Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Maharaja Trophy T20: ಪ್ರಶಸ್ತಿಗಾಗಿ ಶಿವಮೊಗ್ಗ, ಬೆಂಗಳೂರು ಬ್ಲಾಸ್ಟರ್ಸ್‌ ಫೈಟ್

ಬೆಂಗಳೂರು: ಅವಿನಾಶ್‌ ಕೆವಿ ಅರ್ಧಶತಕ ಹಾಗೂ ಧನುಷ್ ಗೌಡ್ ಅವರ ಮಾರಕ ದಾಳಿಯ ನೆರವಿನಿಂದ ಶಿವಮೊಗ್ಗ ಯೋಧಾಸ್ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶ ಪಡೆದಿದೆ. ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಹಾಗೂ ಶಿವಮೊಗ್ಗ ಯೋಧಾಸ್ ತಂಡಗಳು ಕಾದಾಟ ನಡೆಸಲಿವೆ.

ಎಂ ಚಿನ್ನಸ್ವಾಮಿ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಶಿವಮೊಗ್ಗ ತಂಡ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಮಂಗಳೂರು ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕ ಪ್ರಜ್ವಲ್‌ ಪವನ್ (8) ತಂಡದ ಮೊತ್ತ 34 ರನ್‌ ಆಗಿದ್ದಾಗ ಔಟ್ ಆದರು. 1 ಬೌಂಡರಿ, 2 ಸಿಕ್ಸರ್ ಸೇರಿದಂತೆ 34 ರನ್ ಬಾರಿಸಿದ್ದ ನಿಕಿನ್ ಜೋಸ್‌ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

Maharaja Trophy

ಮಧ್ಯಮ ಕ್ರಮಾಂಕದಲ್ಲಿ ಸಿದ್ಧಾರ್ಥ್ ಅಖಿಲ್‌ (2), ಶ್ರೇಯಸ್ ಗೋಪಾಲ್ (13), ಸೂರಜ್‌ ಅಹುಜಾ (9) ಜವಾಬ್ದಾರಿ ಮರೆತರು. ನಾಯಕ ಕರುಣ್‌ ನಾಯರ್ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಕರುಣ್‌ 31 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ಸಹಾಯದಿಂದ 41 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಮಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 143 ರನ್‌ ಸೇರಿಸಿತು. ಶಿವಮೊಗ್ಗ ತಂಡದ ಪರ ಧನುಷ್ ಗೌಡ ಮಾರಕ ದಾಳಿ ನಡೆಸಿದರು. ಇವರು 4 ಓವರ್‌ ಬೌಲಿಂಗ್ ಮಾಡಿ 21 ರನ್‌ ನೀಡಿ 4 ವಿಕೆಟ್‌ ಉರುಳಿಸಿದರು.

ಅನೀಶ್‌ ಅರ್ಧಶತಕ

ಗುರಿಯನ್ನು ಬೆನ್ನಟ್ಟಿದ ಶಿವಮೊಗ್ಗ ಯೋಧಾಸ ತಂಡದ ಆರಂಭಿಕ ಆಟಗಾರ ಲುವ್ನಿತ್ ಸಿಸೋಡಿಯಾ (14) ಹಾಗೂ ತುಷಾರ್ ಸಿಂಗ್ (14) ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ನವೀನ್‌ ಎಂಜಿ 12 ರನ್ ಬಾರಿಸಿ ಔಟ್ ಆದರು.

Maharaja Trophy

ಅನೀಶ್‌ ಕೆ.ವಿ 39 ಎಸೆತಗಳಲ್ಲಿ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 55 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಶಿವಮೊಗ್ಗ ಯೋಧಾಸ್‌ 18.4 ಓವರ್‌ಗಳಲ್ಲಿ 6 ವಿಕೆಟ್‌ಗೆ 144 ರನ್‌ ಸೇರಿಸಿ ಜಯ ಸಾಧಿಸಿತು.

Story first published: Saturday, July 11, 2026, 19:25 [IST]
Other articles published on Jul 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+