For Quick Alerts
ALLOW NOTIFICATIONS  
For Daily Alerts
 

ಮಹಾರಾಜ ಟ್ರೋಫಿ 2023: ಮೈಸೂರ್ ವಾರಿಯರ್ಸ್ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದ ಹುಬ್ಬಳ್ಳಿ ಟೈಗರ್ಸ್

ಮಹಾರಾಜ ಟ್ರೋಫೀ 2023ನೇ ಆವೃತ್ತಿಯಲ್ಲಿ ಮನೀಶ್ ಪಾಂಡೆ ನೇತೃತ್ವದ ಹುಬ್ಬಳ್ಳಿ ಟೈಗರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕರುಣ್ ನಾಯರ್ ಮೈಸೂರು ವಾರಿಯರ್ಸ್ ವಿರುದ್ಧ ನಡೆದ ರಣರೋಚಕ ಕದನದಲ್ಲಿ ಕೊನೆಯ ಓವರ್‌ವರೆಗೂ ಜಿದ್ದಾಜಿದ್ದಿನ ಕದನ ನಡೆದಿತ್ತು. ಅಂತಿಮವಾಗಿ ಹುಬ್ಬಳ್ಳಿ ಟೈಗರ್ಸ್ ತಂಡ 8 ರನ್‌ಗಳ ಅಂತರದಿಂದ ಗೆದ್ದು ಚಾಂಪಿಯನ್ ಎನಿಸಿಕೊಂಡಿದೆ.

ಇನ್ನು ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಹುಬ್ಳಿ ಟೈಗರ್ಸ್ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತ್ತು. ಆರಂಭಿಕ ಆಟಗಾರ ಲವ್ನೀತ್ ಸಿಸೋಡಿಯಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಆರಂಭಿಕ ಹಿನ್ನಡೆ ಅನುಭವಿಸಿದ್ದರೂ ನಂತರ ತಾಹಾ ಹಾಗೂ ಕೃಷ್ಣನ್ ಶ್ರೀಜಿತ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ತಾಹ 40 ಎಸೆತಗಳಲ್ಲಿ 72 ರನ್‌ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ.

Maharaja Trophy Final: Hubli Tigers won Finals against Mysure Warriors, became Champion

ಹುಬ್ಬಳ್ಳಿ ಟೈಗರ್ಸ್ ನೀಡಿದ 204 ರನ್‌ಗಳ ಗುರಿ ಬೆನ್ನಟ್ಟಿದ ಮೈಸೂರ್ ವಾರಿಯರ್ಸ್ ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. ಮೊದಲ ವಿಕೆಟ್‌ಗೆ 57 ರನ್‌ಗಳ ಜೊತೆಯಾಟ ಬಂದಿತ್ತು. ಅದರಲ್ಲೂ ಆರಂಭಿಕ ಆಟಗಾರ ಆರ್ ಸಮರ್ಥ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 63 ರನ್‌ಗಳನ್ನು ಕಲೆಹಾಕಿದ್ದರು. ನಾಯಕ ಕರುಣ್ ನಾಯರ್ ಕೂಡ ಮತ್ತೊಮ್ಮೆ ಅಬ್ಬರಿಸುವ ಸೂಚನೆ ನೀಡಿದ್ದರು. ಆದರೆ 20 ಎಸೆತಗಳಲ್ಲಿ 37 ರನ್‌ಗಳಿಸಿದ್ದ ಕರುನ್ ನಾಯರ್ ಅವರನ್ನು ಔಟ್ ಮಾಡುವಲ್ಲಿ ಕರಿಯಪ್ಪ ಯಶಸ್ವಿಯಾದರು.

ಉಳಿದಂತೆ ಕೆಳ ಕ್ರಮಾಂಕದಲ್ಲಿ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ. ಅದರಲ್ಲೂ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಲು ವಾರಿಯರ್ಸ್ ದಾಂಡಿಗರು ವಿಫಲವಾಗಿದ್ದರು. ಹಾಗಿದ್ದರೂ ಕೊನೆಯ ಓವರ್‌ವರೆಗೂ ಪಂದ್ಯ ಸಾಗಿತ್ತು. ಆದರೆ ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 195 ರನ್‌ಗಳಿಗೆ ತನ್ನ ಆಟವನ್ನು ಮುಗಿಸಿತ್ತು ಮೈಸೂರ್ ವಾರಿಯರ್ಸ್.

ಅದಾದ ಬಳಿಕ ಟೈಗರ್ಸ್ ರನ್ ವೇಗ ಹೆಚ್ಚಿಸಿದ್ದು ನಾಯಕ ಮನೀಶ್ ಪಾಂಡೆ. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಪಾಂಡೆ 23 ಎಸೆತಗಳಲ್ಲಿ 50 ರನ್‌ಗಳನ್ನು ಬಾರಿಸಿದರು. ಇನ್ನು ಮನ್ವಂತ್ ಕುಮಾರ್ ಅವರು ಕೂಡ 5 ಎಸೆಗಗಳಲ್ಲಿ 14 ರನ್ ಬಾರಿಸಿದ್ದು ತಂಡದ ಮೊತ್ತ 200ರ ಗಡಿ ದಾಟಲು ಕಾರಣವಾದರು. ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 203 ರನ್‌ಗಳನ್ನು ಕಲೆಹಾಕಿತ್ತು.

ಹುಬ್ಳಿ ಟೈಗರ್ಸ್: ಲುವ್ನಿತ್ ಸಿಸೋಡಿಯಾ, ಮೊಹಮ್ಮದ್ ತಾಹಾ, ಕೃಷ್ಣನ್ ಶ್ರೀಜಿತ್, ಸಂಜಯ್ ಅಶ್ವಿನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ (ನಾಯಕ), ಪ್ರವೀಣ್ ದುಬೆ, ಮನ್ವಂತ್ ಕುಮಾರ್ ಎಲ್, ಲವಿಶ್ ಕೌಶಲ್, ಎಂಬಿ ದರ್ಶನ್, ಕೆಸಿ ಕಾರಿಯಪ್ಪ, ವಿಧ್ವತ್ ಕಾವೇರಪ್ಪ
ಬೆಂಚ್: ಮಿತ್ರಕಾಂತ್ ಯಾದವ್, ರಾಜಶೇಖರ್ ಹರಿಕಾಂತ್, ಮಲ್ಲಿಕ್ಸಾಬ್ ಸಿರೂರ್, ಸಂತೋಕ್ ಸಿಂಗ್, ಬೆಂಗಳೂರು ಮೋಹಿತ್, ರೋಹಿತ್ ಕುಮಾರ್, ನಾಗ ಭರತ್, ಶಿವಂ ಎಂ ಬಿ, ನಾಥನ್ ಡಿ'ಮೆಲ್ಲೋ, ಕ್ಲೆಮೆಂಟ್ ರಾಜಮೋಹನ್

ರವಿಕುಮಾರ್ ಸಮರ್ಥ್, ಕೋದಂಡ ಅಜಿತ್ ಕಾರ್ತಿಕ್, ಕರುಣ್ ನಾಯರ್ (ನಾಯಕ), ಮನೋಜ್ ಭಾಂಡಗೆ, ಲಂಕೇಶ್ ಕೆಎಸ್, ಶಿವಕುಮಾರ್ ರಕ್ಷಿತ್ (ವಿಕೆಟ್ ಕೀಪರ್), ಜಗದೀಶ ಸುಚಿತ್, ಮೋನಿಶ್ ರೆಡ್ಡಿ, ಶಶಿಕುಮಾರ್ ಕೆ, ಕುಶಾಲ್ ವಾಧ್ವಾನಿ, ಗೌತಮ್ ಮಿಶ್ರಾ
ಬೆಂಚ್: ಸು ಕಾರ್ತಿಕ್, ಶೋಯೆಬ್ ಮ್ಯಾನೇಜರ್, ಭರತ್ ಧುರಿ, ಮುರಳೀಧರ ವೆಂಕಟೇಶ್, ರಾಹುಲ್ ರಾವತ್, ಶ್ರೀಶ ಆಚಾರ್, ತುಷಾರ್ ಸಿಂಗ್, ಆದಿತ್ಯ ಮಣಿ

Story first published: Tuesday, August 29, 2023, 21:36 [IST]
Other articles published on Aug 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+