಗಳೂರು ಬ್ಲಾಸ್ಟರ್ಸ್ : ಮಯಾಂಕ್ ಅಗರ್ವಾಲ್ (ನಾಯಕ), ಎಲ್ ಆರ್ ಚೇತನ್, ಅನಿರುದ್ಧ ಜೋಶಿ, ಶಿವಕುಮಾರ್ ರಕ್ಷಿತ್ (ವಿಕೆಟ್ ಕೀಪರ್), ಜಗದೀಶ ಸುಚಿತ್, ಕುಶ್ ಮರಾಠೆ, ಕ್ರಾಂತಿ ಕುಮಾರ್, ರಿಷಿ ಬೋಪಣ್ಣ, ರೋನಿತ್ ಮೋರೆ, ಪ್ರದೀಪ್ ಟಿ, ಸಂತೋಕ್ ಸಿಂಗ್
ಬೆಂಚ್: ಅನೀಶ್ ಕೆವಿ, ಕುಮಾರ್ ಎಲ್ ಆರ್, ಪಾರಸ್ ಗುರ್ಬಕ್ಸ್ ಆರ್ಯ, ಲೋಚನ್ ಗೌಡ, ಸೀನ್ ಇಶಾನ್ ಜೋಸೆಫ್, ತನಯ್ ವಾಲ್ಮಿಕ್, ಸೂರಜ್ ಅಹುಜಾ

ಗುಲ್ಬರ್ಗಾ ಮಿಸ್ಟಿಕ್ಸ್: ಜೆಸ್ವತ್ ಆಚಾರ್ಯ, ರೋಹನ್ ಪಾಟೀಲ್, ದೇವದತ್ತ್ ಪಡಿಕ್ಕಲ್, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಮನೀಶ್ ಪಾಂಡೆ (ನಾಯಕ), ಮನೋಜ್ ಭಾಂಡಗೆ, ರಿತೇಶ್ ಭಟ್ಕಳ್, ಪ್ರಣವ್ ಭಾಟಿಯಾ, ಕುಶಾಲ್ ವಾಧ್ವಾನಿ, ವಿಧ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ
ಬೆಂಚ್: ಧನುಷ್ ಗೌಡ, ಅಜಯ್ ಗೌಡ, ಬೆಂಗಳೂರು ಮೋಹಿತ್, ಶ್ರೀಶ ಆಚಾರ್, ಕೃತಿಕ್ ಕೃಷ್ಣ, ಮೊಹಮ್ಮದ್ ಅಕಿಬ್ ಜವಾದ್, ಆರೋನ್ ಕ್ರಿಸ್ಟಿ, ಕೋದಂಡ ಅಜಿತ್ ಕಾರ್ತಿಕ್

Story first published: Saturday, August 27, 2022, 9:01 [IST]
Other articles published on Aug 27, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+