For Quick Alerts
ALLOW NOTIFICATIONS  
For Daily Alerts
 

ಮಹಾರಾಜ ಟ್ರೋಫಿ: ಕೊನೆಯ ಲೀಗ್ ಪಂದ್ಯ ಗೆದ್ದ ಶಿವಮೊಗ್ಗ ಲಯನ್ಸ್: ಮಂಗಳೂರು, ಬೆಂಗಳೂರು ಔಟ್

ಮಹಾರಾಜ ಟ್ರೋಫಿ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ತಂಡ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮಹಾರಾಜ ಕಪ್ ಟೂರ್ನಿಯಲ್ಲಿ ಶಿವಮೊಗ್ಗ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಈ ಮೂಲಕ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಜೊತೆಗೆ ಮಂಗಳೂರು ಡ್ರ್ಯಾಗನ್ಸ್ ತಂಡ ಕೂಡ ಲೀಗ್ ಹಂತದಿಂದ ಹೊರಬಿದ್ದಂತಾಗಿದೆ.

ಈ ನಿರ್ಣಾಯಕ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಅಭಿನವ್ ಮನೋಹರ್ ಹಾಗೂ ಶ್ರೇಯಸ್ ಗೊಪಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು ಗಮನಸೆಳೆದಿದ್ದಾರೆ. ಅಭುನವ್ ಮನೋಹರ್ 25 ಎಸೆತಗಳಲ್ಲಿ 58 ರನ್‌ಗಳನ್ನು ಗಳಿಸಿದರೆ ಶ್ರೇಯಸ್ ಗೋಪಾಲ್ 43 ರನ್‌ಗಳನ್ನು ಗಳಿಸಿ ಮಿಂಚಿದರು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 192 ರನ್‌ಗಳನ್ನು ಕಲೆಹಾಕಿತು.

Maharaja Trophy: Shivamogga Lions win against Bengaluru blasters, enter Semifinal

ಈ ಮೊತ್ತವನ್ನು ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ಮಯಾಂಕ್ ಅಗರ್ವಾಲ್ ಈ ಪಂದ್ಯದಲ್ಲಿ ವಿಫಲವಾದರು. ಆದರೆ ದೀಗಾ ನಿಶ್ಚಲ್ 68 ರನ್‌ಗಳನ್ನು ಗಳಿಸಿ ಮಿಂಚಿದ್ದಾರೆ. ಅವರಿಗೆ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ. ಹಾಗಿದ್ದರೂ 8 ವಿಕೆಟ್ ಕಳೆದುಕೊಂಡು 181 ರನ್‌ಗಳಿಸಿ ತನ್ನ ಹೋರಾಟವನ್ನು ಅಂತ್ಯಗೊಳಿಸಿತು. ಈ ಮೂಲಕ 11 ರನ್‌ಗಳ ಅಂತರದಿಂದ ಶಿವಮೊಗ್ಗ ಬ್ಲಾಸ್ಟರ್ಸ್ ಗೆಲುವು ಸಾಧಿಸಿದೆ.

ಇನ್ನು ಲೀಗ್ ಹಂತದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡ ಹುಬ್ಬಳ್ಳಿ ಟೈಗರ್ಸ್ ಮೊದಲ ಸ್ಥಾನಿಯಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದರೆ ಮೈಸೂರು ವಾರಿಯರ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಹಾಗೂ ಶಿವಮೊಗ್ಗ ಲಯನ್ಸ್ ಸೆಮಿಫೈನಲ್‌ಗೆ ಪ್ರವೇಶಿಸಿದ ಉಳಿದ ಮೂರು ತಂಡಗಳಾಗಿದೆ.

ಬೆಂಗಳೂರು ಬ್ಲಾಸ್ಟರ್ಸ್: ಇಜೆ ಜಾಸ್ಪರ್, ಮಯಾಂಕ್ ಅಗರ್ವಾಲ್ (ನಾಯಕ), ಅಮನ್ ಖಾನ್, ಶುಭಾಂಗ್ ಹೆಗ್ಡೆ, ಸೂರಜ್ ಅಹುಜಾ (ವಿಕೆಟ್ ಕೀಪರ್), ಪವನ್ ದೇಶಪಾಂಡೆ, ಮೊಹ್ಸಿನ್ ಖಾನ್, ಸರ್ಫರಾಜ್ ಅಶ್ರಫ್, ಗೌರವ್, ಎಲ್ ಆರ್ ಕುಮಾರ್, ತನಿಶ್ ಮಹೇಶ್
ಬೆಂಚ್: ಲೋಚನ್ ಅಪ್ಪಣ್ಣ, ದೇಗಾ ನಿಶ್ಚಲ್, ರಿಷಿ ಬೋಪಣ್ಣ, ಆರನ್ ಕ್ರಿಸ್ಟಿ, ಅಭಿಮನ್ಯು ಮಿಥುನ್, ಪ್ರದೀಪ್ ಟಿ, ಜೆಸ್ವಂತ್ ಆಚಾರ್ಯ, ವಿದ್ಯಾಧರ್ ಪಾಟೀಲ್, ಅಭಿಷೇಕ್ ಅಹ್ಲಾವತ್, ಆಶಿಶ್ ಮಹೇಶ್, ಭುವನ್ ರಾಜು

ರೋಹನ್ ಕದಮ್, ನಿಹಾಲ್ ಉಳ್ಳಾಲ್ ( ವಿಕೆಟ್ ಕೀಪರ್), ವಿನಯ್ ಸಾಗರ್, ರೋಹಿತ್ ಕುಮಾರ್ ಕೆ, ಶ್ರೇಯಸ್ ಗೋಪಾಲ್ (ಸಿ), ಅಭಿನವ್ ಮನೋಹರ್, ಎಸ್ ಶಿವರಾಜ್, ಕ್ರಾಂತಿ ಕುಮಾರ್, ಪ್ರಣವ್ ಭಾಟಿಯಾ, ಆದಿತ್ಯ ಸೋಮಣ್ಣ, ಎಚ್ ಎಸ್ ಶರತ್
ಬೆಂಚ್: ವಾಸುಕಿ ಕೌಶಿಕ್, ರೋಹನ್ ನವೀನ್, ಅಧೋಕ್ಷ್ ಹೆಗ್ಡೆ, ನಿಶ್ಚಿತ್ ಎನ್ ರಾವ್, ಶ್ರೇಯಸ್ ಎಸ್ಪಿ, ದೀಪಕ್ ದೇವಾಡಿಗ, ಪವನ್ ಶ್ರೀದಿ, ಮೊಹಮ್ಮದ್ ಇಬ್ರಾಹಿಂ ರಾಯಣ್ಣ, ಅಶೋಕ್ ಡಿ.

Story first published: Sunday, August 27, 2023, 22:25 [IST]
Other articles published on Aug 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+