Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ಯಾಟ್ ಬಿಟ್ಟು ಬಂದೂಕು ಹಿಡಿದ ಮಹೇಂದ್ರ ಸಿಂಗ್ ಧೋನಿ

ಬ್ಯಾಟಿನಿಂದ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಈಗ ಗನ್ ಹಿಡಿದು ನಿಂತಿದ್ದಾರೆ.

ಹೌದು, ಗನ್ ಹಿಡಿದ ಮಹೇಂದ್ರ ಸಿಂಗ್ ಧೋನಿ ಶೂಟಿಂಗ್‌ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಬ್ಯಾಟಿನಿಂದ ಕರಾರುವಕ್ಕಾಗಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಧೋನಿ ಬಂದೂಕು ಬಾಜಿಯಲ್ಲೂ ಕೂಡ ಕರಾರುವಕ್ಕಾಗಿ ಗುರಿಯನ್ನು ಹೊಡೆದುರುಳಿಸಿದ್ದಾರೆ.

ಶೂಟರ್ ಗಗನ್ ನಾರಂಗ್ ಅವರ ಪುಣೆಯಲ್ಲಿನ 'ಗನ್ ಫಾರ್ ಗ್ಲೋರಿ' ತರಬೇತಿ ಅಕಾಡೆಮಿಗೆ ಭೇಟಿ ನೀಡಿದ್ದ ಮಹೇಂದ್ರ ಸಿಂಗ್ ಧೋನಿ ಅವರು ಅಲ್ಲಿ ಶೂಟಿಂಗ್ ಮಾಡಿದ್ದಾರೆ.

Mahendra Singh Dhoni shoots gun in Shooting academy

ಥೇಟ್ ವೃತ್ತಿಪರ ಶೂಟರ್‌ನಂತೆ ಕರಾರುವಕ್‌ ಆಗಿ ಎದುರಿಗಿನ ಗುರಿಯನ್ನು ಶೂಟ್ ಮಾಡಿರುವ ಧೋನಿಯ ವಿಡಿಯೋವನ್ನು ನೋಡಿ ಅಭಿಮಾನಿಗಳು ವಾಹ್..ವಾಹ್ ಎಂದಿದ್ದಾರೆ. ತಮ್ಮ ಶೂಟಿಂಗ್ ವಿಡಿಯೋವನ್ನು ಧೋನಿ ಅವರು ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅವರ ಕ್ರೀಡಾ ಒಲವು ವಿಶಾಲವಾದದು. ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟಗಾರರಾಗಿದ್ದರೂ ಸಹ ಫುಟ್‌ಬಾಲ್, ಬ್ಯಾಡ್‌ಮಿಂಟನ್, ಬೈಕ್ ಚಾಲನೆ ಹೀಗೆ ಹಲವು ಹವ್ಯಾಸಗಳನ್ನು ಪೋಷಿಸಿಕೊಂಡು ಬಂದವರು ಈಗ ಅದಕ್ಕೆ ಹೊಸ ಸೇರ್ಪಡೆ ಗನ್ ಶೂಟಿಂಗ್.

Story first published: Wednesday, April 18, 2018, 11:14 [IST]
Other articles published on Apr 18, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+