Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Maharaja Trophy T20: ಫೈನಲ್‌ಗೆ ಲಗ್ಗೆ ಇಟ್ಟ ಬೆಂಗಳೂರು; ಎರಡನೇ ಕ್ವಾಲಿಫೈಯರ್‌ನಲ್ಲಿ ಶಿವಮೊಗ್ಗ, ಮಂಗಳೂರು ಕಾದಾಟ

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಅಂತಿಮ ಘಟ್ಟದತ್ತ ಮುಖ ಮಾಡಿದೆ. ಶುಕ್ರವಾರ ಈ ಟೂರ್ನಿಯ ಮಹತ್ವದ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಯಿತು. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್‌ 12 ರನ್‌ಗಳಿಂದ ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ತಂಡವನ್ನು ಮಣಿಸಿ, ಟೂರ್ನಿಯ ಫೈನಲ್‌ಗೆ ಅರ್ಹತೆ ಪಡೆದಿದೆ. ಈ ಪಂದ್ಯದಲ್ಲಿ ಸೋಲು ಕಂಡಿರುವ ಮಂಗಳೂರು ತಂಡ ಶನಿವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಶಿವಮೊಗ್ಗ ಯೋಧಾಸ್ ತಂಡವನ್ನು ಎದುರಿಸಲಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಕಳಪೆ ಆರಂಭವನ್ನು ಕಂಡಿತು. ಈ ಪಂದ್ಯದಲ್ಲಿ ಟಾಪ್ ಆರ್ಡರ್‌ ಬ್ಯಾಟರ್‌ಗಳು ನೆಲಕಚ್ಚಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಒಂದು ಹಂತದಲ್ಲಿ 52 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಶುಭಾಂಗ್ ಹೆಗ್ಡೆ ಹಾಗೂ ಪ್ರವೀಣ್‌ ದುಬೆ ಜೋಡಿ ಆಧಾರವಾಯಿತು.

Maharaja Trophy T20

ಶುಭಾಂಗ್‌, ಪ್ರವೀಣ್ ಶತಕದ ಜೊತೆಯಾಟ

ಆರನೇ ವಿಕೆಟ್‌ಗೆ ಶುಭಾಂಗ್‌ ಹೆಗ್ಡೆ ಹಾಗೂ ಪ್ರವೀಣ್ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 74 ಎಸೆತಗಳಲ್ಲಿ ಅಜೇಯ 133 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿತು. ನಾಯಕ ಶುಭಾಂಗ್‌ 52 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 65 ರನ್‌ ಬಾರಿಸಿದರೆ, ಪ್ರವೀಣ್ ದುಬೆ 38 ಎಸೆತಗಳಲ್ಲಿ ಅಜೇಯ 69 ರನ್‌ ಸಿಡಿಸಿದರು. ಅಂತಿಮವಾಗಿ ಬೆಂಗಳೂರು ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 185 ರನ್‌ ಸೇರಿಸಿತು.

ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮಂಗಳೂರು ತಂಡದ ಬ್ಯಾಟರ್‌ಗಳು ಸಹ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಭರವಸೆಯ ಆಟಗಾರ ನಿಕಿನ್ ಜೋಸ್‌ (45), ಪ್ರಜ್ವಲ್‌ ಪವನ್ (21), ಸಿದ್ಧಾರ್ಥ್ ಅಖೀಲ್ (37) ತಂಡಕ್ಕೆ ಕೊಂಚ ನೆರವಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸೂರಜ್ ಅಹೂಜಾ ಅವರು 29 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 52 ರನ್ ಬಾರಿಸಿದರೂ ಸಹ ತಂಡಕ್ಕೆ ಜಯದ ಮಾಲೆ ತೊಡಿಸುವಲ್ಲಿ ಎಡವಿದರು. ಮಂಗಳೂರು 20 ಓವರ್‌ಗಳಲ್ಲಿ 6 ವಿಕೆಟ್‌ಗೆ 173 ರನ್‌ ಸೇರಿಸಿ ಸೋಲು ಕಂಡಿತು. ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ಮಂಗಳೂರು ತಂಡ ಎರಡನೇ ಕ್ವಾಲಿಫೈಯರ್‌ನಲ್ಲಿ ಆಡಲಿದೆ.

Maharaja Trophy T20

ಎರಡನೇ ಕ್ವಾಲಿಫೈಯರ್‌ಗೆ ಶಿವಮೊಗ್ಗ ಲಗ್ಗೆ

ಇದಕ್ಕೂ ಮೊದಲು ಎಲಿಮಿನೇಟರ್ ಪಂದ್ಯದಲ್ಲಿ ಶಿವಮೊಗ್ಗ ಯೋಧಾಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ಕಾದಾಟ ನಡೆಸಿದವು. ಟಾಸ್‌ ಗೆದ್ದು ಶಿವಮೊಗ್ಗ ಮೊದಲು ಬೌಲಿಂಗ್ ಮಾಡಲು ಮುಂದಾಯಿತು. ಮೊದಲು ಬ್ಯಾಟ್ ಮಾಡಿದ ಮೈಸೂರು ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 161 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಶಿವಮೊಗ್ಗ 16.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 162 ರನ್‌ ಬಾರಿಸಿ ಜಯ ಸಾಧಿಸಿತು. ಈ ಮೂಲಕ ಶಿಮಮೊಗ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮಂಗಳೂರು ತಂಡವನ್ನು ಎದುರಿಸಲಿದೆ.

Story first published: Friday, July 10, 2026, 23:57 [IST]
Other articles published on Jul 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+