Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Maharaja Trophy ಫೈನಲ್ ಸೆಣೆಸಾಟ: ಹುಬ್ಬಳ್ಳಿ ಟೈಗರ್ಸ್ vs ಮೈಸೂರ್ ವಾರಿಯರ್ಸ್: Live ಸ್ಕೋರ್

ಮಹಾರಾಜ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಹಾಗೂ ಮೈಸೂರ್ ವಾರಿಯರ್ಸ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಟ ನಡೆಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮೈಸೂರ್ ವಾರಿಯರ್ಸ್ ತಂಡ ಆರಂಭದಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಹುಬ್ಳಿ ಟೈಗರ್ಸ್ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡಿದೆ.

ಕರುಣ್ ನಾಯರ್ ನೇತೃತ್ವದ ಮೈಸೂರ್ ವಾರಿಯರ್ಸ್ ತಂಡ ಸೆಮಿಫೈನಲ್‌ನಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು 36 ರನ್‌ಗಳ ಅಂತರದಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿತ್ತು. ಕರುಣ್ ನಾಯರ್ ಅವರ ಸ್ಪೋಟಕ ಶತಕದಿಂದಾಗಿ ಸೆಮಿಫೈನಲ್‌ನಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿತ್ತು. ಮತ್ತೊಂದೆಡೆ ಹುಬ್ಬಳ್ಳಿ ಟೈಗರ್ಸ್ ತಂಡ ಶಿವಮೊಗ್ಗ ತಂಡದ ವಿರುದ್ಧ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು.

Maharaka Trophy Final: Hubli Tigers vs Mysore Warriors Live score, Playing XI

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣ ಯಾವಾಗಲೂ ಬ್ಯಾಟರ್‌ಗಳಿಗೆ ಉತ್ತಮವಾಗಿ ನೆರವು ನೀಡುವ ಗುಣಹೊಂದಿದೆ. ಅಲ್ಲದೆ ಫೈನಲ್‌ನಲ್ಲಿ ಕಣಕ್ಕಿಳಿಯುತ್ತಿರುವ ಎರಡು ತಂಡಗಳು ಕೂಡ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ತಂಡಗಳಾಗಿದೆ. ಹಾಗಾಗಿ ಈ ಪಂದ್ಯ ಕೂಡ ಹೈಸ್ಕೋರಿಂಗ್ ಥ್ರಿಲ್ಲರ್ ಆಗಿರುವುದರಲ್ಲಿ ಅನುಮಾನವಿಲ್ಲ. ಇನ್ನು ಪಂದ್ಯದ ಸಂದರ್ಭದಲ್ಲಿ ಮಳೆಯಾಗುವ ಆತಂಕವಿಲ್ಲ. ಹೀಗಾಗಿ ಪಂದ್ಯ ಯಾವುದೇ ಅಡ್ಡಿಯಿಲ್ಲದೆ ನಡೆಯಲಿದೆ.

ಹುಬ್ಳಿ ಟೈಗರ್ಸ್: ಲುವ್ನಿತ್ ಸಿಸೋಡಿಯಾ, ಮೊಹಮ್ಮದ್ ತಾಹಾ, ಕೃಷ್ಣನ್ ಶ್ರೀಜಿತ್, ಸಂಜಯ್ ಅಶ್ವಿನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ (ನಾಯಕ), ಪ್ರವೀಣ್ ದುಬೆ, ಮನ್ವಂತ್ ಕುಮಾರ್ ಎಲ್, ಲವಿಶ್ ಕೌಶಲ್, ಎಂಬಿ ದರ್ಶನ್, ಕೆಸಿ ಕಾರಿಯಪ್ಪ, ವಿಧ್ವತ್ ಕಾವೇರಪ್ಪ
ಬೆಂಚ್: ಮಿತ್ರಕಾಂತ್ ಯಾದವ್, ರಾಜಶೇಖರ್ ಹರಿಕಾಂತ್, ಮಲ್ಲಿಕ್ಸಾಬ್ ಸಿರೂರ್, ಸಂತೋಕ್ ಸಿಂಗ್, ಬೆಂಗಳೂರು ಮೋಹಿತ್, ರೋಹಿತ್ ಕುಮಾರ್, ನಾಗ ಭರತ್, ಶಿವಂ ಎಂ ಬಿ, ನಾಥನ್ ಡಿ'ಮೆಲ್ಲೋ, ಕ್ಲೆಮೆಂಟ್ ರಾಜಮೋಹನ್

ರವಿಕುಮಾರ್ ಸಮರ್ಥ್, ಕೋದಂಡ ಅಜಿತ್ ಕಾರ್ತಿಕ್, ಕರುಣ್ ನಾಯರ್ (ನಾಯಕ), ಮನೋಜ್ ಭಾಂಡಗೆ, ಲಂಕೇಶ್ ಕೆಎಸ್, ಶಿವಕುಮಾರ್ ರಕ್ಷಿತ್ (ವಿಕೆಟ್ ಕೀಪರ್), ಜಗದೀಶ ಸುಚಿತ್, ಮೋನಿಶ್ ರೆಡ್ಡಿ, ಶಶಿಕುಮಾರ್ ಕೆ, ಕುಶಾಲ್ ವಾಧ್ವಾನಿ, ಗೌತಮ್ ಮಿಶ್ರಾ
ಬೆಂಚ್: ಸು ಕಾರ್ತಿಕ್, ಶೋಯೆಬ್ ಮ್ಯಾನೇಜರ್, ಭರತ್ ಧುರಿ, ಮುರಳೀಧರ ವೆಂಕಟೇಶ್, ರಾಹುಲ್ ರಾವತ್, ಶ್ರೀಶ ಆಚಾರ್, ತುಷಾರ್ ಸಿಂಗ್, ಆದಿತ್ಯ ಮಣಿ

Story first published: Tuesday, August 29, 2023, 18:06 [IST]
Other articles published on Aug 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+