Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Maharaja Trophy T20: ಮಂಗಳೂರಿಗೆ ಗೆಲುವಿನ ಶ್ರೇಯ; ಗುಲ್ಬರ್ಗಾಕ್ಕೆ ಜಯ

ಮೈಸೂರು: ಸ್ಟಾರ್ ಆಟಗಾರ ಶ್ರೇಯಸ್‌ ಗೋಪಾಲ್ ಹಾಗೂ ನಾಯಕ ಕರುಣ್ ನಾಯರ್ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ತಂಡವು ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ 6 ವಿಕೆಟ್‌ಗಳಿಂದ ಮೈಸೂರು ವಾರಿಯರ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ಮಂಗಳೂರು ತಂಡ ಆಡಿದ 4 ಪಂದ್ಯಗಳಲ್ಲಿ 2 ಜಯ, 1 ಡ್ರಾ, 1 ಸೋಲು ಕಂಡಿದ್ದು, 5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ತಮ್ಮದಾಗಿಸಿಕೊಂಡ ಮೈಸೂರು ವಾರಿಯರ್ಸ್ ತಂಡದ ಆರಂಭ ಕಳಪೆಯಾಗಿತ್ತು. ಎಸ್‌ಯು ಕಾರ್ತಿಕ್‌ (4) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಎಲ್‌ಆರ್ ಚೇತನ್ ಹಾಗೂ ವಿಶಾಲ್ ಓನಾಟ್ (23) ಜೋಡಿ 34 ಎಸೆತಗಳಲ್ಲಿ 57 ರನ್‌ ಸೇರಿಸಿತು. ಯುವರಾಜ್ ಅರೋರಾ 5 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 37 ರನ್‌ ಸಿಡಿಸಿದರು.

Maharaja Trophy T20

ವಿಕೆಟ್‌ ಕೀಪರ್ ಬ್ಯಾಟರ್‌ ಎಲ್‌ಆರ್‌ ಚೇತನ್ 35 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ನೆರವಿನಿಂದ 67 ರನ್‌ ಸಿಡಿಸಿದರು. ಅಂತಿಮವಾಗಿ ಮೈಸೂರು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 191 ರನ್‌ ಸೇರಿಸಿತು. ಮಂಗಳೂರು ತಂಡದ ಪರ ವಾಸೂಕಿ ಕೌಶಿಕ್ ಮೂರು ವಿಕೆಟ್‌ ಕಬಳಿಸಿದರು.

ಕರುಣ್‌, ಶ್ರೇಯಸ್‌ ಭರ್ಜರಿ ಜೊತೆಯಾಟ

192 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮಂಗಳೂರು ತಂಡದ ಆರಂಭಿಕ ಮುರಳೀಧರ ವೆಂಕಟೇಶ್ (9) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ನಿಕಿನ್ ಜೋಸ್ (22)‌, ಧೀರಜ್ ಗೌಡ್ (0) ರನ್‌ ಕಲೆ ಹಾಕುವಲ್ಲಿ ವಿಫಲರಾದರು. 42 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕರುಣ್ ನಾಯರ್ ಹಾಗೂ ಶ್ರೇಯಸ್ ಗೋಪಾಲ್‌ ಜೋಡಿ ಆಧಾರವಾಯಿತು. ಈ ಜೊಡಿ 60 ಎಸೆತಗಳಲ್ಲಿ 123 ರನ್‌ ಸೇರಿಸಿತು. ಕರುಣ್ ನಾಯರ್ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 61 ರನ್ ಬಾರಿಸಿದರು. ಭರವಸೆಯ ಆಟಗಾರ ಶ್ರೇಯಸ್ ಗೋಪಾಲ್‌ 9 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅಜೇಯ 84 ರನ್‌ ಸಿಡಿಸಿ ಅಬ್ಬರಿಸಿದರು. ಅಂತಿಮವಾಗಿ ಮಂಗಳೂರು 17.4 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 195 ರನ್‌ ಸೇರಿಸಿ ಜಯ ಸಾಧಿಸಿತು.

ಗುಲ್ಬರ್ಗಾಕ್ಕೆ ಭರ್ಜರಿ ಜಯ

ಗುರುವಾರ ನಡೆದ ಎರಡನೇ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್‌ 7 ವಿಕೆಟ್‌ಗಳಿಂದ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಅಲ್ಲದೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವಿನ ನಗೆ ಬೀರಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 119 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಹುಬ್ಬಳ್ಳಿ ಪರ ಶಿಖರ್ ಶೆಟ್ಟಿ (27 ರನ್) ಹಾಗೂ ಅಭಿನವ್ ಮನೋಹರ್ (21 ರನ್) ತಂಡದ ಮೊತ್ತವನ್ನು ಹಿಗ್ಗಿಸಿದರು.

Maharaja Trophy T20

ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವು ಮೆಕ್‌ನೀಲ್ ಹ್ಯಾಡ್ಲಿ ನೊರೊನ್ಹಾ ಅವರ ಸ್ಫೋಟಕ 42 ರನ್ ಹಾಗೂ ತಿಪ್ಪಾ ರೆಡ್ಡಿ ಅವರ ಜವಾಬ್ದಾರಿಯುತ 34 ರನ್‌ಗಳ ನೆರವಿನಿಂದ ಕೇವಲ 13.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿ ಜಯ ಸಾಧಿಸಿತು.

Story first published: Thursday, June 25, 2026, 23:56 [IST]
Other articles published on Jun 25, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+