Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Maharaja Trophy T20 2026: ಬೆಂಗಳೂರು, ಶಿವಮೊಗ್ಗ ತಂಡಕ್ಕೆ ಭರ್ಜರಿ ಜಯ

ಮೈಸೂರು: ಭರವಸೆಯ ಆಟಗಾರರಾದ ನವೀನ್‌ ಎಂಜೆ (75 ರನ್‌) ಹಾಗೂ ಅಭಿಲಾಷ್‌ ಶೆಟ್ಟಿ (25 ರನ್‌ಗೆ 4 ವಿಕೆಟ್) ಇವರುಗಳ ಭರ್ಜರಿ ಆಟದ ನೆರವಿನಿಂದ ಶಿವಮೊಗ್ಗ ಯೋಧಾಸ್ 42 ರನ್‌ಗಳಿಂದ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಗೆಲುವಿನ ಮೂಲಕ ಶಿವಮೊಗ್ಗ ಟೂರ್ನಿಯಲ್ಲಿ ಎರಡನೇ ಗೆಲುವಿನ ನಗೆ ಬೀರಿದ್ದು, 4 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, 221 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಹುಬ್ಬಳ್ಳಿ ತಂಡದ ಆರಂಭ ಕಳಪೆಯಾಗಿತ್ತು. ಪ್ರೀತೇಶ್ ಇಂಗಲ್ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಮೊಹಮ್ಮದ್ ತಹಾ ಹಾಗೂ ಹಾರ್ದಿಕ್ ರಾಜ್‌ 44 ಎಸೆತಗಳಲ್ಲಿ 74 ರನ್‌ ಸೇರಿಸಿತು. ಮೊಹಮ್ಮದ್ ತಹಾ 33 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 44 ರನ್‌ ಬಾರಿಸಿದರು. ಹಾರ್ದಿಕ್ ರಾಜ್ 5 ಬೌಂಡರಿ, 3 ಸಿಕ್ಸರ್ ಸಹಿತ 43 ರನ್‌ ಸಿಡಿಸಿದರು.

Maharaja Trophy T20 2026

ಭರವಸೆಯ ಆಟಗಾರ ಮಯಾಂಕ್ ಅಗರ್‌ವಾಲ್‌ 28, ಶಿವಕುಮಾರ್ ರಕ್ಷಿತ್ 13, ಮನ್ವಂತಕುಮಾರ್ ಎಲ್ 18, ಶಿಖರ್ ಶೆಟ್ಟಿ 13 ರನ್‌ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಹುಬ್ಬಳ್ಳಿ ಟೈಗರ್ಸ್‌ 19.3 ಓವರ್‌ಗಳಲ್ಲಿ 178 ರನ್‌ಗಳಿಗೆ ಆಲೌಟ್ ಆಯಿತು. ಶಿವಮೊಗ್ಗ ಪರ ಅಭಿಲಾಷ್ ಶೆಟ್ಟಿ 25 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ತಂಡದ ಪರ ಲುವ್ನಿತ್ ಸಿಸೋಡಿಯಾ ಹಾಗೂ ನವೀನ್‌ ಎಂಜಿ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 61 ಎಸೆತಗಳಲ್ಲಿ 118 ರನ್‌ ಸೇರಿಸಿ ತಂಡಕ್ಕೆ ಆಧಾರವಾಯಿತು. ಲುವ್ನಿತ್ ಸಿಸೋಡಿಯಾ 6 ಬೌಂಡರಿ, 3 ಸಿಕ್ಸರ್ ನೆರವಿನಿಂದ 57 ರನ್‌ ಬಾರಿಸಿದರೆ, ನವೀನ್‌ ಎಂಜಿ 5 ಬೌಂಡರಿ, 6 ಸಿಕ್ಸರ್ ಸಹಾಯದಿಂದ 75 ರನ್‌ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸ್ಮರಣ್ ರವಿಚಂದ್ರನ್‌ 37, ತುಷಾರ್ ಸಿಂಗ್ 22 ರನ್ ಬಾರಿಸಿದರು. ಅಂತಿಮವಾಗಿ ಶಿವಮೊಗ್ಗ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 220 ರನ್‌ ಸೇರಿಸಿತು.

ಮಂಗಳೂರಿಗೆ ಸೋಲು

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಕೋಸ್ಟಲ್ ಕಿಂಗ್ಸ್ ಮಂಗಳೂರು ಮತ್ತು ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಕಾದಾಟ ನಡೆಸಿದವು. ಮೊದಲು ಬ್ಯಾಟಿಂಗ್ ಮಾಡಿದ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಕೃಷ್ಣ ಶ್ರೀಜಿತ್ 33 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 59 ರನ್‌ ಸಿಡಿಸಿದರು. ಉಳಿದಂತೆ ಸಮಿತ್ ದ್ರಾವಿಡ್‌ 39, ಶುಭಾಂಗ್ ಹೆಗ್ಡೆ 34, ಪ್ರವೀಣ್ ದುಬೆ ಅಜೇಯ 45 ರನ್‌ ಸಿಡಿಸಿದರು.

Maharaja Trophy T20 2026

ಗುರಿಯನ್ನು ಬೆನ್ನಟ್ಟಿದ ಮಂಗಳೂರು ತಂಡದ ಪರ ಸೂರಜ್ ಅಹುಜಾ 5 ಬೌಂಡರಿ, 8 ಸಿಕ್ಸರ್ ಸಹಾಯದಿಂದ ಅಜೇಯ 96, ಕೋದಂಡ ಅಜಿತ್ ಕಾರ್ತಿಕ್ ಅಜೇಯ 49 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಮಂಗಳೂರು ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 206 ರನ್‌ ಕಲೆ ಹಾಕಿತು. ಬೆಂಗಳೂರು ತಂಡದ ಪರ ಶುಭಾಂಗ್ ಹೆಗ್ಡೆ 2 ವಿಕೆಟ್‌ ಪಡೆದರು.

Story first published: Wednesday, June 24, 2026, 23:58 [IST]
Other articles published on Jun 24, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+