ಮಹೇಂದ್ರ ಸಿಂಗ್ ಧೋನಿ.. ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಟಗಾರ. ತಮ್ಮ ವಿಶಿಷ್ಠ ಶೈಲಿಯಿಂದಲೇ ಹೆಸರುವಾಸಿಯಾಗಿರುವ ಧೋನಿ, ಮೈದಾನದಲ್ಲಿ ಹತ್ತು ಹಲವು ದಾಖಲೆಗಳ ಒಡೆಯ. ಐಸಿಸಿ ಏಕದಿನ ವಿಶ್ವಕಪ್, ಐಸಿಸಿ ಟಿ20 ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದ ಮೊದಲ ನಾಯಕ. ಮಾಹಿ ಅವರ ಸ್ಟೈಲ್ ಹಾಗೂ ಲುಕ್‌ಗೆ ಅಭಿಮಾನಿಗಳು ಫಿದಾ ಆಗುತ್ತಾರೆ.
ಮಹೇಂದ್ರ ಸಿಂಗ್ ಧೋನಿ ಯಾವುದೇ ಸ್ಟೈಲ್ ಮಾಡಿದ್ರೂ ಸಹ ಅದನ್ನು ಅನುಕರಣೆ ಮಾಡುವ ಒಂದು ಅಭಿಮಾನಿಗಳ ವರ್ಗವಿದೆ. ಮಾಹಿ ತಮ್ಮ ಆಟದ ಮೂಲಕ ಅಭಿಮಾನಿಗಳಲ್ಲಿ ಎಷ್ಟು ಹತ್ತಿರವಾಗಿದ್ದಾರೋ ಅಷ್ಟೇ ತಮ್ಮ ನಡತೆಯಿಂದಲೂ ಹೆಸರುವಾಸಿ. ಮಾಹಿ ಜೊತೆಗೆ ಒಂದು ಫೋಟೋ ಕ್ಲಿಕಿಸಲು ಅದೆಷ್ಟೋ ಅಭಿಮಾನಿಗಳು ಕಾಯುತ್ತಿರುತ್ತಾರೆ. ಮಾಹಿ ಅಂಗಳ ಬಿಟ್ಟು ವರ್ಷಗಳೇ ಕಳೆದಿರಬಹುದು ಆದರೆ, ಅವರ ಕ್ರೇಜ್ ಇನ್ನು ಕಡಿಮೆ ಆಗಿಲ್ಲ.

ಮಹೇಂದ್ರ ಸಿಂಗ್ ಧೋನಿ, ಸದ್ಯ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಧೋನಿ, ಅಭಿಮಾನಿಗಳ ಪ್ರೀತಿಯ ತಲೈವಾ. ಅಭಿಮಾನಿಗಳು ಎಲ್ಲೇ ಸಿಕ್ಕರೂ ಧೋನಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಅವಕಾಶವನ್ನು ಬಿಡುವುದೇ ಇಲ್ಲ. ಮಾಹಿ, ಅವರು ಅಭಿಮಾನಿಗಳೊಂದಿಗೆ ತೆಗೆಸಿಕೊಂಡ ಫೋಟೋ ಹಾಗೂ ವಿಡಿಯೋಗಳು ಆಗಾಗ್ಗೆ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತವೆ. ಈಗಲೂ ಮಾಹಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೈರಲ್ ಫೋಟೋದಲ್ಲಿ, ಮಾಹಿ ತಮ್ಮ ಅಭಿಮಾನಿಗಳೊಂದಿಗೆ ಕಾಣಿಸಿಕೊಂಡಿದ್ದಾರೆ.
ಮಾಹಿ ತಮ್ಮ ಅಭಿಮಾನಿಗಳೊಂದಿಗೆ ಫೋಟೋಗೆ ಪೋಸ್ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೈರಲ್ ಫೋಟೋದಲ್ಲಿ, ಮಕ್ಕಳನ್ನು ಹೊರತುಪಡಿಸಿ, ಬೇರೆ ಬೇರೆ ವಯಸ್ಸಿನ ಮಾಹಿ ಅಭಿಮಾನಿಗಳು ಇದ್ದಾರೆ. ಮಾಹಿ ಈ ಫೋಟೋದಲ್ಲಿ ಟಿಶರ್ಟ್ ಹಾಗೂ ಗ್ರೇ ಕಲರ್ ಪ್ಯಾಂಟ್ ಹಾಕಿಕೊಂಡಿದ್ದು, ಸನ್ ಗ್ಲಾಸ್ ಹಾಕಿಕೊಂಡಿದ್ದಾರೆ.
ತಮ್ಮ ನೆಚ್ಚಿನ ಕ್ರಿಕೆಟ್ ಪ್ಲೇಯರ್‌ನನ್ನು ಭೇಟಿಯಾದ ಖುಷಿ ಅಭಿಮಾನಿಗಳ ಮುಖದಲ್ಲಿ ಎದ್ದು ಕಾಣುತ್ತಿದೆ. ಮಾಹಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಬಳಕೆದಾರರು ತರಹೆವಾರಿ ಕಮೆಂಟ್ ಮಾಡಿದ್ದಾರೆ.
ಭಾರತ ಕಂಡ ಯಶಸ್ವಿ ನಾಯಕರಲ್ಲಿ ಮಹೇಂದ್ರ ಸಿಂಗ್ ಧೋನಿಗೂ ಸ್ಥಾನ. ಮಹೇಂದ್ರ ಸಿಂಗ್ ಧೋನಿ ಯುವ ಆಟಗಾರರನ್ನು ಪ್ರೋತ್ಸಾಹಿಸುವ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಐಸಿಸಿ ಎಲ್ಲ ಟ್ರೋಫಿಗಳನ್ನು ಗೆದ್ದ ನಾಯಕ, ಟೀಮ್ ಇಂಡಿಯಾವನ್ನು ಟೆಸ್ಟ್‌ನಲ್ಲಿ ನಂಬರ್ 1 ಶ್ರೇಯಾಂಕಕ್ಕೆ ಮುಟ್ಟಿಸಿದ್ದಾರೆ. ಮಾಹಿ ಮ್ಯಾಜಿಕ್ ಐಪಿಎಲ್‌ನಲ್ಲಿ ಇನ್ನು ವರ್ಕ್‌ಔಟ್ ಆಗುತ್ತಿದೆ. ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದು ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದೆ. ಈ ಬಾರಿಯ ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಅಂಗಳಕ್ಕೆ ಇಳಿಯುತ್ತಾರೋ, ಇಲ್ಲವೋ ಎಂಬ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ.