2023ನೇ ಆವೃತ್ತಿಯ ಮಹಾರಾಜ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯ ಮಾತ್ರವೇ ಬಾಕಿಯಿದ್ದು ಇಂದು ಆಗಸ್ಟ್ 29ರಂದು ಫೈನಲ್ ಸೆಣೆಸಾಟ ನಡೆಯಲಿದೆ. ಸೆಮೀಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದ ಹುಬ್ಬಳ್ಳಿ ಟೈಗರ್ಸ್ ಹಾಗೂ ಮೈಸೂರ್ ವಾರಿಯರ್ಸ್ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದು ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಲಿದೆ.
ಕರುಣ್ ನಾಯರ್ ನೇತೃತ್ವದ ಮೈಸೂರ್ ವಾರಿಯರ್ಸ್ ತಂಡ ಸೆಮಿಫೈನಲ್‌ನಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು 36 ರನ್‌ಗಳ ಅಂತರದಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿತ್ತು. ಕರುಣ್ ನಾಯರ್ ಅವರ ಸ್ಪೋಟಕ ಶತಕದಿಂದಾಗಿ ಸೆಮಿಫೈನಲ್‌ನಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿತ್ತು. ಮತ್ತೊಂದೆಡೆ ಹುಬ್ಬಳ್ಳಿ ಟೈಗರ್ಸ್ ತಂಡ ಶಿವಮೊಗ್ಗ ತಂಡದ ವಿರುದ್ಧ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಫೈನಲ್ ಪಂದ್ಯದ ಸಮಯ
ಮಹಾರಾಜ ಟ್ರೋಫಿ ಫೈನಲ್ ಪಂದ್ಯ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ. ಆಗಸ್ಟ್ 29 ಮಂಗಳವಾರದಂದು ಸಂಜೆ 5:30 ನಿಮಿಷಕ್ಕೆ ಪಂದ್ಯ ಆರಂಭವಾಗಲಿದ್ದು 5 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಈ ಪಂದ್ಯವನ್ನು ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದ್ದು ಫ್ಯಾನ್‌ಕೋಡ್‌ನಲ್ಲಿಯೂ ಪಂದ್ಯದ ವೀಕ್ಷಣೆಗೆ ಅವಕಾಶವಿದೆ.
ಪಿಚ್ ರಿಪೋರ್ಟ್ ಹವಾಮಾನ ವರದಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣ ಯಾವಾಗಲೂ ಬ್ಯಾಟರ್‌ಗಳಿಗೆ ಉತ್ತಮವಾಗಿ ನೆರವು ನೀಡುವ ಗುಣಹೊಂದಿದೆ. ಅಲ್ಲದೆ ಫೈನಲ್‌ನಲ್ಲಿ ಕಣಕ್ಕಿಳಿಯುತ್ತಿರುವ ಎರಡು ತಂಡಗಳು ಕೂಡ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ತಂಡಗಳಾಗಿದೆ. ಹಾಗಾಗಿ ಈ ಪಂದ್ಯ ಕೂಡ ಹೈಸ್ಕೋರಿಂಗ್ ಥ್ರಿಲ್ಲರ್ ಆಗಿರುವುದರಲ್ಲಿ ಅನುಮಾನವಿಲ್ಲ. ಇನ್ನು ಪಂದ್ಯದ ಸಂದರ್ಭದಲ್ಲಿ ಮಳೆಯಾಗುವ ಆತಂಕವಿಲ್ಲ. ಹೀಗಾಗಿ ಪಂದ್ಯ ಯಾವುದೇ ಅಡ್ಡಿಯಿಲ್ಲದೆ ನಡೆಯಲಿದೆ.
ಮೈಸೂರು ವಾರಿಯರ್ಸ್ ತಂಡ: ಎಸ್‌ಯು ಕಾರ್ತಿಕ್, ರವಿಕುಮಾರ್ ಸಮರ್ಥ್, ಕರುಣ್ ನಾಯರ್(ನಾಯಕ), ಮನೋಜ್ ಭಾಂಡಗೆ, ಲಂಕೇಶ್ ಕೆಎಸ್, ಕೋದಂಡ ಅಜಿತ್ ಕಾರ್ತಿಕ್, ಶಿವಕುಮಾರ್ ರಕ್ಷಿತ್(ವಿಕೆಟ್ ಕೀಪರ್), ಜಗದೀಶ ಸುಚಿತ್, ಮೋನಿಶ್ ರೆಡ್ಡಿ, ಶಶಿಕುಮಾರ್ ಕೆ, ಕುಶಾಲ್ ವಾಧ್ವಾನಿ, ಗೌತಮ್ ಮಿಶ್ರಾ, ಶೋಯೆಬ್ ಮ್ಯಾನೇಜರ್, ಭರತ್ ಧುರಿ, ಮುರಳೀಧರ ವೆಂಕಟೇಶ್, ರಾಹುಲ್ ರಾವತ್, ಶ್ರೀಶ ಆಚಾರ್, ತುಷಾರ್ ಸಿಂಗ್, ಆದಿತ್ಯ ಮಣಿ
ಹುಬ್ಬಳ್ಳಿ ಟೈಗರ್ಸ್ ಸ್ಕ್ವಾಡ್: ಲುವ್ನಿತ್ ಸಿಸೋಡಿಯಾ, ಮೊಹಮ್ಮದ್ ತಾಹಾ, ಕೃಷ್ಣನ್ ಶ್ರೀಜಿತ್, ಸಂಜಯ್ ಅಶ್ವಿನ್(ವಿಕೆಟ್ ಕೀಪರ್), ಮನೀಶ್ ಪಾಂಡೆ(ನಾಯಕ), ಪ್ರವೀಣ್ ದುಬೆ, ಮನ್ವಂತ್ ಕುಮಾರ್ ಎಲ್, ಲವಿಶ್ ಕೌಶಲ್, ಎಂ ಬಿ ದರ್ಶನ್, ಕೆ ಸಿ ಕಾರಿಯಪ್ಪ, ವಿಧ್ವತ್ ಕಾವೇರಪ್ಪ, ಮಿತ್ರಕಾಂತ್ ಯಾದವ್, ರಾಜಶೇಖರ್ ಹರಿಕಾಂತ್, ಮಲ್ಲಿಕ್ಸಾಬ್ ಸಿರೂರ್, ಸಂತೋಕ್ ಸಿಂಗ್, ಬೆಂಗಳೂರು ಮೋಹಿತ್, ರೋಹಿತ್ ಕುಮಾರ್, ನಾಗ ಭರತ್, ಶಿವಂ ಎಂ ಬಿ, ನಾಥನ್ ಡಿಮೆಲ್ಲೋ, ಕ್ಲೆಮೆಂಟ್ ರಾಜಮೋಹನ್