Maharaja Trophy: ಬೆಂಗಳೂರು ಮಣಿಸಿದ ಶಿವಮೊಗ್ಗ ಚಾಂಪಿಯನ್
ಬೆಂಗಳೂರು: ಆರಂಭಿಕ ಲುವ್ನಿತ್ ಸಿಸೋಡಿಯಾ (87 ರನ್) ಇವರ ಭರ್ಜರಿ ಆಟದ ನೆರವಿನಿಂದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ಯೋಧಾಸ 4 ವಿಕೆಟ್‌ಗಳಿಂದ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ ತಂಡದ ಆರಂಭಿಕರು ದೊಡ್ಡ ಇನಿಂಗ್ಸ್ ಕಟ್ಟಲುವಲ್ಲಿ ವಿಫಲರಾದರು. ಆರಂಭಿಕ ಭುವನ್ ಮೋಹನ್ ರಾಜು ಹಾಗೂ ರೋಹನ್ ಪಾಟಿಲ್ (11) ಜೋಡಿ ಮೊದಲ ವಿಕೆಟ್‌ಗೆ 35 ರನ್ ಸೇರಿಸಿತು. ಈ ಹಂತದಲ್ಲಿ ಭುವನ್ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 23 ರನ್ ಸಿಡಿಸಿ ಔಟ್ ಆದರು. ಕೃಷ್ಣ ಶ್ರೀಜೇತ ರನ್ ಕಲೆ ಹಾಕುವಲ್ಲಿ ವಿಫಲರಾದರು.
ನಾಲ್ಕನೇ ವಿಕೆಟ್‌ಗೆ ಸಮಿತ್ ದ್ರಾವಿಡ್ ಹಾಗೂ ನಾಯಕ ಶುಭಂಗ್ ಹೆಗ್ಡೆ ಜೋಡಿ 58 ಎಸೆತಗಳಲ್ಲಿ 56 ರನ್ ಸೇರಿಸಿತು. ಸಮಿತ್ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 37 ರನ್ ಹಾಗೂ ಶುಭಂಗ್ 31 ರನ್ ಸಿಡಿಸಿದರು.

ಕೆಳ ಕ್ರಮಾಂಕದಲ್ಲಿ ವಾಹಿದ್ ಫೈಜಾನ್ ಖಾನ್ 29 ರನ್, ರೋಹನ್ ನವೀನ್ 25 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಅಂತಿಮವಾಗಿ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 185 ರನ್ ಸೇರಿಸಿತು.
ಲುವ್ನಿತ್ ಸಿಸೋಡಿಯಾ ಅರ್ಧಶತಕ
186 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶಿವಮೊಗ್ಗ ಯೋಧಾಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ ತುಷಾರ್ ಸಿಂಗ್ ಹಾಗೂ ಆದರ್ಶ್ ಪ್ರಜ್ವಾಲ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ಗೆ ಆರಂಭಿಕ ಲುವ್ನಿತ್ ಸಿಸೋಡಿಯಾ ಹಾಗೂ ನವೀನ್ ಎಂಜಿ (24) ಜೋಡಿ 50 ಎಸೆತಗಳಲ್ಲಿ 68 ರನ್ ಸೇರಿಸಿತು.

ನಾಲ್ಕನೇ ವಿಕೆಟ್‌ಗೆ ಲುವ್ನಿತ್ ಸಿಸೋಡಿಯಾ ಹಾಗೂ ಅನೀಶ್ ಕೆವಿ ಜೋಡಿ 22 ಎಸೆತಗಳಲ್ಲಿ 53 ರನ್ ಸೇರಿಸಿತು. ಈ ಹಂತದಲ್ಲಿ ಲುವ್ನಿತ್ ಸಿಸೋಡಿಯಾ 45 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಾಯದಿಂದ 87 ರನ್ ಸಿಡಿಸಿ ಔಟ್ ಆದರು. ಅನೀಶ್ ಕೆವಿ 38 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಶಿವಮೊಗ್ಗ ಯೋಧಾಸ್ 19.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್ ಸೇರಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಮಹಾರಾಜ ಟ್ರೋಫಿ ಗೆದ್ದ ತಂಡಗಳು
ಶಿವಮೊಗ್ಗ ಯೋಧಾಸ್- 2026
ಮಂಗಳೂರು ಡ್ರಾಗನ್ಸ್- 2025
ಮೈಸೂರು ವಾರಿಯರ್ಸ್- 2024
ಹುಬ್ಬಳ್ಳಿ ಟೈಗರ್ಸ್- 2023
ಗುಲ್ಬರ್ಗಾ ಮಿಸ್ಟಿಕ್ಸ್- 2022
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications