For Quick Alerts
ALLOW NOTIFICATIONS  
For Daily Alerts
 

Maharajas Trophy: ಹುಬ್ಬಳ್ಳಿ, ಮಂಗಳೂರು ತಂಡಗಳಿಗೆ ಜಯ

ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ ಮಹಾರಾಜ್ ಟ್ರೋಫಿ ಟಿ20 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ 8 ವಿಕೆಟ್‌ಗಳಿಂದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು, ಇನ್ನೊಂದು ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್‌ 5 ರನ್‌ಗಳಿಂದ ಶಿವಮೊಗ್ಗ ಲಯನ್ಸ್ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ಮಂಗಳೂರು ಅಗ್ರ ಸ್ಥಾನವನ್ನು ಭದ್ರ ಪಡಿಸಿಕೊಂಡರೆ, ಹುಬ್ಬಳ್ಳಿ 10 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದೆ.

ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಹುಬಳ್ಳಿ ಎದುರು ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗ್ ಮಿಸ್ಟಕ್ಸ್ ತಂಡದ ಆರಂಭ ಉತ್ತಮವಾಗಿತ್ತು. ಲುವನಿತ್ ಸಿಸೋಡಿಯಾ (15) ಹಾಗೂ ಪ್ರಜ್ವಲ್ ಪವನ್ (23) ಜೋಡಿ 35 ರನ್‌ ಗಳ ಜೊತೆಯಾಟದ ಕಾಣಿಕೆ ನೀಡಿತು. ಸಿದ್ಧಾರ್ಥ್ (2) ರನ್ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ನಾಯಕ ಸ್ಮರಣ್‌ ರವಿಚಂದ್ರನ್‌ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದರು. ಇವರು 48 ಎಸೆತಗಳಲಲಿ 6 ಬೌಂಡರಿ, 5 ಸಿಕ್ಸರ್‌ ಸಹಾಯದಿಂದ ಅಜೇಯ 84 ರನ್‌ ಬಾರಿಸಿದರು. ಅಂತಿಮವಾಗಿ ಗುಲ್ಬರ್ಗ್‌ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್‌ ಸೇರಿಸಿತು.

Maharajas Trophy T20 Hubli Tigers and Mangaluru Dragons Clinch Thrilling Victories

ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಹುಬ್ಬಳ್ಳಿ ತಂಡದ ಆರಂಭ ಸಾಧಾರಣವಾಗಿತ್ತು. ಭರವಸೆಯ ಬ್ಯಾಟರ್‌ ಮೊಹಮ್ಮದ್ ತಹಾ (17) ಬೇಗನೆ ಪೆವಿಲಿಯನ್ ಸೇರಿದರು. ನಾಯಕ ದೇವದತ್ ಪಡಿಕ್ಕಲ್ ಹಾಗೂ ಕಾರ್ತಿಕೇಯ ಕೆಪಿ ಜೋಡಿ ತಂಡಕ್ಕೆ ಶತಕದ ಜೊತೆಯಾಟವನ್ನು ನೀಡಿತು. ದೇವದತ್ 5 ಬೌಂಡರಿ, 3 ಸಿಕ್ಸರ್‌ ಸಹಾಯದಿಂದ 69 ರನ್‌ ಸಿಡಿಸಿದರೆ, ಕಾರ್ತಿಕೇಯ 48 ಎಸೆತಗಳಲ್ಲಿ ಅಜೇಯ 81 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಹುಬ್ಬಳ್ಳಿ 18.2 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 173 ರನ್‌ ಸೇರಿಸಿ ಜಯ ಸಾಧಿಸಿತು.

ಮಂಗಳೂರಿಗೆ ಜಯ

ಎರಡನೇ ಪಂದ್ಯದಲ್ಲಿ ಟಾಸ್‌ ಗೆದ್ದ ಮಂಗಳೂರು, ಶಿವಮೊಗ್ಗ ವಿರುದ್ಧ ಮೊದಲು ಬ್ಯಾಟ್ ಮಾಡಿತು. ಲೋಚನ್‌ ಗೌಡ್ ಹಾಗೂ ಶರತ್ ಬಿಆರ್ (28) ಜೋಡಿ ಮೊದಲ ವಿಕೆಟ್‌ಗೆ 45 ರನ್‌ ಸಸೇರಿಸಿತು. ಆದರ್ಶ್ ಪ್ರಜ್ವಲ್‌ (7) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕ ಲೋಚನ್‌ ಗೌಡ 2 ಬೌಂಡರಿ, 5 ಸಿಕ್ಸರ್‌ ಸಹಾಯದಿಂದ 63 ರನ್‌ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅನೀಶ್‌ ಕೆವಿ 31, ಮ್ಯಾಕ್ನೀಲ್ ನೊರೊನ್ಹಾ ಅಜೇಯ 33, ಎಸ್‌ ಶಿವರಾಜ್ (28) ರನ್‌ ಕಲೆ ಹಾಕಿ ತಂಡಕ್ಕೆ ಆಧಾರವಾದರು. ಅಂತಿವಾಗಿ ಮಂಗಳೂರು 20 ಓವರ್‌ಗಳಲ್ಲಿ 5 ವಿಕೆಟ್‌ಗೆ 200 ರನ್‌ ಸೇರಿಸಿತು.

Maharajas Trophy T20 Hubli Tigers and Mangaluru Dragons Clinch Thrilling Victories

ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಶಿವಮೊಗ್ಗ ಲಯನ್ಸ್ ಆರಂಭ ಭರ್ಜರಿಯಾಗಿತ್ತು. ತುಷಾರ್‌ ಸಿಂಗ್ ಹಾಗೂ ನಿಹಾಲ್ ಉಲ್ಲಾಳ (13), ಮೊದಲ ವಿಕೆಟ್‌ಗೆ 55 ರನ್‌ ಸೇರಿಸಿದರು. ಎರಡನೇ ವಿಕೆಟ್‌ಗೆ ತುಷಾರ್ ಹಾಗೂ ಅನೀಶ್ವರ್ ಗೌತಮ್ (35) ಜೋಡಿ ಸಹ ಅರ್ಧಶತಕ ಜೊತೆಯಾಟದ ಕಾಣಿಕೆ ನೀಡಿತು. ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ರಾಜ್‌ (32) ಕೊಂಚ ಎದುರಾಳಿಗೆ ಕಾಡಿದರು. ಆರಂಭಿಕ ತುಷಾರ್ ಸಿಂಗ್ 6 ಬೌಂಡರಿ, 7 ಸಿಕ್ಸರ್ ಸಹಾಯದಿಂದ 89 ರನ್‌ ಬಾರಿಸಿ ಸೋಲಿನಲ್ಲಿ ಮಿಂಚಿದರು. ಅಂತಿಮವಾಗಿ ಶಿವಮೊಗ್ಗ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 195 ರನ್‌ ಸಿಡಿಸಿ ಸೋಲು ಕಂಡಿತು.

Story first published: Saturday, August 23, 2025, 8:35 [IST]
Other articles published on Aug 23, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+