Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Maharaja Trophy T20: ಕೋಸ್ಟಲ್‌ ಕಿಂಗ್ಸ್‌ಗೆ 8 ವಿಕೆಟ್ ಜಯ

ಹುಬ್ಬಳ್ಳಿ: ಭರವಸೆಯ ಆಟಗಾರರಾದ ಮುರಳೀಧರ ವೆಂಕಟೇಶ ಹಾಗೂ ರತನ್ ಬಿ.ಆರ್ ಇವರ ಅಮೋಘ ಆಟದ ನೆರವಿನಿಂದ ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ತಂಡ 8 ವಿಕೆಟ್‌ಗಳಿಂದ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ನಲ್ಲಿ ಶಿವಮೊಗ್ಗ ಯೋಧಾಸ್ ತಂಡವನ್ನು ಮಣಿಸಿತು.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ತಂಡದ ಆರಂಭಿಕ ಆಟಗಾರರು ದೊಡ್ಡ ಜೊತೆಯಾಟದ ಕಾಣಿಕೆ ನೀಡುವಲ್ಲಿ ವಿಫಲರಾದರು. ಆರಂಭಿಕ ನವೀನ್‌ ಎಂಜಿ (10), ಅನೀಶ್‌ ಕೆವಿ, ನಾಯಕ ಆರ್ ಸ್ಮರಣ್‌ (6) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕ ಲುವ್ನಿತ್ ಸಿಸೋಡಿಯಾ 28 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 35 ರನ್‌ ಬಾರಿಸಿ ಮಿಂಚಿದರು.

Maharaja Trophy T20

ಮಧ್ಯಮ ಕ್ರಮಾಂಕದಲ್ಲಿ ಹರ್ಷಿಲ್ ಧರ್ಮಣಿ 26 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 28 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಶಿವಮೊಗ್ಗ 17 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 113 ರನ್‌ ಸೇರಿಸಿತು. ಮಂಗಳೂರು ತಂಡದ ಪರ ರತನ್‌ ಬಿಆರ್‌ 16 ರನ್‌ ನೀಡಿ 3 ವಿಕೆಟ್‌ ಕಬಳಿಸಿದರೆ, ವಾಸುಕಿ ಕೌಶಿಕ್ 2 ವಿಕೆಟ್‌ ಉರುಳಿಸಿದರು.

ಭರ್ಜರಿ ಆರಂಭ

ಗುರಿಯನ್ನು ಬೆನ್ನಟ್ಟಿದ ಮಂಗಳೂರು ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಮುರಳೀಧರ ವೆಂಕಟೇಶ ಮತ್ತು ನಿಕಿನ್ ಜೋಸ್ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟವನ್ನು ನೀಡಿತು. ಈ ಜೋಡಿ 47 ಎಸೆತಗಳಲ್ಲಿ 81 ರನ್‌ ಸೇರಿಸಿತು. ಈ ಹಂತದಲ್ಲಿ 31 ರನ್ ಬಾರಿಸಿದ್ದ ನಿಕಿನ್ ಜೋಸ್ ಭೀಮ್ ರಾವ್ ನವಲೆಗೆ ವಿಕೆಟ್‌ ಒಪ್ಪಿಸಿದರು.

Maharaja Trophy T20

ಆರಂಭಿಕ ಆಟಗಾರ ಮುರಳೀಧರ ವೆಂಕಟೇಶ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 45 ರನ್‌ ಬಾರಿಸಿ ಔಟ್ ಆದರು. ಸಿದ್ಧಾರ್ಥ್ ಅಖಿಲ್ (ಅಜೇಯ 22) ಹಾಗೂ ರಾಜ್‌ವೀರ್ (ಅಜೇಯ 10) ತಂಡವನ್ನು ಗೆಲುವಿನ ದಡ ದಾಟಿಸಿದರು. ಅಂತಿಮವಾಗಿ ಮಂಗಳೂರು 12.4 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 118 ರನ್‌ ಸಿಡಿಸಿ ಜಯ ಸಾಧಿಸಿತು.

ಅಂಕಪಟ್ಟಿಯ ವಿವರ

ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್‌ ಆಡಿದ 5 ಪಂದ್ಯಗಳಲ್ಲಿ 8 ಅಂಕಗಳನ್ನು ಕಲೆ ಹಾಕಿ ಮೊದಲ ಸ್ಥಾನದಲ್ಲಿದೆ. ಇನ್ನು ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ತಂಡ ಆಡಿದ 5 ಪಂದ್ಯಗಳಲ್ಲಿ 3 ಜಯ, 1 ಸೋಲು, 1 ಪಂದ್ಯ ರದ್ದಾಗಿದ್ದು 7 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

Story first published: Sunday, June 28, 2026, 22:02 [IST]
Other articles published on Jun 28, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+