ಮಹಾರಾಜ ಟ್ರೋಫಿ: ಮಂಗಳೂರು ಡ್ರ್ಯಾಗನ್ಸ್ ಮೇಲೆರಗಿದ ಹುಬ್ಬಳ್ಳಿ ಟೈಗರ್ಸ್!
ಮಹಾರಾಜ ಟ್ರೋಫಿ 2023ರ ಆವೃತ್ತಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡದ ಘರ್ಜನೆ ಮುಂದುವರಿದಿದೆ. ಸತತ ನಾಲ್ಕನೇ ಪಂದ್ಯದಲ್ಲಿಯೂ ಹುಬ್ಬಳ್ಳಿ ಟೈಗರ್ಸ್ ತಂಡ ಅಜೇಯವಾಗುಳಿದಿದ್ದು ಮಂಗಳೂರು ಡ್ರ್ಯಾಗನ್ಸ್ ತಂಡಕ್ಕೆ ಭಾರೀ ಅಂತರದ ಸೋಲುಣಿಸಿದೆ. ಮಂಗಳೂರು ಡ್ರ್ಯಾಗನ್ಸ್‌ಗೆ ಇದು ಎರಡನೇ ಸೋಲಾಗಿದೆ.
ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಟೈಗರ್ಸ್ ಅಬ್ಬರಿಸಿದ್ದು ಮಂಗಳೂರು ತಂಡಕ್ಕೆ ಯವುದೇ ಹಂತದಲ್ಲಿಯೂ ಅವಕಾಶ ನಿಡಲೇ ಇಲ್ಲ. ಮೊದಲಿಗೆ ಬ್ಯಾಟಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಭರ್ಜರಿ 215 ರನ್‌ಗಳನ್ನು ಕಲೆಹಾಕಿದ ಹುಬ್ಬಳ್ಳಿ ಟೈಗರ್ಸ್ ತಂಡ ನಂತರ ಬೌಲಿಂಗ್‌ನಲ್ಲಿಯೂ ಮಂಗಳೂರು ತಂಡವನ್ನು ಕೇವಲ 152 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಈ ಪಂದ್ಯದಲ್ಲಿ 63 ರನ್‌ಗಳ ಅಮೋಗ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದ ಹುಬ್ಳಿ ಟೈಗರ್ಸ್ ತಂಡ ಮೊದಲ ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆದರೆ ನಂತರ ಎರಡು ಅಮೋಘ
ಜೊತೆಯಾವನ್ನು ಕಂಡ ಟೈಗರ್ಸ್ ತಂಡ ಬೃಹತ್ ಮೊತ್ತ ಪೆರಿಸುವಲ್ಲಿ ಯಶಸ್ವಿಯಾಯಿತು. ತಾಹ ಹಾಗೂ ಕೃಷ್ಣನ್ ಶ್ರೀಜಿತ್ ಜೋಡಿ ಎರಡನೇ ವಿಕೆಟ್‌ಗೆ ಭರ್ತಿ 90 ರನ್‌ಗಳ ಜೊತೆಯಾಟ ನೀಡಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಈ ಇಬ್ಬರು ಆಟಗಾರರು ಡ್ರ್ಯಾಗನ್ಸ್ ತಂಡದ ಬೌಲಿಂಗನ್ನು ಪುಡಿಗಟ್ಟಿದರು.
ತಾಹ 28 ಎಸೆತಗಳಲ್ಲಿ 52 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರೆ ಶ್ರೀಜಿತ್ 29 ಎಸೆತಗಳಲ್ಲಿ 52 ರನ್ ಬಾರಿಸಿದರು. ಇನ್ನು ನಾಯಕ ಮನೀಶ್ ಪಾಂಡೆ ಕೂಡ 34 ಎಸೆತಗಳನ್ನು ಎದುರಿಸಿ 69 ರನ್‌ಗಳ ಕೊಡುಗೆ ನೀಡುವ ಮೂಲಕ ಬೃಹತ್ ಮೊತ್ತಕ್ಕೆ ಕಾರಣವಾದರು. ಅಂತಿಮವಾಗಿ ಹುಬ್ಳಿ ಟೈಗರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 215 ರನ್‌ಗಳನ್ನು ಗಳಿಸಲು ಶಕ್ತವಾಯಿತು.
ಈ ಮೊತ್ತವನ್ನು ಬೆನ್ನಟ್ಟಿದ ಈ ಮೊತ್ತವನ್ನು ಬೆನ್ನಟ್ಟಿದ ಡ್ರ್ಯಾಗನ್ಸ್ ತಂಡ ಮೊದಲ ವಿಕೆಟ್ನ್ನು ಶೀಘ್ರದಲ್ಲೇ ಕಳೆದುಕೊಂಡರೂ ಎರಡನೇ ವಿಕೆಟ್‌ಗೆ ಉತ್ತಮ ಜೊತೆಯಾಟ ದೊರೆಯಿತು. ಶರತ್ ಬಿಆರ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ರನ್ ಬೆನ್ನಟ್ಟುವ ಭರವಸೆ ಮೂಡಿಸಿದರು. ಆದರೆ ನಂತರ ಕೃಷ್ಣಮೂರ್ತಿ ಸಿದ್ಧಾರ್ಥ್ ಹೊರತುಪಡಿಸಿದರೆ ಉಳಿದ ಆಟಗಾರರಿಂದ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ. ಹೀಗಾಗಿ ಡ್ರ್ಯಾಗನ್ಸ್ ತಂಡ 152 ರನ್‌ಗಳಿಗೆ ತನ್ನ ಹೋರಾಟ ಅಂತ್ಯಗೊಳಿಸಿತು.
ಮಂಗಳೂರು ಡ್ರ್ಯಾಗನ್ಸ್: ಶರತ್ ಬಿಆರ್ (ವಿಕೆಟ್ ಕೀಪರ್), ನವೀನ್ ಎಂಜಿ, ಅನೀಶ್ವರ್ ಗೌತಮ್, ಕೃಷ್ಣಮೂರ್ತಿ ಸಿದ್ಧಾರ್ಥ್, ಬಿಯು ಶಿವಕುಮಾರ್, ಅನಿರುದ್ಧ ಜೋಶಿ, ಕೃಷ್ಣಪ್ಪ ಗೌತಮ್ (ನಾಯಕ), ಧೀರಜ್ ಜೆ ಗೌಡ, ಆದಿತ್ಯ ಗೋಯಲ್, ಪ್ರತೀಕ್ ಜೈನ್, ಪಾರಸ್ ಗುರ್ಬಕ್ಸ್ ಆರ್ಯ
ಬೆಂಚ್: ರೋಹನ್ ಪಾಟೀಲ್, ನಿಕಿನ್ ಜೋಸ್, ಆನಂದ್ ದೊಡ್ಡಮನಿ, ಕೃತಿಕ್ ಕೃಷ್ಣ, ತಿಪ್ಪಾ ರೆಡ್ಡಿ, ಆದಿತ್ಯ ನಾಯರ್, ಗೌರವ್ ಧಿಮಾನ್, ರೋನಿತ್ ಮೋರ್
ಹುಬ್ಬಳ್ಳಿ ಟೈಗರ್ಸ್: ಲುವ್ನಿತ್ ಸಿಸೋಡಿಯಾ (ವಿಕೆಟ್ ಕೀಪರ್), ಮೊಹಮ್ಮದ್ ತಾಹಾ, ಕೃಷ್ಣನ್ ಶ್ರೀಜಿತ್, ನಾಗ ಭರತ್, ಮನೀಶ್ ಪಾಂಡೆ (ನಾಯಕ), ಮನ್ವಂತ್ ಕುಮಾರ್ ಎಲ್, ಪ್ರವೀಣ್ ದುಬೆ, ಲವಿಶ್ ಕೌಶಲ್, ಕೆಸಿ ಕಾರಿಯಪ್ಪ, ವಿಧ್ವತ್ ಕಾವೇರಪ್ಪ, ನಾಥನ್ ಡಿಮೆಲ್ಲೊ
ಬೆಂಚ್: ಮಿತ್ರಕಾಂತ್ ಯಾದವ್, ಬೆಂಗಳೂರು ಮೋಹಿತ್, ಶಿವಂ ಎಂ ಬಿ, ಕ್ಲೆಮೆಂಟ್ ರಾಜಮೋಹನ್, ಸಂತೋಕ್ ಸಿಂಗ್, ಮಲ್ಲಿಕ್ಸಾಬ್ ಸಿರೂರ್, ರಾಜಶೇಖರ್ ಹರಿಕಾಂತ್, ಎಂ.ಬಿ.ದರ್ಶನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications