Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ತಂಡಗಳಿಗೆ ರಾತ್ರಿ ಅಭ್ಯಾಸಕ್ಕೆ ಮಹಾರಾಷ್ಟ್ರದಿಂದ ಅನುಮತಿ

Maharashtra govt allows IPL teams to practice post 8pm at Wankhede

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಪಂದ್ಯಗಳನ್ನು ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಸಂಪೂರ್ಣ ಅನುಮತಿ ಲಭಿಸಿದೆ. ಮುಂಬೈಯಲ್ಲಿ ಟೂರ್ನಿ ಆಯೋಜನೆಗೆ ಇದ್ದ ಎಲ್ಲಾ ಅಡೆತಡೆಗಳನ್ನು ಸರ್ಕಾರ ಸೋಮವಾರ (ಏಪ್ರಿಲ್ 5) ಬಗೆಹರಿಸಿದೆ.

ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಲೇ ಇವೆ. ಹೀಗಾಗಿ ಪ್ರಕರಣಗಳ ನಿಯಂತ್ರಣಕ್ಕೆ ಮುಂಬೈಯಲ್ಲಿ ಸೋಮವಾರ ರಾತ್ರಿಯಿಂದ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾತ್ರಿ 8 pmನಿಂದ ಬೆಳಗ್ಗೆ 7 am ವರೆಗೆ ಕರ್ಫ್ಯೂ ವಿಧಿಸಲಾಗಿದೆ. ಏಪ್ರಿಲ್ 30ರ ವರೆಗೆ ಈ ಕರ್ಫ್ಯೂ ಮುಂದುವರೆಯಲಿದೆ ಎಂದು ಅಲ್ಲಿನ ಸರ್ಕಾರ ಹೇಳಿತ್ತು.

ಮುಂಬೈಯಲ್ಲಿ ಕರ್ಫ್ಯೂ ವಿಧಿಸಲಾಗಿರುವುದರಿಂದ ಐಪಿಎಲ್ ತಂಡಗಳ ಅಭ್ಯಾಸಕ್ಕೂ ಇದರಿಂದ ತೊಡಕಾಗುವುದೋ ಎಂಬ ಪ್ರಶ್ನೆ ಎದುರಾಗಿತ್ತು. ಆದರೆ ಕರ್ಫ್ಯೂ ಜಾರಿಯಲ್ಲಿದ್ದರೂ ಐಪಿಎಲ್ ತಂಡಗಳಿಗೆ ರಾತ್ರಿ 8 pmನಿಂದ ಅಭ್ಯಾಸ ನಡೆಸಲು ಮಹಾ ಸರ್ಕಾರ ಸಮ್ಮತಿಸಿದೆ.

ಮುಂಬೈ ಸೇರಿ ಇಡೀ ಮಹಾರಾಷ್ಟ್ರದಲ್ಲಿ ಕೊರೊನಾ ಸಂಬಂಧಿಸಿ ನಿರ್ಬಂಧ ಹೇರಲಾಗಿದೆ. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲೂ 10 ಮಂದಿ ಮೈದಾನ ಸಿಬ್ಬಂದಿಗೆ, ಕಾರ್ಯಕ್ರಮ ನಿರ್ವಹಣಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅವರೆಲ್ಲರೂ ಕ್ವಾರಂಟೈನ್‌ನಲ್ಲಿದ್ದರು. ಅಂದ್ಹಾಗೆ, ಏಪ್ರಿಲ್ 9ರಿಂದ ಚೆನ್ನೈನಲ್ಲಿ ಐಪಿಎಲ್ ಪಂದ್ಯಗಳು ಆರಂಭಗೊಳ್ಳಲಿವೆ.

Story first published: Tuesday, April 6, 2021, 8:25 [IST]
Other articles published on Apr 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+